Advertisement

ಆರೋಗ್ಯ ಕ್ಷೇತ್ರಕ್ಕೆ ಪ್ರಾಶಸ್ತ್ಯ ಅಗತ್ಯ; ಡಾ|ಹೆಗ್ಗಡೆ

12:14 AM Nov 28, 2021 | Team Udayavani |

ಮಂಗಳೂರು: ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸರಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ದಿ ಮಂಗಳೂರು ಮೆಡಿಕಲ್‌ ರಿಲೀಫ್‌ ಸೊಸೈಟಿ (ಎಂಎಂಆರ್‌ಎಸ್‌) ಅಧ್ಯಕ್ಷರೂ ಆಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಐಎಂಎ ಭವನದಲ್ಲಿ ಎಂಎಂಆರ್‌ಎಸ್‌ ಮತ್ತು ಐಎಂಎ ಮಂಗಳೂರು ಶಾಖೆ ವತಿಯಿಂದ ಶನಿವಾರ ಜರಗಿದ ಎಂಎಂಆರ್‌ಎಸ್‌ ಸುವರ್ಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವ‌ರು ಮಾತನಾಡಿದರು.

ಎಂಎಂಆರ್‌ಎಸ್‌ 50 ವರ್ಷಗಳಿಂದ ಸಾರ್ಥಕ ಕಾರ್ಯ ಮಾಡುತ್ತಾ ಬಂದಿದೆ. ಮುಂದೆಯೂ ಬಹಳಷ್ಟು ಸೇವೆ ಲಭಿಸಲಿ ಎಂದವರು ಹಾರೈಸಿದರು.

ಮಹತ್ತರ ಕೊಡುಗೆ
ಮಾಹೆ ಸಹ ಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಮಾತನಾಡಿ, ಮಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ಇನ್ನೂ ಅಭಿವೃದ್ಧಿ ಕಂಡಿರದ ಕಾಲಘಟ್ಟ ದಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ತರುವಲ್ಲಿ ಎಂಎಂಆರ್‌ಎಸ್‌ ಮಾಡಿರುವ ಕಾರ್ಯ ಉದಾತ್ತವಾದುದು. ಇದರಲ್ಲಿ ಡಾ| ಕೆ.ಆರ್‌. ಶೆಟ್ಟಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

ನಿಟ್ಟೆ ವಿ.ವಿ. ಕುಲಾಧಿಪತಿ ವಿನಯ ಹೆಗ್ಡೆ ಮಾತನಾಡಿ, ಮಂಗಳೂರು ಸೂಪರ್‌ ಸ್ಪೆಷಾಲಿಟಿ ಸೆಂಟರ್‌ ಆಗಿ ಮೂಡಿಬರುವಲ್ಲಿ ಎಂಎಂಆರ್‌ಎಸ್‌ ಹಾಗೂ ಡಾ| ಕೆ.ಆರ್‌. ಶೆಟ್ಟಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು.

Advertisement

ಯೇನಪೊಯ ವಿ.ವಿ. ಕುಲಾಧಿಪತಿ ವೈ. ಅಬ್ದುಲ್‌ ಕುಂಞಿ ಮಾತನಾಡಿ, ಎಂಎಂಆರ್‌ಎಸ್‌ 50 ವರ್ಷಗಳಿಂದ ವೈದ್ಯಕೀಯ ಕ್ಷೇತ್ರಕ್ಕೆ ಉತ್ತಮ ಸೇವೆ ನೀಡುತ್ತಾ ಬಂದಿದೆ ಎಂದರು.

ಇದನ್ನೂ ಓದಿ:ಹೊಸ ರೂಪಾಂತರಿಯಿಂದ ಆತಂಕ :  ಹಲವು ದೇಶಗಳಲ್ಲಿ ಕಟ್ಟೆಚ್ಚರ, ವಿಮಾನಯಾನಕ್ಕೆ ನಿಷೇಧ

ಸಮ್ಮಾನ
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಡಾ| ಕೆ.ಆರ್‌. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.

ವೆನ್ಲಾಕ್ ಡಿಎಂಒ ಡಾ| ಸದಾಶಿವ ಶಾನ್‌ಭೋಗ್‌, ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ| ಸತ್ಯಮೂರ್ತಿ ಐತಾಳ ಉಪಸ್ಥಿತರಿದ್ದರು. ಎಂಎಂಆರ್‌ಎಸ್‌ ಉಪಾಧ್ಯಕ್ಷ, ಕೆಎಂಸಿ ಡೀನ್‌ ಡಾ| ವೆಂಕಟ್ರಾಯ ಪ್ರಭು ಸ್ವಾಗತಿಸಿದರು.

ಕಾರ್ಯಕ್ರಮ ಸಂಯೋಜಕ ಡಾ| ಸಿ.ಕೆ. ಬಲ್ಲಾಳ್‌ ಅವರು, ಕಳೆದ 50 ವರ್ಷಗಳಲ್ಲಿ ಸಂಸ್ಥೆ ಸಾಗಿಬಂದ ಹಾದಿಯನ್ನು ವಿವರಿಸಿದರು. ಲೇಡಿಗೋಶನ್‌ ಆಸ್ಪತ್ರೆಗೆ ಸಂಸ್ಥೆಯ ವತಿಯಿಂದ ಸೂಪರ್‌ ಸ್ಪೆಷಾಲಿಟಿ ಪ್ರಸೂತಿ ವಿಭಾಗಕ್ಕೆ ಸೌಲಭ್ಯ ನೀಡುವ ಯೋಜನೆ ಬಗ್ಗೆ ಸೊಸೈಟಿಯ ಕಾರ್ಯದರ್ಶಿ ಡಾ| ಪ್ರಿಯಾ ಬಲ್ಲಾಳ್‌ ವಿವರಿಸಿದರು. ಖಜಾಂಚಿ ಡಾ| ಅಜಯ್‌ ಕಾಮತ್‌ ನಿರೂಪಿಸಿ ವಂದಿಸಿದರು.

ಧರ್ಮಸ್ಥಳದಿಂದ 2 ಡಯಾಲಿಸಿಸ್‌ ಯಂತ್ರ
ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಜಿಲ್ಲಾ ವೆನ್ಲಾಕ್ ಗೆ 2 ಡಯಾಲಿಸಿಸ್‌ ಯಂತ್ರ ಗಳನ್ನು ನೀಡುತ್ತಿದ್ದು ಕೆಲವೇ ದಿನಗಳಲ್ಲಿ ಆಸ್ಪತ್ರೆಗೆ ಬರಲಿದೆ. ವೆನ್ಲಾಕ್ ನಲ್ಲಿ ರೋಗಿಗಳ ಜತೆ ಬರುವವರಿಗೆ ಉಳಿದುಕೊಳ್ಳಲು ಕ್ಷೇತ್ರದಿಂದ 2 ಧರ್ಮಶಾಲೆಗಳನ್ನು ಈಗಾಗಲೇ ನಿರ್ಮಿಸಿಕೊಡಲಾಗಿದೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next