Advertisement

ಬ್ರಿಟನ್‌ ರಾಜಕುಡಿಗಳ ಒಡಕು ಬಯಲು !

07:38 PM Jan 05, 2023 | Team Udayavani |

ಲಂಡನ್‌ : ಬ್ರಿಟನ್‌ ರಾಜಕುಮಾರರಾದ ಪ್ರಿನ್ಸ್‌ ಹ್ಯಾರಿ ಹಾಗೂ ಪ್ರಿನ್ಸ್‌ ವಿಲಿಯಂ ನಡುವಿನ ಕೌಟುಂಬಿಕ ಒಡಕು ಈಗ ಮತ್ತೆ ಮಾಧ್ಯಮಗಳ ಮುಂದೆ ತೆರೆದುಕೊಂಡಿದ್ದು, ಜ.10 ರಂದು ಬಿಡುಗಡೆ‌ಯಾಗಲಿರುವ ಪ್ರಿನ್ಸ್‌ ಹ್ಯಾರಿಯ ಆತ್ಮಕಥೆ ಸ್ಪೇರ್‌ನಲ್ಲಿ ತನ್ನ ಸಹೋದರ ವಿಲಿಯಂ ನನ್ನ ಮೇಲೆ ಹಲ್ಲೆ ನಡೆಸಿದ್ದ ಎಂಬ ವಿಚಾರವನ್ನು ಹ್ಯಾರಿ ಉಲ್ಲೇಖಿಸಿದ್ದಾರೆ ಎಂದು “ದಿ ಗಾರ್ಡಿಯನ್‌’ ಪತ್ರಿಕೆ ವರದಿ ಮಾಡಿದೆ.

Advertisement

ವರದಿಗಳ ಪ್ರಕಾರ, ಹ್ಯಾರಿ ಅವರ ಪತ್ನಿ ಮೇಘನ್‌ ಮಾರ್ಕೆಲ್‌ ಅವರ ಬಗ್ಗೆ ಪ್ರಿನ್ಸ್‌ ವಿಲಿಯಂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಸಹೋದರರ ನಡುವೆ ಜಟಾಪಟಿ ಏರ್ಪಟ್ಟಿತು. ಆ ಬಳಿಕ ವಿಲಿಯಂ ನನ್ನ ಕುತ್ತಿಗೆ ಪಟ್ಟಿ ಹಿಡಿದು ಹಲ್ಲೆ ನಡೆಸಿದ. ಅದರಿಂದ ನನ್ನ ಬೆನ್ನಿಗೂ ಗಾಯವಾಗಿತ್ತು ಎಂದು ಪ್ರಿನ್ಸ್‌ ಹ್ಯಾರಿ ತಮ್ಮ ಆತ್ಮಕಥೆ ಪುಸ್ತಕದ 6ನೇ ಪುಟದಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next