Advertisement

ಮೋದಿ 43ನೇ ಮನ್‌ ಕೀ ಬಾತ್‌ : ಪ್ರವಾದಿ ಮೊಹಮ್ಮದರ ಬಣ್ಣನೆ 

12:40 PM Apr 29, 2018 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 43 ನೇ ಅವತರಣಿಕೆಯಲ್ಲಿ  ಭಾನುವಾರ ದೇಶವಾಸಿಗಳನ್ನುದ್ದೇಶಿ ತಮ್ಮ ಮನದಾಳದ ಮಾತುಗಳನ್ನು ಆಡಿದರು. 

Advertisement

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಜಯಿಸಿದ ಕ್ರೀಡಾ ಪಟುಗಳಿಗೆ ಅಭಿನಂದನೆ ಸಲ್ಲಿಸಿದರು.ಫಿಟ್‌ ಇಂಡಿಯಾ, ಯೋಗ, ನೀರಿನ ಮಿತ ಬಳಕೆ ಕುರಿತು ಮಾತನಾಡಿದರು. ಸ್ವಚ್‌ಛತೆ, ಕ್ಲೀನ್‌ ಇಂಡಿಯಾ ,1998 ರ ಪರಮಾಣು ಪರೀಕ್ಷೆ ಮುಂತಾದ ವಿಚಾರಗಳನ್ನು ಮಾತನಾಡಿದರು. 

ಧಾರ್ಮಿಕ ವಿಚಾರಗಳನ್ನು ಪ್ರಸ್ತಾವಿಸಿದ ಅವರು ರಂಜಾನ್‌ ಕುರಿತು ಮಾತನಾಡಿ, ‘ಇನ್ನು ಕೆಲ ದಿನಗಳಲ್ಲಿ ಪವಿತ್ರ ರಂಜಾನ್‌ ಮಾಸ ಆರಂಭವಾಗುತ್ತದೆ. ವಿಶ್ವದೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡಿ  ಪವಿತ್ರ ಮಾಸವನ್ನು ಆಚರಿಸಲಾಗುತ್ತದೆ’ಎಂದರು

‘ಪ್ರವಾದಿ ಮೊಹಮ್ಮದರು ಜ್ಞಾನ ಮತ್ತು ಸಹಾನುಭೂತಿಯಲ್ಲಿ  ನಂಬಿಕೆ ಉಳ್ಳವರಾಗಿದ್ದರು. ಅವರಿಗೆ ಅಹಂ ಇರಲಿಲ್ಲ. ಜ್ಞಾನ ಅಹಂಕಾರವನ್ನು ಸೋಲಿಸುತ್ತದೆ ಎಂದು ಅವರು ಹೇಳಿದ್ದರು . ನಿಮ್ಮ ಅವಶ್ಯಕತೆಗಿಂತ ಹೆಚ್ಚಿಗೆ  ಏನನ್ನಾದರೂ ಹೊಂದಿದ್ದರೆ, ಅದನ್ನು ನೀವು ಅಗತ್ಯ ಉಳ್ಳವರಿಗೆ ದಾನ ಕೊಡಬೇಕು ಎಂದಿದ್ದರು. ಹಾಗಾಗಿ ಉಳ್ಳವರು ದಾನ ಮಾಡಬೇಕು’ ಎಂದರು.

ಬುದ್ಧ ಪೂರ್ಣಿಮೆಯ ಶುಭಾಶಯಗಳನ್ನೂ ಕೋರಿದರು. ‘ಬುದ್ಧನು ಸಮಾನತೆ, ಶಾಂತಿ, ಪರಾನುಭೂತಿ ಮತ್ತು ಸಹೋದರತ್ವಕ್ಕೆ ಸ್ಫೂರ್ತಿ’ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next