ಬೆಂಗಳೂರು: ವರ್ತೂರಿನಲ್ಲಿ 2ನೇ ತರಗತಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಪ್ರಾಂಶುಪಾಲನೇ ಅತ್ಯಾ ಚಾರವೆಸಗಿ ವಿಕೃತಿ ಮೆರೆದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಗುಂಜೂರಿನ ಬೆಥೆಲ್ಸ್ ಬ್ಯಾಪ್ಟಿಸ್ಟ್ ಅಕಾಡೆಮಿ ಶಾಲೆಯ ಪ್ರಾಂಶುಪಾಲ ಹಾಗೂ ಮಾಲೀಕ ವರ್ತೂರಿನ ನಿವಾಸಿ ಲ್ಯಾಂಬರ್ಟ್ ಪುಷ್ಪರಾಜ್ (65) ಬಂಧಿತ.
ಗುಂಜೂರಿನ ಬೆತೆಲ್ ಬ್ಯಾಪಿಸ್ಟ್ ಅಕಾಡೆಮಿಯಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯು ನರ ದೌರ್ಬಲ್ಯ ಮೈಲ್ಡ್ ಡೈಸ್ಲೇಕ್ಸಿಯಾ ಕಾಯಿಲೆ ಯಿಂದ ಬಳಲುತ್ತಿದ್ದಳು. ಆ.3ರಂದು ಬೆಳಗ್ಗೆ 8.30ಕ್ಕೆ ಎಂದಿನಂತೆ ಶಾಲೆಗೆ ತೆರಳಿದ್ದಳು. ಶಾಲೆಯ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪ ರಾಜ್ ಬಾಲಕಿಯನ್ನು ಆತನ ಕೊಠಡಿಗೆ ಕರೆದುಕೊಂಡು ಹೋಗಿ ಬೆಡ್ ಮೇಲೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಬಳಿಕ ಬಾಗಿಲು ಹಾಗೂ ಕಿಟಕಿಯ ಪರದೆ ಮುಚ್ಚಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಮಗು ಅಳಲು ಪ್ರಾರಂಭಿಸಿದಾಗ ಹೊಡೆಯುವುದಾಗಿ ಬೆದರಿಸಿ ದ್ದರು. ಬಳಿಕ ಪ್ರತಿದಿನ ಇದೇ ರೀತಿ ಮಾಡುವುದಾಗಿ ಹೇಳಿ ಬಾಲಕಿಗೆ ಕೇಕ್ ನೀಡಿದಾಗ ಬಾಲಕಿ ಅಳುವುದನ್ನು ನಿಲ್ಲಿಸಿ ಮನೆಗೆ ಬಂದಿದ್ದಳು.
ಬೆಳಕಿಗೆ ಬಂದಿದ್ದು ಹೇಗೆ?: ಮನೆಗೆ ವಾಪಸ್ಸಾಗಿ ಪಾಲಕರ ಬಳಿ ಹೊಟ್ಟೆ ನೋವು ಎಂದು ಹೇಳಿಕೊಂಡಿದ್ದಳು. ಸಾಮಾನ್ಯ ಹೊಟ್ಟೆ ನೋವು ಇದ್ದಿರಬಹುದು ಎಂದು ಪಾಲಕರು ಸುಮ್ಮನಾಗಿದ್ದರು. ಬಾಲಕಿಗೆ ಸ್ನಾನ ಮಾಡಿಸಿ ಸ್ನಾನದ ಕೋಣೆಯಿಂದ ಬಂದಾಗ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಪಾಲಕರು ಈ ಬಗ್ಗೆ ವಿಚಾರಿಸಿದಾಗ ನಡೆದ ಸಂಗತಿಯನ್ನು ಬಾಲಕಿ ವಿವರಿಸಿದ್ದಾಳೆ.
ಬಾಲಕಿ ತಾಯಿ ವರ್ತೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಪೊಲಿಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.