Advertisement
2024ರಲ್ಲಿ ಬಿಜೆಪಿಯನ್ನು ಸೋಲಿ ಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಈಗಾಗಲೇ ಜನರು ಹೇಳಲು ಶುರು ಮಾಡಿಕೊಂಡಿದ್ದಾರೆ. ಅದು ನಿಜ, ಮುಂದಿನ ಬಾರಿಯೂ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಹಾಗಂತ, ನಾವು ಮೈಮರೆಯುವಂತಿಲ್ಲ. ಬಿಜೆಪಿ ಕಾರ್ಯಕರ್ತರಾದ ನಾವೆ ಲ್ಲರೂ ಚುನಾವಣೆಯ ಜತೆಗೆ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯ ವನ್ನೂ ಗೆಲ್ಲಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಹನುಮಾನ್ ಜಯಂತಿಯ ದಿನವಾದ ಗುರುವಾರವೇ ಬಿಜೆಪಿಯ ಸ್ಥಾಪನ ದಿನಾಚರಣೆ ನಡೆದ ಕಾರಣ, ಮೋದಿ ತಮ್ಮ ಭಾಷಣದಲ್ಲಿ ಹಲವು ಬಾರಿ ಆಂಜನೇಯನನ್ನು ಸ್ಮರಿಸಿದ್ದು ಕಂಡುಬಂತು. ಬಿಜೆಪಿಯು ಭ್ರಷ್ಟಾ ಚಾರ, ಸ್ವಜನ ಪಕ್ಷಪಾತ ಮತ್ತು ದೇಶದ ಕಾನೂನು ಸುವ್ಯವಸ್ಥೆ ಸಮಸ್ಯೆಯ ವಿರುದ್ಧ ಹೋರಾಡಲು ಬದ್ಧವಾಗಿದೆ.
Related Articles
2014ರಲ್ಲಿ ಮೊತ್ತಮೊದಲ ಬಾರಿಗೆ ಪೂರ್ಣ ಬಹುಮತದಿಂದ ಬಿಜೆಪಿ ಅಧಿ ಕಾರಕ್ಕೆ ಬರುವ ಮೂಲಕ 800 ವರ್ಷಗಳ ಗುಲಾಮಗಿರಿಗೆ ಅಂತ್ಯಹಾಡಿತು ಎಂದೂ ನುಡಿದಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳ ಸಂಕುಚಿತ ಮನಃಸ್ಥಿತಿ, ಭ್ರಷ್ಟಾಚಾರ, ಜಾತಿವಾದ ಮತ್ತು ಕುಟುಂಬ ರಾಜಕಾರಣದ ವಿರುದ್ಧವೂ ಮುಗಿಬಿದ್ದರು. ದ್ವೇಷವನ್ನೇ ಮೈಗೂಡಿಸಿಕೊಂಡಿರುವ ವಿಪಕ್ಷಗಳ ನಾಯಕರು, ಒಂದಾದ ಮೇಲೆ ಒಂದರಂತೆ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದರು.
Advertisement
ಏಕ್ ಬಾರ್ ಫಿರ್ ಸೆ ಭಾಜಪಾ ಸರ್ಕಾರ್ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಏಕ್ ಬಾರ್ ಫಿರ್ ಸೆ ಭಾಜಪಾ ಸರ್ಕಾರ್’ (ಮತ್ತೂಂದು ಬಾರಿ ಬಿಜೆಪಿ ಸರಕಾರ) ಎಂಬ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದರು. ವಿಪಕ್ಷಗಳ ವಿರುದ್ಧ ವಾಗ್ಧಾಳಿ
ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಮೋದಿ, ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮೋದಿ ನಿಮ್ಮ ಸಮಾಧಿ ತೋಡುತ್ತೇವೆ ಎಂಬ ಘೋಷಣೆಗಳು ಕೇಳಿಬಂದವು. ಇದು ವಿಪಕ್ಷಗಳು ತೀರಾ ಹತಾಶರಾಗಿರುವುದಕ್ಕೆ ಸಾಕ್ಷಿ. ಬಾದಶಾಹಿಗಳ ಮನಃಸ್ಥಿತಿ ಹೊಂದಿರುವ ಇವರು ಇತರರನ್ನು ವಿಶೇಷವಾಗಿ ಬಡವರು ಮತ್ತು ತುಳಿತಕ್ಕೊಳಗಾದವರನ್ನು ಗುಲಾಮರಂತೆ ನಡೆಸಿಕೊಂಡು ಬಂದಿದ್ದಾರೆ. ವಿಪಕ್ಷಗಳು ಕೇವಲ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತವೆ. ಆದರೆ, ಬಿಜೆಪಿ ಪ್ರತಿಯೊಬ್ಬ ಭಾರತೀಯನಿಗೂ ನೆರವಾಗಲು ಶ್ರಮಿಸುತ್ತದೆ ಎಂದರು. 10 ಲಕ್ಷ ಪ್ರದೇಶಗಳಲ್ಲಿ ಪ್ರಸಾರ
ಪ್ರಧಾನಿ ಮೋದಿ ಅವರು ಸುಮಾರು 50 ನಿಮಿಷಗಳ ಕಾಲ ಮಾತನಾಡಿದ್ದು, ದೇಶಾದ್ಯಂತ 10 ಲಕ್ಷ ಸ್ಥಳಗಳಲ್ಲಿ ಅಳವಡಿಸಲಾದ ಪರದೆಗಳಲ್ಲಿ ಈ ಭಾಷಣದ ನೇರಪ್ರಸಾರ ನಡೆಯಿತು. ಬಿಜೆಪಿ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಷಣವನ್ನು ಆಲಿಸಿದರು.