Advertisement

ಎಚ್‌ಐವಿ ಸೋಂಕಿತರಿಗೆ ನಿವೇಶನಕ್ಕೆ ಆದ್ಯತೆ ನೀಡಿ: ಪ್ರೀತಿ ಗೆಹಲೋತ್‌

12:56 AM Feb 18, 2020 | mahesh |

ಉಡುಪಿ: ಜಿಲ್ಲೆಯ ಎಚ್‌ಐವಿ ಸೋಂಕಿತರಿಗೆ ರಾಜೀವ್‌ ಗಾಂಧಿ ವಸತಿ ನಿಗಮದ ಸಹಯೋಗದಲ್ಲಿ ವಸತಿ ಕಲ್ಪಿಸಲು ಅವಕಾಶದ್ದು, ಆದ್ಯತೆಯ ಮೇರೆಗೆ ನಿವೇಶನ ಒದಗಿಸುವಂತೆ ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಸೋಮವಾರ ಜಿ.ಪಂ. ಕಚೇರಿಯಲ್ಲಿ ನಡೆದ ಎಚ್‌ಐವಿ ಸೋಂಕಿತರಿಗೆ ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ಒದಗಿಸಿರುವ ಕುರಿತ, ಸಾಮಾಜಿಕ ಸವಲತ್ತುಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜೀವ್‌ ಗಾಂಧೀ ವಸತಿ ನಿಗಮದಲ್ಲಿ ಎಚ್‌ಐವಿ ಸೋಂಕಿತರಿಗೆ ವಸತಿ ಒದಗಿಸಲು ಅವಕಾಶವಿದೆ. ಜಿಲ್ಲೆಯಲ್ಲಿ 2014-15ರಲ್ಲಿ ನಿಗಮದಿಂದ 162 ಗುರಿ ನೀಡಿದ್ದು, 36 ಮಂದಿಗೆ, 2016-17ರಲ್ಲಿ 20 ಗುರಿ ಇದ್ದು 9 ಮಂದಿಗೆ, 2017-18ರಲ್ಲಿ 33 ಗುರಿ ಇದ್ದು 4 ಮಂದಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ಪ್ರೀತಿ ಗೆಹಲೋತ್‌ ಹೇಳಿದರು.

ಬಸ್‌ ಪಾಸ್‌ ಸೌಲಭ್ಯ ಆರ್‌ಟಿಒ ಹಾಗೂ ಕೆನರಾ ಬಸ್‌ ಮಾಲಕ ಸಂಘದ ಸಹಕಾರ ದಿಂದ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಸಹಯೋಗ ದೊಂದಿಗೆ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಎಚ್‌ಐವಿ ಸೋಂಕಿತರಿಗೆ ಶೇ. 50 ರಿಯಾಯಿತಿ ದರದ ಬಸ್‌ ಪಾಸ್‌ ಕಲ್ಪಿಸಲಾಗಿದೆ. 2010ರಿಂದ 2019ರ
ತನಕ ಎಲ್ಲ ಅರ್ಜಿದಾರ ಫ‌ಲಾನುಭವಿ ಗಳು ಬಸ್‌ಪಾಸ್‌ ಸೌಲಭ್ಯ ಪಡೆದಿದ್ದಾರೆ. 2019 -2020 ರಲ್ಲಿ 54 ಅರ್ಜಿಗಳು ಬಂದಿದ್ದು, 27 ಫ‌ಲಾನುಭವಿಗಳು ಬಸ್‌ ಪಾಸ್‌ ಸೌಲಭ್ಯ ಪಡೆದಿರುವ ಕುರಿತು ಮಾಹಿತಿ ಪಡೆದ ಸಿಇಒ ಬಾಕಿ ಉಳಿದಿರುವ ಅರ್ಜಿಗಳನ್ನು ಶೀಘ್ರದಲ್ಲಿ ಪರಿಗಣಿಸಿ ಫ‌ಲಾನುಭವಿಗಳಿಗೆ ನೀಡು ವಂತೆ ಸೂಚಿಸಿದರು.

ಸ್ವ ಉದ್ಯೋಗ ತರಬೇತಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಧನಶ್ರೀ ಯೋಜನೆಯಡಿ ಮಹಿಳಾ ಅಭಿವೃದ್ಧಿ ನಿಗಮದಿಂದ ಎಚ್‌ಐವಿ ಸೋಂಕಿತ ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಶೇ. 50 ಸಬ್ಸಿಡಿಯ ಸಾಲ ನೀಡಲಾಗುತ್ತದೆ. 2019-20 ರಲ್ಲಿ ಈ ಯೋಜನೆಯಡಿ 21 ಗುರಿ ನೀಡಿದ್ದು, 19 ಫ‌ಲಾನುಭಗಳಿಗೆ ಸೌಲಭ್ಯ ದೊರೆತಿದ್ದು, ಈ ಯೋಜನೆಯ ಸೌಲಭ್ಯ ಎಲ್ಲ ಫ‌ಲಾನುಭವಿಗಳಿಗೆ ಸಿಗುವಂತಾಗಬೇಕು ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ಕಾವೇರಿ, ಜಿಲ್ಲಾ ಏಡ್ಸ್‌ ನಿಯಂತ್ರಣಾ ಧಿಕಾರಿ ಡಾ| ಚಿದಾನಂದ ಸಂಜು, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶೇಷಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ್‌ ಉಪಸ್ಥಿತರಿದ್ದರು.

Advertisement

7,752 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಕಾರ್ಯಕ್ರಮದಡಿ 2008-2020 ಜನವರಿ ತನಕ ಒಟ್ಟು 4,00,386 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.ಅದರಲ್ಲಿ 7,752 ಎಚ್‌ಐವಿ ಸೋಂಕು ಪತ್ತೆಯಾಗಿದೆ. ಗರ್ಭಿಣಿಯರಲ್ಲಿ 245 ಪ್ರಕರಣ, ಮಕ್ಕಳಲ್ಲಿ 203, ಮಂಗಳಮುಖೀಯರಲ್ಲಿ
7 ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next