Advertisement
ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾ ಗಿರುವ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೂಮಿ ಪೂಜೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ನಡೆಸಿದ ಸಂದರ್ಭದಲ್ಲಿ ಅವರು ಆಡಿದ ಮಾತುಗಳು.
Related Articles
Advertisement
ಸಿದ್ಧತೆ ನಡೆದಿದೆ: ದೇಶಾದ್ಯಂತ ಲಸಿಕೆ ನೀಡುವ ಬಗ್ಗೆ ಹಲವು ರೀತಿಯ ಸಿದ್ಧತೆಗಳು ನಡೆದಿವೆ. ದೇಶದಲ್ಲಿಯೇ ಸಂಶೋಧನೆ ನಡೆಸಿ, ತಯಾರಿಕೆ ಮಾಡಲಾಗಿರುವ ಲಸಿಕೆಯನ್ನೇ ಜನರಿಗೆ ನೀಡಲು ಪ್ರಯತ್ನಗಳು ನಡೆದಿವೆ ಎಂದರು ಪ್ರಧಾನಿ. ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡುವ ಸಿದ್ಧತೆಯತ್ತ ಗಮನ ಹರಿಸಲಾಗಿದೆ ಎಂದರು. ಕೊರೊನಾ ವಿರುದ್ಧ ಸಾವಿರಾರು ಮಂದಿ ಆರೋಗ್ಯ ಕಾರ್ಯಕರ್ತರು ಜೀವದ ಹಂಗು ತೊರೆದು ಕೆಲಸ ಮಾಡಿ ದ್ದಾರೆ. ಅವರಿಗೆ ನಮನಗಳನ್ನು ಸಲ್ಲಿಸಲೇಬೇಕಾಗಿದೆ ಎಂದರು. ನಮ್ಮದೇ ಉತ್ತಮ: ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಸೋಂಕಿನ ಪರಿಸ್ಥಿತಿ ಉತ್ತಮವಾಗಿಯೇ ಇದೆ. ಸಾವಿನ ಸಂಖ್ಯೆ, ಸೋಂಕಿನ ಸಂಖ್ಯೆಯಲ್ಲಿ ನಮ್ಮ ಸ್ಥಿತಿ ಉತ್ತಮವಾಗಿದೆ ಎಂದರು.
ಚೇತರಿಕೆ ಪ್ರಮಾಣ ಶೇ.96: ದೇಶದಲ್ಲಿ ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.96.04 ಎಂದು ಸರಕಾರ ಹೇಳಿದೆ. ಬುಧವಾರದಿಂದ ಗುರುವಾರದ ಅವಧಿಯಲ್ಲಿ ಹೊಸತಾಗಿ 21,822 ಹೊಸ ಪ್ರಕರಣ ಗಳು ಮತ್ತು 299 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 2,57, 656 ಸಕ್ರಿಯ ಪ್ರಕರಣಗಳು ಇವೆ ಎಂದು ದೈನಂದಿನ ವರದಿಯಲ್ಲಿ ಉಲ್ಲೇಖೀಸಿದೆ.
ಮತ್ತೆ ಐದು ಕೇಸು: ದೇಶದಲ್ಲಿ ರೂಪಾಂತರ ವೈರಸ್‌ನ ಐದು ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಗಳಿಗೆ “ಮೇಕ್ ಇನ್ ಇಂಡಿಯಾ’ ವೆಂಟಿಲೇಟರ್: ದೇಶದ ವಿವಿಧ ಆಸ್ಪತ್ರೆಗಳಿಗೆ 36, 433 ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಅವುಗಳನ್ನು “ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ತಯಾರಿಸಲಾಗಿದೆ. ಅವುಗಳ ಬೆಲೆ 2 ಲಕ್ಷ ರೂ.ಗಳಿಂದ 10 ಲಕ್ಷ ರೂ. ವರೆಗೆ ಎಂದು ಸರಕಾರ ತಿಳಿಸಿದೆ. ಕೊರೊನಾ ಪೂರ್ವ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 16 ಸಾವಿರ ವೆಂಟಿಲೇಟರ್‌ಗಳು ಇದ್ದವು. ಆದರೆ ಕೇವಲ 12 ತಿಂಗಳ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡಿದ್ದು ಸಾಧನೆಯೇ ಸರಿ ಎಂದು ಅದು ಹೇಳಿಕೊಂಡಿದೆ. ಸದ್ಯ ಅವುಗಳನ್ನು ರಫ್ತು ಮಾಡುವ ನಿಯಮ ಹಿಂಪಡೆಯಲಾಗಿದೆ. ಹೀಗಾಗಿ, ದೇಶಿಯವಾಗಿ ಸಿದ್ಧಗೊಂಡಿರುವ ಅವುಗಳು ವಿದೇಶಗಳಿಗೂ ಕಳುಹಿಸಲಾಗುತ್ತದೆ ಎಂದು ಸರಕಾರ ಹೇಳಿಕೊಂಡಿದೆ.
ಡ್ರೈ ರನ್‌ಗೆ ಸಿದ್ಧರಾಗಿದೇಶದ ಎಲ್ಲ ರಾಜ್ಯಗಳಲ್ಲಿ ಶನಿವಾರ ವಿರಣೆ ಪ್ರಾತ್ಯಕ್ಷಿಕೆ ನಡೆಯಲಿದೆ. ಕೇಂದ್ರ ಸರಕಾರ ಶುಕ್ರವಾರವೇ ಅಗತ್ಯ ಸಿಬಂದಿಗೆ ತರಬೇತಿ ನೀಡಲಿದೆ. ಶನಿವಾರ ರಾಜ್ಯಗಳ ರಾಜಧಾನಿ ಸೇರಿದಂತೆ ಮೂರು ಸ್ಥಳಗಳಲ್ಲಿ ಡ್ರೈ ರನ್ ನಡೆಯಲಿದೆ. ಈ ಸಂದರ್ಭದಲ್ಲಿ ವಿತರಣೆ ಸಂದರ್ಭದಲ್ಲಿ ಆಗುವಂಥ ಲೋಪಗಳು, ಸಮಸ್ಯೆಗಳು, ಅಡ್ಡಿ, ಆತಂಕಗಳನ್ನು ಗುರುತಿಸಿ ಇವುಗಳನ್ನು ನಿವಾರಿಸಿಕೊಳ್ಳಲಾಗುತ್ತದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮಾತ್ರ ರಾಜಧಾನಿಗಳನ್ನು ಹೊರತುಪಡಿಸಿ ಉಳಿದ ಕಡೆ ಡ್ರೈ ರನ್ ನಡೆಯಲಿದೆ. ಕೇಂದ್ರ ಆರೋಗ್ಯ ಇಲಾಖೆ ಗುರುವಾರವೇ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜತೆ ವೀಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿ, ಸಿದ್ಧತೆಗಳ ಪರಿಶೀಲನೆ ಮಾಡಿದೆ. ಕೊರೊನಾ ಲಸಿಕೆ ಹಾಳು ಮಾಡಿದ ಅಮೆರಿಕ ಆರೋಗ್ಯ ಕಾರ್ಯಕರ್ತ
ವಿಸ್ಕಾನ್ಸಿನ್ (ಅಮೆರಿಕ): ಇಡೀ ಜಗತ್ತೇ ಕೊರೊನಾ ಔಷಧಕ್ಕಾಗಿ ಹಪಹಪಿಸುತ್ತಿರುವಾಗ ಅಮೆರಿಕ ವಿಸ್ಕಾನ್ಸಿನ್ ರಾಜ್ಯದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿನ ಗ್ರಾಫ್ಟನ್ ನಗರದ ಅರೊರಾ ಮೆಡಿಕಲ್ ಸೆಂಟರ್‌ನಲ್ಲಿದ್ದ 500 ಡೋಸ್ ಕೊರೊನಾ ಲಸಿಕೆಗಳನ್ನು ಆರೋಗ್ಯಕಾರ್ಯಕರ್ತನೊಬ್ಬ ಉದ್ದೇಶಪೂರ್ವಕವಾಗಿ ಹಾಳುಗೆಡವಿದ್ದಾನೆ. ಈ ಬಗ್ಗೆ ಎಫ್ಬಿಐ ತನಿಖೆ ನಡೆಸುತ್ತಿದೆ. ಇನ್ನೂ ಕಾರಣ ತಿಳಿದುಬಂದಿಲ್ಲ. ಶೇ.94ರಷ್ಟು ಪ್ರಭಾವಶಾಲಿ
ಅಮೆರಿಕದ ಮೊಡೆರ್ನಾ ಕಂಪನಿಯ ಲಸಿಕೆ ಶೇ.94.1ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಮೂರನೇ ಹಂತದ ಪ್ರಯೋಗದ ವರದಿಗಳು ದೃಢಪಡಿಸಿವೆ. ಈ ಬಗ್ಗೆ “ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ನಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಉಲ್ಲೇಖೀ ಸಲಾಗಿದೆ. ಒಟ್ಟು 30 ಸಾವಿರ ಮಂದಿಯ ಮೇಲೆ ಅದನ್ನು ಪ್ರಯೋಗಿಸಲಾಗಿತ್ತು.