ಹೊಸದಿಲ್ಲಿ: ಜನಪ್ರತಿನಿಧಿಗಳು ಸದನನ ಸಮಯವನ್ನು ಜನಹಿತಕ್ಕಾಗಿ ಬಳಸಬೇಕೇ ಹೊರತು ವೈಯಕ್ತಿಕವಾಗಿ, ಇಲ್ಲ ಪಕ್ಷಕ್ಕಾಗಿ ಬಳಸಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಸದರಿಗೆ ಸಲಹೆ ನೀಡಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್‌ನ ಹೊರಗೆ ಅವರು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ಮಹತ್ವಪೂರ್ಣ ಅಧಿವೇಶನಲ್ಲಿ ಸಂಸತ್‌ನ ಸಮಯ ಜನಹಿತಕ್ಕಾಗಿ, ದೇಶಹಿತಕ್ಕಾಗಿ ಬಳಕೆಯಾಗಬೇಕು. ನಾವು ಎಲ್ಲಾ ವಿಚಾರಗಳ ಕುರಿತು ಮುಕ್ತ ಚರ್ಚೆ ನಡೆಸಬೇಕು. ವಾದ,ವಿವಾದ , ಸಂವಾದ ಆಗಲೇಬೇಕು. ಈ ಸದನ ನಿಗದಿತ ಸಮಯಕ್ಕಿಂದ ಹೆಚ್ಚು ಕಾಲ ನಡೆಯಬೇಕು ಎಂದು ನಮ್ಮ ಆಶಯ ಎಂದರು.
ಕಲಾಪದಲ್ಲಿ ಸಾರ್ಥಕ ಕಾರ್ಯಗಳು ಆಗಬೇಕು. ಎಲ್ಲಾ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ವಿಶ್ವಾಸವಿದೆ ಎಂದರು.
ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯೆ ಇಲ್ಲ
ಮಾಧ್ಯಮ ಪ್ರತಿನಿಧಿಗಳು ಪಂಚರಾಜ್ಯ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಪ್ರಧಾನಿ ಮುಂದುವರಿದರು.