Advertisement

ಆರು ಕಡೆ ಮೋದಿ ಶೋ: 3 ದಿನ ಮೋದಿ, ನಡ್ಡಾ, ಶಾ ರಾಜ್ಯಕ್ಕೆ ಲಗ್ಗೆ

01:35 AM Apr 26, 2023 | Team Udayavani |

ಬೆಂಗಳೂರು: ಚುನಾವಣೆ ಪ್ರಚಾರ ಈಗಾಗಲೇ ಬಿರುಸು ಪಡೆದುಕೊಂಡಿದ್ದು, ಈ ನಡುವೆ ಬಿಜೆಪಿ ತನ್ನ ಪ್ರಚಾರ ಅಭಿಯಾನವನ್ನು ಇನ್ನಷ್ಟು ಆಕ್ರಮಣಕಾರಿಯಾಗಿಸಲಿದೆ.

Advertisement

ರಾಜ್ಯದಲ್ಲಿ ಮೇ 7ರ ತನಕ ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ನಾಲ್ಕು ಕಾರ್ಯಕ್ರಮಗಳಂತೆ ಆರು ದಿನ ಪ್ರಚಾರ ನಡೆಸಲಿದ್ದಾರೆ. ಅಧಿಕಾರ ಉಳಿಸಿ ಕೊಳ್ಳಲೇಬೇಕು ಎಂದು ಹಠ ತೊಟ್ಟಿರುವ ಬಿಜೆಪಿ ವರಿಷ್ಠರು ತೀವ್ರಗತಿಯ ಪ್ರಚಾರಕ್ಕೆ ಮುಂದಾಗಿದ್ದಾರೆ. ಮೂರು ದಿನಗಳ ಕಾಲ ರಾಜ್ಯದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಏಕಕಾಲದಲ್ಲಿ ಪ್ರಚಾರ ನಡೆಸುವುದು ಕಣದಲ್ಲಿ ಇನ್ನಷ್ಟು ಕಾವೇರಿಸಲಿದೆ.

ಪ್ರಧಾನಿಯ ಮೊದಲ ಕಾರ್ಯಕ್ರಮ ಹುಮನಾಬಾದ್‌ನಲ್ಲಿ ಎ. 29ರಂದು ನಡೆಯಲಿದೆ. ಸದ್ಯದ ವೇಳಾಪಟ್ಟಿ ಪ್ರಕಾರ ಅಂದು ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿ ಬಹಿರಂಗ ಸಭೆಯಲ್ಲಿ ಭಾಗ ವಹಿಸಲಿದ್ದಾರೆ. ಆ ಬಳಿಕ ವಿಜಯಪುರ ಹಾಗೂ ಕುಡಚಿಯಲ್ಲಿ ಆಯೋಜಿಸಿರುವ ಸಭೆಗಳಲ್ಲಿ ಪಾಲ್ಗೊಳ್ಳುವರು. ಸಂಜೆ ಬೆಂಗಳೂರಿಗೆ ಆಗಮಿಸಿ ಬೃಹತ್‌ ರೋಡ್‌ ಶೋ ನಡೆಸುವರು. ಅಂದು ಬೆಂಗ ಳೂರಿನಲ್ಲಿ ವಾಸ್ತವ್ಯವಿದ್ದು, ರಾಜ್ಯ ಮುಖಂಡರ ಜತೆ ಚುನಾವಣ ತಂತ್ರಗಾರಿಕೆ ಬಗ್ಗೆ ಚರ್ಚಿಸುವರು.

ಎ. 30ರಂದು ಕೋಲಾರದಲ್ಲಿ ಬಹಿರಂಗ ಸಭೆಯ ಬಳಿಕ ಚನ್ನಪಟ್ಟಣ, ಬೇಲೂರಿನ ಸಭೆಯಲ್ಲಿ ಪಾಲ್ಗೊಳ್ಳುವರು. ಬಳಿಕ ಮೈಸೂರಿ ನಲ್ಲಿ ರೋಡ್‌ ಶೋ ನಡೆಸಿ ಹೊಸದಿಲ್ಲಿಗೆ ವಾಪಾಸ್‌ ಆಗಲಿದ್ದಾರೆ.

ಈ 2 ದಿನಗಳಲ್ಲಿ ಮೋದಿ ದಿನಕ್ಕೆ ತಲಾ 3 ಸಭೆ, ಒಂದು ರೋಡ್‌ ಶೋ ನಡೆಸಲಿದ್ದಾರೆ.

Advertisement

ಮತ್ತೂಂದೆಡೆ ಎ. 29ರಂದು ಅಮಿತ್‌ ಶಾ ರಾಣೆಬೆನ್ನೂರು, ಬ್ಯಾಡಗಿ, ಹಳಿಯಾಳ ಹಾಗೂ ಶಿವಮೊಗ್ಗ; ಜೆ.ಪಿ. ನಡ್ಡಾ ಅವರು ಮುದ್ದೇಬಿಹಾಳ, ಕಲಘಟಗಿ, ರೋಣ, ಹರಪನಹಳ್ಳಿಗಳಲ್ಲಿ ಬಹಿರಂಗ ಸಭೆ, ರೋಡ್‌ ಶೋಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಕಾರ್ಯಕ್ರಮ
ಎ. 29: ಹುಮನಾಬಾದ್‌, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ
ಎ. 30: ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
ಮೇ 2: ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
ಮೇ 3: ಮೂಲ್ಕಿ-ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಕೊಲಾ°ಡು, ಕಾರವಾರ, ಕಿತ್ತೂರು
ಮೇ 6: ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
ಮೇ 7: ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next