Advertisement

ಜಲ ಸಂರಕ್ಷಣೆಗೆ ಆದ್ಯತೆ ನೀಡಿ : ಹೊಸಮನಿ

08:23 PM Mar 24, 2021 | Team Udayavani |

ವಿಜಯಪುರ: ಐತಿಹಾಸಿಕ ಸ್ಮಾರಕಗಳ ನಗರವಾದ ವಿಜಯಪುರದಲ್ಲಿ ತಾಜಬಾವಡಿ ಸೇರಿ ಅನೇಕ ಜಲ ಸಂರಕ್ಷಣೆ ಕೆರೆಗಳಿವೆ. ಪಾರಂಪರಿಕ ಕೆರೆಗಳನ್ನು, ಅಮೂಲ್ಯವಾದ ಜಲ ಹಾಗೂ ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಇಂಥ ಕೆರೆಗಳನ್ನು ಸ್ವತ್ಛಗೊಳಿಸಿ ಸಾರ್ವಜನಿಕರಿಗೆ ಅಲ್ಲಿನ ನೀರು ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಹೇಳಿದರು.

Advertisement

ನಗರದ ಕಾಕಾ ಕಾರ್ಖಾನೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸ್ಪಂದನಾ ಸ್ವಯಂ ಸೇವಾ ಸಂಸ್ಥೆ, ಜೈನ್‌ ಇರಿಗೇಶನ್‌ ಸಿಸ್ಟಮ್‌ ಲಿ. ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೂ. 5ರಂದು ಎಲ್ಲ ಇಲಾಖೆಗಳು ಸೇರಿ ಪರಿಸರ ಮಾಲಿನ್ಯ ತಡೆಗಟ್ಟಲು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಭವಿಷ್ಯದ ಪೀಳಿಗೆಗೆ ನಾವು ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸು, ಶುದ್ಧವಾದ ಗಾಳಿ, ನಿರ್ಮಲ ನೀರು, ಉತ್ತಮ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕಿದೆ ಎಂದರು. ಕ.ನ.ನಿ.ಸ.ಒ.ಚ. ಮಂಡಳಿ ವಿಭಾಗ ಕಾರ್ಯಪಾಲಕ ಅಭಿಯಂತರ ಎಸ್‌.ಎಸ್‌. ಪಟ್ಟಣಶೆಟ್ಟಿ ಮಾತನಾಡಿ, ಸಮೂಹ ಮಾಧ್ಯಮಗಳು ನೀರಿನ ಬಳಕೆ, ಸಂರಕ್ಷಣೆ ಬಗ್ಗೆ ಪ್ರಚಾರ ಹಾಗೂ ಜಾಗೃತಿ ಕಾರ್ಯಕ್ರಮ ರೂಪಿಸಿ ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ಸಹ ಸಂಶೋಧನಾ ನಿರ್ದೇಶಕ ಅಶೋಕ ಸಜ್ಜನ ಮಾತನಾಡಿದರು. ಸಿವಿಲ್‌ ಎಂಜಿನಿಯರಿಂಗ್‌ ವಿಭಾಗ ಸಿಕ್ಯಾಬ್‌ ಕಾಲೇಜು ಮುಖ್ಯಸ್ಥ ಎಸ್‌. ಜೆ. ಅರವೇಕರ, ಬಿಎಲ್‌ಡಿಇ ಸಂಸ್ಥೆ ಸಹಾಯಕ ಪ್ರಾಧ್ಯಾಪಕಿ ಅನುರಾಧ ಟಂಕಸಾಲಿ ಮತ್ತು ಮಹಾನಗರ ಪಾಲಿಕೆ ಕಾನೂನು ಸಲಹೆಗಾರ ಐ.ಎಂ. ಇಂಡಿಕರ ಇದ್ದರು. ಉಮೇಶ ಪಂಚಾಳ, ರಾಹುಲ್‌ ಪಂಚಾಳ ಪ್ರಾರ್ಥಿಸಿದರು. ಸಹಾಯಕ ಕಾರ್ಯಪಾಲಕ ಅಭಿಯಂತರ ಬಿ.ವೈ.ನದಾಫ್‌ ನಿರೂಪಿಸಿದರು. ಎಂ.ಎಸ್‌. ದೇವರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next