Advertisement

ಪ್ರಧಾನಿ ಮೋದಿ ಹತ್ಯೆ ಬೆದರಿಕೆ : ಕೇರಳದಲ್ಲಿ ಸಂಚು

06:00 AM Jun 30, 2018 | |

ಕಾಸರಗೋಡು: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಕೇರಳದಲ್ಲಿ ಸಂಚು ಹೂಡಿದ್ದು ಬೆಳಕಿಗೆ ಬಂದಿದೆ.

Advertisement

ಮೋದಿ ಹತ್ಯೆಗೈಯಲು ಭಯೋತ್ಪಾದ ಕರು ಸ್ಕೆಚ್‌ ಹಾಕಿಕೊಂಡಿರುವ ಕಳವಳ ಕಾರಿ ಮಾಹಿತಿ ಬೆಳಕಿಗೆ ಬಂದಿರುವ ಸಂದರ್ಭದಲ್ಲೇ ಈ ದೇಶದ್ರೋಹಿ ಸಂಚಿಗೆ ರೂಪು ನೀಡಿದವರಲ್ಲಿ ಕೇರಳದ ಕೆಲವು ಉಗ್ರಗಾಮಿಗಳ ಕೈವಾಡವೂ ಇದೆಯೆಂಬ ಸ್ಪಷ್ಟ ಮಾಹಿತಿ ಕೇಂದ್ರ ಗುಪ್ತಚರ ವಿಭಾಗಕ್ಕೆ ದೊರಕಿದೆ.

ಕೇರಳದಲ್ಲಿ ರಹಸ್ಯವಾಗಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆ ಯೊಂದಿಗೆ ನಿಕಟ ಸಂಪರ್ಕ ಹೊಂದಿ ರುವ ಕೆಲವು ಸಂಘಟನೆಗಳು ಮತ್ತು ಕೆಲವು ಮಾವೋವಾದಿ ಸಂಘಟನೆಗಳ ಕೈವಾಡವೂ ಈ ಸಂಚಿನಲ್ಲಿ ಅಡಗಿದೆ ಎಂದು ಕೇಂದ್ರ ಗುಪ್ತಚರ ವಿಭಾಗವು ಆತಂಕಕಾರಿ ವಿಷಯ ಬಹಿರಂಗಪಡಿಸಿದೆ. ಆ ಹಿನ್ನೆಲೆಯಲ್ಲಿ ಅಂತಹ ಸಂಘಟನೆಗಳ ಪ್ರತಿ ಚಲನವಲನಗಳ ಮೇಲೆ ಕೇಂದ್ರ ಗುಪ್ತಚರ ಇಲಾಖೆಯು ತೀವ್ರ ನಿಗಾಯಿರಿಸಿದೆ.

ಪ್ರಧಾನಿ ಮೋದಿಯವರಿಗೆ ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ ಭದ್ರತಾ ವ್ಯೂಹ ಏರ್ಪಡಿಸಿ ರುವ ನಿಟ್ಟಿನಲ್ಲಿ ತಮ್ಮ ಸಂಚು ಸಫಲವಾಗ ದೆಂಬುದನ್ನು ಮನಗಂಡ ಉಗ್ರಗಾಮಿಗಳು ಮತ್ತು ಮಾವೋವಾದಿಗಳು ಈಗ ಪರ್ಯಾಯ ದಾರಿ ಹುಡುಕುತ್ತಿರುವುದಾಗಿ ಕೇಂದ್ರ ಗುಪ್ತಚರ ವಿಭಾಗವು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖೀಸಿದೆ.

2019ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಉಗ್ರಗಾಮಿಗಳು ಮೋದಿ ಯವರನ್ನೇ ಪ್ರಧಾನ ಗುರಿಯಾಗಿರಿಸಿದ್ದಾರೆಂದು ಗುಪ್ತಚರ ವಿಭಾಗವು ಎಚ್ಚರಿಸಿದೆ. ಕೊಚ್ಚಿ ಮೆಟ್ರೋ ರೈಲು ಯೋಜನೆಯ ಉದ್ಘಾಟನೆಗೆಂದು ಪ್ರಧಾನಿ ಮೋದಿ ಬಂದ ವೇಳೆ ಉಗ್ರಗಾಮಿ ಮತ್ತು ಮಾವೋವಾದಿ ಸಂಘಟನೆಗಳಿಗೆ ಸೇರಿದ ಐದು ಮಂದಿಯನ್ನು ಒಳಗೊಂಡ ತಂಡವೊಂದು ಅಂದು ಮೋದಿ ಹತ್ಯೆಗೆ ಸಂಚು ಹೂಡಿತ್ತೆಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಟಿ.ಪಿ. ಸೇನ್‌ಕುಮಾರ್‌ ತಿಳಿಸಿದ್ದರು. ಈ ವಿಷಯವನ್ನು ಅವರು ಅಂದೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಗಮನಕ್ಕೂ ತಂದಿದ್ದರು. ಆದರೆ ಕೇರಳ ಸಿಎಂ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.

Advertisement

ಐದು ಬಾರಿ ಷಡ್ಯಂತ್ರ! 
ಬಿಹಾರ ರಾಜ್ಯದ ಹೂಂಕಾರ್‌ನಲ್ಲಿ ಜರಗಿದ್ದ ರ್ಯಾಲಿಯಲ್ಲಿ ನರೇಂದ್ರ ಮೋದಿಗೆ ಹತ್ಯೆ ಬೆದರಿಕೆ ಉಂಟಾಗಿತ್ತು. ಅದಕ್ಕೂ ಮೊದಲು ಪ್ರಧಾನಿಯನ್ನು ಹತ್ಯೆಗೈಯಲು ಉಗ್ರಗಾಮಿಗಳು ಐದು ಬಾರಿ ಸಂಚು ಹೂಡಿದ್ದರೆಂದೂ ಕೇಂದ್ರ ಗೃಹ ಇಲಾಖೆಗೆ ಗುಪ್ತಚರ ವಿಭಾಗವು ವರದಿ ಮಾಡಿತ್ತು. ಈ ವರದಿಯನ್ನು ಕೂಲಂಕಷವಾಗಿ ಗಣನೆಗೆ ತೆಗೆದುಕೊಂಡಾಗ ಆ ಸಂಚುಗಳಲ್ಲಿ ಕೇರಳದ ಉಗ್ರಗಾಮಿಗಳಿಗೂ ಸಂಬಂಧವಿರುವುದು ಗೋಚರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next