Advertisement

Agriculture: ಕೃಷಿ ಇಲಾಖೆಗೆ 2,000 ಹುದ್ದೆಗಳ ನೇಮಕಕ್ಕೆ ಆದ್ಯತೆ: ಎನ್‌.ಚೆಲುವರಾಯಸ್ವಾಮಿ

12:00 AM Oct 15, 2023 | Team Udayavani |

ಬೆಳ್ತಂಗಡಿ: ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಧ್ಯತೆ ನೀಡಲಾಗಿದ್ದು ಪ್ರಥಮ ಹಂತದಲ್ಲಿ ಕೆಪಿಎಸ್‌ಸಿ ಮೂಲಕ 350 ಹುದ್ದೆಗಳ ಸೃಜಿಸಲಾಗುವುದು. ಇನ್ನು 2000 ಹುದ್ದೆ ಅಗತ್ಯವಿರುವ ಕುರಿತು ಆರ್ಥಿಕ ಇಲಾಖೆಗೆ ಕೇಳಲಾಗಿದೆ. ಆದ್ಯತೆ ಮೇರೆಗೆ ಮೊದಲನೇ ಹಂತದಲ್ಲಿ ಅತೀ ಶೀಘ್ರದಲ್ಲಿ ನೇಮಕ ಪ್ರಕ್ರಿಯೆ ನಡೆಯಲಿದೆ ಎಂದು ಕೃಷಿ ಸಚಿವ  ಹೇಳಿದರು.

Advertisement

ಶೇ .0 ಬಡ್ಡಿಯಲ್ಲಿ 5 ಲಕ್ಷ ರೂ. ಕೃಷಿ ಸಾಲ ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೆ ಸರಕಾರದಿಂದ ಆಗಸ್ಟ್‌ನಲ್ಲೇ ಎಲ್ಲ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಆದೇಶ ಹೊರಡಿಸಿದೆ. ಮಹಿಳಾ ಸ್ವಸಹಾಯ ಸಂಘಗಳಿಗೂ ಬಡ್ಡಿಯಿಲ್ಲದೆ 2 ಮತ್ತು 5 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ. ಸಹಕಾರಿ ಬ್ಯಾಂಕ್‌ ವ್ಯವಹಾರ ಹೇಗೆ ನಡೆಸುತ್ತಿದ್ದಾರೆ ಅದರ ಮೇಲೆ ಅವಲಂಬಿತವಾಗಿದ್ದು, ಅನೇಕ ಕಾರಣಗಳಿಂದ ಕೆಲವೆಡೆ ವ್ಯತ್ಯಾಸ ಆಗಿರಬಹುದು. ಈ ಕುರಿತು ಎಲ್ಲ ಜಿಲ್ಲಾ ಬ್ಯಾಂಕ್‌ಗಳು ಸರಿಯಾದ ರೀತಿ ವಿತರಣೆ ಮಾಡಬೇಕೆಂದು ಸರಕಾರ ಈಗಾಗಲೆ ಸೂಚನೆ ನೀಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next