Advertisement
ಪ್ರಧಾನಿಯವರ ಸಮಾವೇಶದ ತಾಣವಾಗಿರುವ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಬಿರುಸಿನ ಸಿದ್ಧತೆಗಳು ನಡೆಯುತ್ತಿವೆ. ಸುಮಾರು 2 ಲಕ್ಷ ಮಂದಿ ಕುಳಿತುಕೊಳ್ಳಲು ಸಾಧ್ಯವಾಗು ವಂತಹ ಶೀಟ್‌ಗಳನ್ನು ಅಳವಡಿಸಿ ಬೃಹತ್ ಚಪ್ಪರ ಹಾಕುವ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಅಡಿ ಎತ್ತರ, 60 ಅಡಿ ಉದ್ದ ಹಾಗೂ 80 ಅಡಿ ಅಗಲದ ಸಭಾವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಮಳೆ ಬಂದರೆ ನೀರು ಸಭಾಂಗಣದೊಳಗೆ ಬಾರದಂತೆ ಸುತ್ತಲೂ ತಾತ್ಕಾಲಿಕ ಚರಂಡಿ ನಿರ್ಮಿಸಲಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗೆ ತಾಣಗಳನ್ನು ಗುರುತಿಸಲಾಗುತ್ತಿದೆ. ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ.
Related Articles
Advertisement
ಉಪಾಹಾರ, ಊಟದ ವ್ಯವಸ್ಥೆಪ್ರಧಾನಿಯವರು ಸಂಜೆ ಮಂಗಳೂರಿಗೆ ಆಗಮಿಸುವ ವೇಳೆ ಸಂಜೆಯ ಉಪಾಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ವತಿಯಿಂದ ಮಾಡಲಾಗುತ್ತಿದೆ. ಕಳೆದ ಬಾರಿ ಬೆಳಗಿನ ಉಪಾ ಹಾರದ ವ್ಯವಸ್ಥೆಯನ್ನು ನಗರದ ಖಾಸಗಿ ಹೊಟೇಲ್‌ನಿಂದ ಮಾಡಲಾಗಿತ್ತು. ಈ ಬಾರಿಯೂ ಇದೇ ಹೊಟೇಲ್‌ನಿಂದ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ. ಚುನಾವಣ ಆಯಾಮ
ಪ್ರಧಾನಿಯವರ ಮಂಗಳೂರು ಭೇಟಿ ಕರಾವಳಿ ಭಾಗದಲ್ಲಿ ಬಿಜೆಪಿ ಕಾರ್ಯ ಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ. ಪ್ರಧಾನಿಯವರ 2017ರ ಭೇಟಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿ ಸುತ್ತಿರುವ ಸಂದರ್ಭದಲ್ಲೇ ನಡೆದಿತ್ತು. 2018ರ ವಿಧಾನಸಭಾ ಚುನಾವಣೆ ಮೇ 12ರಂದು ನಡೆದಿತ್ತು. ಪ್ರಧಾನಿಯವರು ಕೇರಳದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ಲಕ್ಷದ್ವೀಪಕ್ಕೆ ತೆರಳಲು ಅವಕಾಶ ವಿದ್ದರೂ ಅವರು ಮಂಗಳೂರು ಮಾರ್ಗ ವನ್ನೇ ಆರಿಸಿಕೊಂಡಿದ್ದರು ಹಾಗೂ ಮಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದಕ್ಕೆ ಚುನಾವಣೆಗೆ ತಳುಕು ಹಾಕಲಾಗಿತ್ತು. ಈ ಬಾರಿಯೂ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ. ಮೋದಿಯವರ ವಾಸ್ತವ್ಯ ಸಾಧ್ಯತೆ
ಪ್ರಧಾನಿಯವರು ಮಂಗಳೂರಿನಲ್ಲಿ ಆ. 2ರಂದು ವಾಸ್ತವ್ಯ ಹೂಡುವ ಸಂಭಾವ್ಯ ಸಾಧ್ಯತೆಗಳನ್ನು ಪರಿಗಣಿಸಿ ಅದಕ್ಕೆ ಪೂರಕವಾಗಿ ಕೂಡ ಸಿದ್ಧತೆಗಳು ಮಾಡಲಾಗುತ್ತಿದೆ. ಸಾಮಾನ್ಯವಾಗಿ ಪ್ರಧಾನಿ, ರಾಷ್ಟ್ರಪತಿ ಮುಂತಾದ ಅತೀ ಗಣ್ಯರು ಬರುವ ಸಂದರ್ಭ ಶಿಷ್ಟಾಚಾರದಂತೆ ಅವರ ವಾಸ್ತವ್ಯಕ್ಕೆ ಎರಡು ತಾಣಗಳನ್ನು ಸಿದ್ಧಗೊಳಿಸಿ ಇಡಲಾಗುತ್ತಿದೆ. ಇದರಂತೆ ನಗರದ ಸರ್ಕ್ನೂಟ್ ಹೌಸ್, ಎನ್‌ಎಂಪಿಟಿ ಗೆಸ್ಟ್ ಹೌಸ್‌ಗಳ ಪರಿಶೀಲನೆ ನಡೆದಿದೆ. ಪ್ರಧಾನಿಯವರು ಮಂಗಳೂರಿನಲ್ಲಿ ವಾಸ್ತವ¤ದ ಸಾಧ್ಯತೆಗಳೂ ಇವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೋದಿಯವರು ಒಖೀ ಚಂಡಮಾರುತದಿಂದ ಸಂಭವಿಸಿದ ಹಾನಿಯನ್ನು ವೀಕ್ಷಿಸಲು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ 2017ರ ಡಿ.18ರಂದು ಮಂಗಳೂರು ಸರ್ಕ್ನೂಟ್ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಹೊಸದಿಲ್ಲಿಯಿಂದ ವಿಶೇಷ ವಿಮಾನದ ಮೂಲಕ ರಾತ್ರಿ 11.45ರ ವೇಳೆಗೆ ಮಂಗಳೂರು ತಲುಪಿದ್ದರು. ಮರುದಿನ ಬೆಳಗ್ಗಿನ ಉಪಾಹಾರ ಸೇವಿಸಿ ಲಕ್ಷದ್ವೀಪಕ್ಕೆ ಪ್ರವಾಸ ಮುಂದುವರಿಸಿದ್ದರು. ಜಿಲ್ಲಾಡಳಿತದಿಂದ ನಿರಂತರ ಸಭೆ
ಪ್ರಧಾನಿಯವರ ಭೇಟಿ ಸಂದರ್ಭ ಸೂಕ್ತ ವ್ಯವಸ್ಥೆಗಳನ್ನು ಯಾವುದೇ ಲೋಪಕ್ಕೆ ಆಸ್ಪದವಾಗದಂತೆ ನಿರ್ವಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ವಿವಿಧ ಇಲಾಖೆಗಳ ಪ್ರಮುಖರ ಸಭೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನಿ ಭೇಟಿ ವೇಳೆ ಪಾಲಿಸಬೇಕಾದ ಶಿಷ್ಟಾಚಾರಗಳು, ಭದ್ರತಾ ವ್ಯವಸ್ಥೆ, ಮಂಗಳೂರಿನಲ್ಲಿ ಅವರ ಕಾರ್ಯಕ್ರಮಗಳ ವೇಳೆ ಅವಶ್ಯ ಎಲ್ಲ ಸಿದ್ಧತೆಗಳು ವ್ಯವಸ್ಥಿತವಾಗಿ ನಡೆಯುವಂತೆ ನಿಗಾ ಮುಂತಾದ ವಿಚಾರಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಸಭೆಯಲ್ಲಿ ಪೊಲೀಸ್ ಇಲಾಖೆ, ವಿವಿಧ ಇಲಾಖೆಗಳ ಮುಖ್ಯಸ್ಥರು. ವಿಮಾನ ನಿಲ್ದಾಣದ ಅಧಿಕಾರಿಗಳು, ನವಮಂಗಳೂರು ಬಂದರು ಅಧಿಕಾರಿಗಳು, ಎಂಆರ್‌ಪಿಎಲ್ ಪ್ರಮುಖರು ಭಾಗವಹಿಸಿದ್ದರು.