Advertisement
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿ ಕಾರ, ಲಘು ಉದ್ಯೋಗ ಭಾರತಿ- ಕರ್ನಾಟಕ, ಐಎಂಎಫ್ ಫೌಂಡೇ ಶನ್ ವತಿಯಿಂದ ಶುಕ್ರವಾರ ಕಿದಿಯೂರು ಹೊಟೇಲ್‌ನ ಶೇಷಶಯನ ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಕರ್ನಾಟಕದ ಕೃಷಿ ಉತ್ಪನ್ನ ಉತ್ತೇ ಜನಕ್ಕೆ ಹಮ್ಮಿಕೊಂಡಿದ್ದ ರಫ್ತುದಾರರ ಸಮಾವೇಶ ಹಾಗೂ ಪ್ರದರ್ಶನ ಉದ್ಘಾ ಟಿಸಿ ಅವರು ಮಾತನಾಡಿದರು.
Related Articles
Advertisement
ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತ ಡಾ| ಎಂ.ವಿ.ವೆಂಕಟೇಶ್ ಮಾತನಾಡಿ, ರೈತರಿಗೆ ಉತ್ಪನ್ನದ ಮೌಲ್ಯವರ್ಧನೆಯ ಬಗ್ಗೆ ತಿಳಿಸಬೇಕು. ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವ ನಿಟ್ಟಿನಲ್ಲಿ ಸರಕಾರದಿಂದಲೇ ಹೊಸ ಬ್ರ್ಯಾಂಡಿಂಗ್ ವ್ಯವಸ್ಥೆ ಮಾಡಲಾಗುತ್ತಿದ್ದು ಶೀಘ್ರವೇ ಬಿಡುಗಡೆಯಾಗಲಿದೆ ಎಂದರು.ರಾಜ್ಯ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ| ಎ.ಬಿ.ಪಾಟೀಲ್ ಮಾತನಾಡಿ, ಕೃಷಿ ಉತ್ಪನ್ನಗಳ ರಫ್ತಿ ನಲ್ಲಿ ಭಾರತ ಸಾಕಷ್ಟು ಮುಂದಿದೆ. 2021-22ರಲ್ಲಿ 50 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನ ರಫ್ತು ಮಾಡಿ ಜಾಗತಿಕ ಮಟ್ಟದಲ್ಲಿ 8ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು. ಲಘು ಉದ್ಯೋಗ ಭಾರತಿ- ಕರ್ನಾಟಕದ ಅಧ್ಯಕ್ಷ ಸಚಿನ್ ಬಿ. ಸಬಿ°ಸ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆ. ನಾರಾಯಣ ಪ್ರಸನ್ನ, ಗೌರವ ಕಾರ್ಯದರ್ಶಿ ಭೋಜರಾಜ ಸಿ.ಎನ್., ವಾಣಿಜ್ಯ ಇಲಾಖೆಯ ಅಪೇಡ ಅಧ್ಯಕ್ಷ ಡಾ| ಎಂ. ಲಿಂಗ ಮುತ್ತು, ನಬಾರ್ಡ್ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ವ್ಯವಸ್ಥಾಪಕ ಟಿ. ರಮೇಶ್, ಕೆಎಪಿಪಿಇಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ಪರ್ವೇಜ್ ಬಂಟನಾಳ ಉಪಸ್ಥಿತರಿದ್ದರು. ವಿವಿಧ ಉತ್ಪನ್ನಗಳ ಪ್ರದರ್ಶನ
ವಿವಿಧ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಸಿದ್ಧಪಡಿಸಿರುವ ವಿವಿಧ ಸಂಸ್ಥೆಗಳ, ಸ್ವ-ಸಹಾಯ ಸಂಘಗಳ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವಿತ್ತು. ಶುದ್ಧ ತೆಂಗಿನ ಎಣ್ಣೆ, ಮೀನಿನ ಚಟ್ನಿ, ಹಪ್ಪಳ, ಸಿಗಡಿ ಉಪ್ಪಿನಕಾಯಿ, ಸಿರಿಧಾನ್ಯಗಳು, ತೆಂಗಿನಕಾಯಿಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.