Advertisement

ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ

08:51 AM Feb 03, 2019 | |

ಹುಮನಾಬಾದ: 2019ನೇ ಸಾಲಿನ ಬಜೆಟ್‌ನಲ್ಲಿ ಅಕ್ಷರ ದಾಸೋಹ ನೌಕರರನ್ನು ಸಂಪೂರ್ಣ ನಿರ್ಲಕ್ಷಿಸಿದ ಕೇಂದ್ರ ಸರ್ಕಾರ ಧೋರಣೆ ಖಂಡಿಸಿ, ಸಿಐಟಿಯು ನೇತೃತ್ವದಲ್ಲಿ ಅಕ್ಷದ ದಾಸೋಹ ನೌಕರರು ಶನಿವಾರ ಪಟ್ಟಣದ ಡಾ| ಅಂಬೇಡ್ಕರ್‌ ವೃತ್ತದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಖಾ ಹಮೀಲಪೂರಕರ್‌ ಮಾತನಾಡಿ, ಅಕ್ಷರ ದಾಸೋಹ ನೌಕರರು ದೇಶದಲ್ಲಿ 25 ಲಕ್ಷ ಮಹಿಳೆಯರು, 12 ಕೋಟಿ ಮಕ್ಕಳಿಗೆ ಆಹಾರ ಬೇಯಿಸಿ ಉಣಬಡಿಸುತ್ತಿದ್ದಾರೆ. ಆದರೆ ಮಗುವು ಶಿಕ್ಷಣ ಪಡೆಯಬೇಕೆಂದು ಬಯಸುವಾಗಲೇ ಇದರ ಪೂರಕವಾಗಿ ಕೆಲಸ ಮಾಡುತ್ತಿರುವ ಬಡ ಮಹಿಳೆಯರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತ ಬಂದಿದೆ. ಈ ಬಾರಿ ಬಜೆಟ್‌ನಲ್ಲಾದರೂ ಗಮನಹರಿಸಬಹುದೆಂದು ನಿರೀಕ್ಷಿಸಿದ್ದ ಕಾರ್ಮಿಕರಿಗೆ ಮತ್ತೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ತಾಲೂಕು ಅಧ್ಯಕ್ಷೆ ಪಂಚಶೀಲಾ, ಉಪಾಧ್ಯಕ್ಷೆ ಕವಿತಾ ತಾಂಡಗಿ, ಕಾರ್ಯದರ್ಶಿ ಜನಾಬಾಯಿ ಖಂಡಗೊಂಡ, ಕೋಶಾಧ್ಯಕ್ಷೆ ಶಾರದಾ ಡಾಕುಳಗಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪ್ರಭು ಸಂತೋಷಕರ್‌, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ರೇಷ್ಮಾ ಹಂಸರಾಜ, ಕಟ್ಟಡ ಮತ್ತು ಇತರೆ ನಿರ್ಮಾಣ ವಿಭಾಗ ಕಾರ್ಮಿಕ‌ ಸಂಘಟನೆ ಜಿಲ್ಲಾ ಅಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿದರು. ಪ್ರಭಾವತಿ ಹಳ್ಳಿಖೇಡ(ಕೆ), ಶ್ರೀದೇವಿ ಚಿತ್ತಕೋಟಾ, ವಿಜಯಲಕ್ಷ್ಮೀ ಹುಮನಾಬಾದ, ಜಯಶ್ರೀ ಹುಮನಾಬಾದ, ಚುಕ್ಕೆಮ್ಮ ಚೀನಕೇರಾ, ಜುಲೇಖಾ ಬೇಗಂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next