ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೇ ೩ರಂದು ಕರಾವಳಿಗೆ ಆಗಮಿಸಲಿದ್ದು, ಈ ಬಾರಿ ಅವರು ಪ್ರಧಾನ ಮಂತ್ರಿಯಾಗಿ ಮಾತ್ರವಲ್ಲ; ವಿಶ್ವದ ನಂ.1 ನಾಯಕರಾಗಿ ಬರುತ್ತಿದ್ದಾರೆ. ಹಿಂದಿನ ಅವರ ಭೇಟಿ ಸಂದರ್ಭದ ಎಲ್ಲ ದಾಖಲೆಗಳನ್ನು ಮೀರಿ ಸಮಾವೇಶ ಯಶಸ್ವಿಯಾಗಲಿದ್ದು, ಹೊಸ ಇತಿಹಾಸವನ್ನು ಸೃಷ್ಟಿಸಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದರು.
ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ- ಉಡುಪಿ ಗಡಿಭಾಗವಾದ ಮೂಲ್ಕಿಯ ಕೊಲ್ನಾಡು ಬಳಿ ಬೆಳಗ್ಗೆ 10.30ಕ್ಕೆ ಮೊದಿಯವರ ಸಮಾವೇಶ ನಡೆಯಲಿದ್ದು, ಉಭಯ ಜಿಲ್ಲೆಗಳ 13 ವಿಧಾನ ಸಭಾ ಕ್ಷೇತ್ರಗಳಿಂದ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು, ಮತದಾರರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಸಮಾವೇಶ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ನೇತೃತ್ವದಲ್ಲಿ ಸಭೆಗಳು ನಡೆಯುತ್ತಿದೆ.
ಮೋದಿಯವರ ಆಗಮನ ಚುನಾವಣಾ ಪ್ರಚಾರ ಕಾರ್ಯಕ್ಕೆ ವೇಗ ನೀಡಲಿದ್ದು, ಕಾರ್ಯಕರ್ತರಿಗೆ ಪ್ರೇರಣೆ, ವಿಶೇಷ ಶಕ್ತಿ ನೀಡಲಿದೆ. ಆ ಮೂಲಕ ಜಿಲ್ಲೆಯ ಎಲ್ಲ ೮ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದರು.
ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್, ಪ್ರಮುಖರಾದ ಮೋನಪ್ಪ ಭಂಡಾರಿ, ಕಸ್ತೂರಿ ಪಂಜ, ಸಂಜಯ್ ಪ್ರಭು ಉಪಸ್ಥಿತರಿದ್ದರು.
ಇದನ್ನೂ ಓದಿ: ನಮ್ಮ ಸರ್ಕಾರದ ಯೋಜನೆಗಳನ್ನೇ ಕಾಂಗ್ರೆಸ್ ಕಾಪಿ ಮಾಡಿದೆ :ಸಿಎಂ ಬೊಮ್ಮಾಯಿ