Advertisement

ಜಾಗತಿಕ ಜನಪ್ರಿಯತೆ; ಮೋದಿ ನಂ.1 ; ಅಮೆರಿಕದ ಸಂಸ್ಥೆಯೊಂದರಿಂದ ಪಟ್ಟಿ ಬಿಡುಗಡೆ

01:16 AM Jan 03, 2021 | Team Udayavani |

ಹೊಸದಿಲ್ಲಿ: ಅಮೆರಿಕದ ಮಾರುಕಟ್ಟೆ ಅಧ್ಯಯನ ಹಾಗೂ ಡೇಟಾ ಇಂಟೆಲಿಜೆನ್ಸ್‌ ಸಂಸ್ಥೆ “ಮಾರ್ನಿಂಗ್‌ ಕನ್ಸಲ್ಟ್’ ಜಗತ್ತಿನ ಅತೀ ಜನಪ್ರಿಯ ರಾಷ್ಟ್ರ ನಾಯಕರ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ವಿಶೇಷ. ಭಾರತ, ಅಮೆರಿಕ, ಜಪಾನ್‌, ಬ್ರೆಜಿಲ್‌ ಸೇರಿದಂತೆ 13 ರಾಷ್ಟ್ರಗಳ ನಾಯಕರಲ್ಲಿ ನರೇಂದ್ರ ಮೋದಿಯವರಿಗೇ ಅತೀ ಹೆಚ್ಚು ಅಂಕಗಳು (ಶೇ.55) ದೊರೆತಿವೆ.

Advertisement

ಈ ವಿಷಯವನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಸಹ ಪ್ರಧಾನಿಯನ್ನು ಕೊಂಡಾಡಿದ್ದಾರೆ. “”ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯು ದೇಶದ ಎಲ್ಲ ಜನ ವರ್ಗಗಳಲ್ಲಿ ಅಬಾಧಿತವಾಗಿ ಏರಿಕೆಯಾಗುತ್ತಿರುವುದರ ಜತೆಗೇ, ದೇಶದೆಡೆಗಿನ ಅವರ ಸಮರ್ಪಣ ಮನೋಭಾವಕ್ಕೆ ಜಾಗತಿಕವಾಗಿಯೂ ಮನ್ನಣೆ ಗಳಿಸುತ್ತಿದ್ದಾರೆ. ಈ ಕಠಿನ ಸಮಯದಲ್ಲಿ ಪ್ರಧಾನಿ ಮೋದಿ ಜಾಗತಿಕ ನಾಯಕರಲ್ಲಿ ನಂಬರ್‌ 1 ಸ್ಥಾನದಲ್ಲಿದ್ದಾರೆ” ಎಂದು ನಡ್ಡಾ ಟ್ವೀಟ್‌ ಮಾಡಿದ್ದಾರೆ.

ಇನ್ನೊಂದೆಡೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು, “”ಪ್ರಧಾನಿ ಮೋದಿಯವರ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಈ ಸಾಂಕ್ರಾಮಿಕದ ಸಮಯದಲ್ಲಿ ಅವರು ತೋರುತ್ತಿರುವ ನಾಯಕತ್ವ ಗುಣವನ್ನು ಕೊಂಡಾಡಲಾಗುತ್ತಿದೆ. ಇದು ನಿಜಕ್ಕೂ ಭಾರತಕ್ಕೆ ಹೆಮ್ಮೆಯ ಸಮಯ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next