Advertisement

ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

09:33 PM Oct 29, 2019 | Lakshmi GovindaRaju |

ಮೈಸೂರು: ಮಕ್ಕಳು ಪಠ್ಯದ ಕಲಿಕೆಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೂ ನೀಡಿ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಂಡು ಸಾಧಕರಾಗಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

Advertisement

ಮೈಸೂರು ಆರ್ಟ್‌ ಗ್ಯಾಲರಿ ಆಶ್ರಯದಲ್ಲಿ ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬಸವಣ್ಣನ ಭಾವಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಠ್ಯದಲ್ಲಷ್ಟೇ ಮ್ಕಕಳು ಮುಳುಗಿ ಹೋಗದೆ ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತ, ಕ್ರೀಡೆ ಸೇರಿದಂತೆ ಪಠ್ಯೇತರವಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸದಾ ಕ್ರಿಯಾಶೀಲರಾಗಿದ್ದುಕೊಂಡು ಯಾವುದಾದರೂ ಒಂದು ಕ್ಷೇತ್ರವನ್ನು ಪ್ರಧಾನವಾಗಿ ಆಯ್ಕೆ ಮಾಡಿಕೊಂಡು ಓದಿನ ಜೊತೆಯಲ್ಲೇ ಸಾಧನೆ ಮಾಡಬೇಕೆಂದರು.

ಜಾತ್ಯತೀತ ಸಮಾಜದ ಆಶಯದಲ್ಲಿ ವಚನಗಳ ಮೂಲಕ ಹೊಸದೊಂದು ಕ್ರಾಂತಿಯನ್ನು ಮಾಡಿದ ಕ್ರಾಂತಿಯೋಗಿ ಬಸವಣ್ಣನವರ ಭಾವಚಿತ್ರಕ್ಕೆ ಬಣ್ಣಹಚ್ಚುವ ಸ್ಪರ್ಧೆಯೊಡನೆ ಬಸವತತ್ವವನ್ನು ಮಕ್ಕಳಲ್ಲಿ ಬಿತ್ತುವ ಮತ್ತು ಚಿತ್ರಕಲಾಸಕ್ತಿಯನ್ನು ಬೆಳೆಸುವ ಕೈಂಕರ್ಯವನ್ನು ಮಾಡುತ್ತಿರುವ ಕಲಾವಿದ ಎಲ್‌. ಶಿವಲಿಂಗಪ್ಪನವರ ಬಸವ ಚಿಂತನೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು.

ಜಾತಿ, ಮತ, ಧರ್ಮ ಮೀರಿದ ಮಾನವ ಬಂಧುತ್ವದ ಬದುಕು ನಮ್ಮದಾಗಬೇಕು. ಈ ದಿಸೆಯಲ್ಲಿ ಶರಣರ ವಚನಗಳನ್ನು ಅದರಲ್ಲೂ ವಿಶೇಷವಾಗಿ ಬಸವಣ್ಣನವರ ವಚನಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ದಿನಕ್ಕೊಂದು ವಚನ ಓದಿ ಕಂಠಪಾಠ ಮಾಡಿಕೊಂಡರೂ ಸಾಕು.

Advertisement

ವರ್ಷದಲ್ಲಿ ನೂರಾರು ವಚನಗಳನ್ನು ತಮ್ಮ ಜ್ಞಾನ ಭಂಡಾರದಲ್ಲಿ ತುಂಬಿಕೊಂಡು ಜ್ಞಾನಶೀಲರಾಗಬಹುದೆಂದು ಹೇಳಿದರು. ಬಸವಣ್ಣನವರ ವಿವಿಧ ಬಗೆಯ ರೇಖಾಚಿತ್ರಗಳಿಗೆ ಬಣ್ಣ ಹಚ್ಚಿ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಮೈಸೂರು ಆರ್ಟ್‌ ಗ್ಯಾಲರಿಯಿಂದ ಸಂಸ್ಥಾಪಕ ಅಧ್ಯಕ್ಷ ಎಲ್‌. ಶಿವಲಿಂಗಪ್ಪ ಬಹುಮಾನ ನೀಡಿ ಗೌರವಿಸಿದರು.

ಅಕ್ಕನ ಬಳಗ ಶಾಲೆ ಮುಖ್ಯ ಶಿಕ್ಷಕಿ ಎಂ.ಜಿ. ಸುಗುಣಾವತಿ ಅಧ್ಯಕ್ಷತೆವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮೈಸೂರು ಆರ್ಟ್‌ ಗ್ಯಾಲರಿಯ ಸಂಚಾಲಕ ಬಿ.ಕೆ.ಶ್ರೀಕಂಠಸ್ವಾಮಿ, ಎನ್‌.ಶ್ರೀಕಂಠಮೂರ್ತಿ, ಶಿಕ್ಷಕ ಶಿವಯ್ಯ, ಶಿಕ್ಷಕಿಯರಾದ ಜಿ. ಪುಷ್ಪಾವತಿ, ಶಿಲ್ಪಾ, ನಾಗರತ್ನ, ಬೃಂದಾ ಮುಂತಾದವರು ಉಪಸ್ಥಿತರಿದ್ದರು.

ಚಿತ್ರಕಲಾ ಸ್ಪರ್ಧೆ ವಿಜೇತರು: ಎ ಗುಂಪಿನಲ್ಲಿ ಅಕ್ಕನ ಬಳಗ ಶಾಲೆಯ ದೀಕ್ಷಿತಾ (ಪ್ರಥಮ), ಅನುಷಾ (ದ್ವಿತೀಯ), ಲಿಖೀತ್‌ ನಾಯಕ್‌ (ತೃತೀಯ), ಮಹಾಲಕ್ಷ್ಮೀ(ಸಮಾಧಾನಕರ). ಬಿ ಗುಂಪಿನಲ್ಲಿ ಲಕ್ಷ್ಮೀ(ಪ್ರಥಮ), ಸಲ್ಮಾ (ದ್ವಿತೀಯ), ಚಂದನ್‌ (ತೃತೀಯ), ಅಫ್ರಿದ್‌ ಅಹಮದ್‌ ಮತ್ತು ಜೋಯಾಹುಡ್‌ (ಸಮಾಧಾನಕರ).

ಎ ಗುಂಪಿನಲ್ಲಿ ಜಯಲಕ್ಷ್ಮೀ ವಿಲಾಸ ಶಾಲೆಯ ದಿಶಾ (ಪ್ರ), ಜಾರಾ (ದ್ವಿ) ಮಹೇಂದ್ರ (ತೃ), ಸಾಜಿಯಾಬಾನು (ಸ). ಬಿ ಗುಂಪಿನಲ್ಲಿ ಆರ್ಪಿಯಾ (ಪ್ರ), ದೀಪಕ್‌ (ದ್ವಿ), ಜೆಹಾರಬಿ (ತೃ), ತುಳಸಿ (ಸ).

ಎ ಗುಂಪಿನಲ್ಲಿ ಶ್ರೀಕೃಷ್ಣ ಲಲಿತಕಲಾ ಮಂದಿರ ಶಾಲೆಯ ಗೌತಮ್‌ (ಪ್ರ), ರಿನಾಯಕ್‌ (ದ್ವಿ), ಲಕ್ಷ್ಮೀ(ತೃ), ಪ್ರಜ್ವಲ್‌ (ಸ). ಬಿ ಗುಂಪಿನಲ್ಲಿ ಸುಮಾ (ಪ್ರ) ಸಿಂಚನಾ (ದ್ವಿ), ಭರತ್‌ (ತೃ), ಪಲ್ಲ (ಸ). ಸಿ ಗುಂಪಿನಲ್ಲಿ ಎಂ. ಮಹಂತೇಶ್‌ (ಪ್ರ), ಕೆ. ಪವನ್‌ಕುಮಾರ್‌ (ದ್ವಿ), ಎನ್‌.ವಿನೋದ್‌ (ತೃ) ಎನ್‌.ಜ್ಯೋತಿ (ಸ).

ಎ ಗುಂಪಿನಲ್ಲಿ ಶ್ರೀಕಾಂತ ಶಾಲೆಯ ಎಸ್‌.ವಿದ್ಯಾಶ್ರೀ (ಪ್ರ), ಎಚ್‌.ಎಲ್‌. ಜ್ಯೋತಿ (ದ್ವಿ), ಪಿ. ಸಂಜನಾ (ತೃ), ಎಸ್‌. ಅವಿನಾಶ್‌ (ಸ).

Advertisement

Udayavani is now on Telegram. Click here to join our channel and stay updated with the latest news.

Next