Advertisement
ವಿದ್ಯಾರ್ಥಿಗಳಿಂದ ಹಿಡಿದು ರಾಜಕಾರಣಿಗ ಳವರೆಗೆ ಎಲ್ಲ ಕ್ಷೇತ್ರಗಳ ಜನರೂ “ಸ್ವತ್ಛತೆಯೇ ಸೇವೆ’ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಪ್ರಧಾನಿ ಮೋದಿಯವರೇ ಸ್ವತಃ ಕಸಬರಿಕೆ ಹಿಡಿದು ಸ್ವತ್ಛತಾ ಕಾರ್ಯದಲ್ಲಿ ಭಾಗಿಯಾದರು. ಅವರ ನೇತೃತ್ವದಲ್ಲಿ ದೇಶವ್ಯಾಪಿ ಸಾವಿರಾರು ಮಂದಿ ಬೆಳಗ್ಗೆ 10ರಿಂದ ಒಂದು ಗಂಟೆ ಕಾಲ ನಡೆದ ಈ ಅಭಿಯಾನದಲ್ಲಿ ಕೈಜೋಡಿಸಿದರು.ಮೋದಿಯವರು ದೆಹಲಿಯಲ್ಲಿ ಫಿಟೆ°ಸ್ ಇನ್‌ಫ್ಯೂಯೆನ್ಸರ್ ಅಂಕಿತ್ ಬೈಯಾನ್‌ಪುರಿಯಾ ಅವ ರೊಂದಿಗೆ ಶ್ರಮದಾನ ಮಾಡಿದ್ದು, ಅದರ 4 ನಿಮಿಷಗಳ ವಿಡಿಯೋವನ್ನು ಎಕ್ಸ್(ಟ್ವಿಟರ್)ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಜತೆಗೆ, “ಇಂದು ಭಾರತವು ಸ್ವತ್ಛತೆಯ ಕಡೆಗೆ ಗಮನ ಹರಿಸುತ್ತಿದ್ದರೆ, ನಾನು ಮತ್ತು ಅಂಕಿತ್ ಕೂಡ ಅದೇ ಕೆಲಸವನ್ನು ಮಾಡು ತ್ತಿದ್ದೇವೆ. ನೈರ್ಮಲ್ಯದ ಜೊತೆಗೆ ಫಿಟೆ°ಸ್ ಮತ್ತು ಕ್ಷೇಮವನ್ನೂ ಸಮ್ಮಿಳಿತಗೊಳಿಸಿದ್ದೇವೆ. ಒಟ್ಟಾರೆಯಾಗಿ ಇದು ಸ್ವತ್ಛ ಮತ್ತು ಸ್ವಸ್ಥ ಭಾರತದ ಸೂಚಕ’ ಎಂದು ಮೋದಿ ಬರೆದುಕೊಂಡಿದ್ದಾರೆ.
Related Articles
“ರಾಮ್ ರಾಮ್ ಸರೇಯಾ ನೆ’ ಖ್ಯಾತಿಯ ಫಿಟ್ನೆಸ್ ಇನ್‌ಫ್ಲೂಯೆನ್ಸರ್ ಅಂಕಿತ್ ಬೈಯಾನ್‌ಪುರಿಯಾ ಅವರೊಂದಿಗೆ ಶ್ರಮದಾನದಲ್ಲಿ ತೊಡಗುತ್ತಲೇ ಮೋದಿಯವರು ಅಂಕಿತ್‌ರನ್ನು ಮಾತಿಗೆಳೆದರು. “ನೀವು ದೈಹಿಕ ವ್ಯಾಯಾಮಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ’ ಎಂದು ಮೋದಿ ಪ್ರಶ್ನಿಸಿದಾಗ, ಅಂಕಿತ್ ಅವರು “ದಿನದಲ್ಲಿ 4-5 ಗಂಟೆ’ ಎಂದು ಉತ್ತರಿಸುತ್ತಾರೆ. ಜತೆಗೆ, ಪ್ರಧಾನಿ ಮೋದಿಯವರ ಫಿಟೆ°ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಪ್ರತಿಕ್ರಿಯಿಸಿದ ಮೋದಿ, “ನಾನು ಹೆಚ್ಚೇನೂ ವ್ಯಾಯಾಮ ಮಾಡುವುದಿಲ್ಲ. ಆದರೆ, ಶಿಸ್ತು ಪಾಲಿಸುತ್ತೇನೆ’ ಎನ್ನುತ್ತಲೇ, “ಎರಡು ವಿಷಯಗಳಲ್ಲಿ ಮಾತ್ರ ನನಗೆ ಶಿಸ್ತು ಪಾಲಿಸಲು ಆಗುತ್ತಿಲ್ಲ. ಒಂದು ಆಹಾರ ಸೇವನೆಯ ಸಮಯ, ಎರಡನೆಯದ್ದು ನಿದ್ರಿಸುವ ಸಮಯ. ಸ್ವಲ್ಪ ಹೆಚ್ಚು ಸಮಯವನ್ನು ನಿದ್ರೆಗೆ ಮೀಸಲಿಡಬೇಕೆಂದು ಯೋಚಿಸುತ್ತೇನಾದರೂ, ಅದು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ.
Advertisement