Advertisement
ಸಮೀಪದ ಮುದ್ದಾಪುರ ಮತ್ತು ಹೆಬ್ಟಾಳ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನತೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಬಹುದಿನಗಳಿಂದ ಕನಸಾಗಿರುವ ಮಸಾರಿ ಹಳ್ಳಕ್ಕೆ ಲೋ ಲೆವಲ್ ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳುತ್ತಿದ್ದು, ಪ್ರತಿಯೊಬ್ಬ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಹೇಳಿದರು.
ಅಂದಾಜು ಮೊತ್ತ 10 ಲಕ್ಷ, ಹೆಬ್ಟಾಳ ಗ್ರಾಮದ ಶಂಕರೆಪ್ಪ ತಳವಾರ ಅವರಮನೆಯಿಂದ ಹಳ್ಳದ ವರೆಗೆ ಒಳ ರಸ್ತೆ ಸುಧಾರಣೆ 10 ಲಕ್ಷ ರೂ., ಹೆಬ್ಟಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ 17 ಲಕ್ಷ ರೂ., ಲಕ್ಷಾನಟ್ಟಿ ಗ್ರಾಮದ ಎಲ್‌ಪಿಎಸ್ ಶಾಲೆ 2 ಕೊಠಡಿ ನಿರ್ಮಾಣ ಅಂದಾಜು ಮೊತ್ತ 21 ಲಕ್ಷ ರೂ., ಜಿಆರ್‌ಬಿಸಿಯ ಮುಖ್ಯ ಕಾಲುವೆಯ ಸೇತುವೆ ನಿರ್ಮಾಣ ಅಂದಾಜು ಮೊತ್ತ 75 ಲಕ್ಷ ರೂ.ಮಂಜೂರು ಮಾಡಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಆರ್.ಎಸ್. ತಳೇವಾಡ, ಹಣಮಂತ ತುಳಸಿಗೇರಿ, ಯುವ ಧುರಿಣ ಅರುಣ ಕಾರಜೋಳ, ಶಿವನಗೌಡನಾಡಗೌಡ, ರಾಜು ಯಡಹಳ್ಳಿ, ಸಂಜಯ ತಳೇವಾಡ, ನಾಗಪ್ಪ ಅಂಬಿ, ಶ್ರೀಕಾಂತ ಗುಜ್ಜನ್ನವರ, ಪರಶುರಾಮ ಹಂಚಾಟೆ, ನಬಿ ಹಾಜಿಬಾಯಿ, ಕಲ್ಲಪ್ಪಸಬರದ, ಎಚ್.ಎನ್. ವಜ್ಜರಮಟ್ಟಿ, ಕೆ.ಜಿ. ವಜ್ಜರಮಟ್ಟಿ, ಗ್ರಾಪಂ ಅಧ್ಯಕ್ಷರಾದ ಅಮೃತಾ ಕತ್ತಿ, ಪ್ರಕಾಶ ಸಣ್ಣತಮ್ಮಪ್ಪಗೋಳ, ಲಕ್ಷಾನಟ್ಟಿ ಪಿಕೆಪಿಎಸ್ ಅಧ್ಯಕ್ಷ ಶಿವನಗೌಡ ಪಾಟೀಲ, ಯಮನಪ್ಪಹೊರಟ್ಟಿ, ಗಡ್ಡೆಪ್ಪಬಾರಕೇರ, ಗಂಗಾಧರ ಗಾಣಿಗೇರ, ಎಇಒ ಕಿರಣ ಘೋರ್ಪಡೆ, ಉಪ ತಹಶೀಲ್ದಾರ್ ಮಹೇಶ ಪಾಂಡವ, ಪಿಡಬ್ಲೂಡಿ ಅಭಿಯಂತರ ಸೋಮಶೇಖರ ಸಾವನ್, ವಿನೋದ ಸಂಕೆನ್ನವರ, ಅಶೋಕ ಕ್ಯಾದಗೇರಿ, ಚಿಂಚಖಂಡಿ ಬಿ.ಕೆ, ಕಸಬಾ ಜಂಬಗಿ, ಮುದ್ದಾಪುರ, ಹೆಬ್ಟಾಳ, ದಾದನಟ್ಟಿ, ಲಕ್ಷಾನಟ್ಟಿ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಹಾಗೂ ಆರ್‌ಎಸ್ ಡಬ್ಲೂ, ಪಿಡಬ್ಲೂಡಿ, ಜಿಆರ್‌ಬಿಸಿ, ಪಿಆರ್ ಇಡಿ ಹಾಗೂ ನಿರ್ಮಿತಿ ಕೇಂದ್ರ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.