ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವುದು
ಈಗ ಮುಗಿದು ಹೋದ ಕಥೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೇಶ್ ಜೀ ಮನೆಗೆ ಭೇಟಿ ನೀಡಲು ಸೂಚಿಸಿದ್ದರು. ಅಮಿತ್ ಶಾ ಕಚೇರಿಯವರು ಅವರ ಕರೆ ಬಂದ ಮೇಲೆ ಕರೆಯುತ್ತೇವೆ ಎಂದರು. ಬಳಿಕ ಶಾ ಅವರು ನನ್ನ ಭೇಟಿಯ ಅಗತ್ಯ ಇಲ್ಲ ಎಂದಿದ್ದಾರೆ ಎಂದು ಕಚೇರಿಯವರು ತಿಳಿಸಿದರು. ಇದರ ಅರ್ಥ ನೀನು ಶಿವಮೊಗ್ಗಕ್ಕೆ ವಾಪಸ್ ಹೋಗು, ಚುನಾವಣೆಗೆ ಸ್ಪರ್ಧಿಸಿ ಗೆಲ್ಲು ಎಂಬುದಾಗಿದೆ. ಒಂದೊಮ್ಮೆ ಮತ್ತೆ ದಿಲ್ಲಿಯಿಂದ ಕರೆ ಬಂದರೂ ಅವರಿಗೆ ಗೌರವ ಕೊಟ್ಟು ಹೋಗುತ್ತೇನೆ. ಆದರೆ ಸ್ಪರ್ಧೆಯಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂದರು.
ಭೀತಿಯಿಂದ ವಿಜಯೇಂದ್ರ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಷಡ್ಯಂತ್ರ ಮಾಡಿಯೇ ಅಭ್ಯಾಸ. ಮತ್ತೂಮ್ಮೆ ಈಶ್ವರಪ್ಪನನ್ನು ಸಮಾಧಾನಗೊಳಿಸಲಾಗುವುದು ಎಂದು ಹೇಳಿಕೆ ಕೊಟ್ಟರೆ ಬೇರೆ ರೀತಿಯ ಭಾಷೆಯಲ್ಲಿ ಮಾತನಾಡಬೇಕಾಗುತ್ತದೆ ಎಂದು ಹೇಳಿದರು.
Related Articles
ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರನ್ನು ಡಮ್ಮಿ ಎಂದು ಹಗುರವಾಗಿ ಹೇಳಿಲ್ಲ. ಗೀತಾ ನನ್ನ ಸಹೋದರಿ. ಬಿ.ಎಸ್. ಯಡಿಯೂರಪ್ಪ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ. ಈ ಹಿಂದೆ ಶಿಕಾರಿಪುರದಲ್ಲಿ ಹೊಂದಾಣಿಕೆ ಮಾಡಿಕೊಂಡು ಲಿಂಗಾಯತ ನಾಯಕ ನಾಗರಾಜ ಗೌಡ ಹಾಗೂ ಹಿಂದುಳಿದ ನಾಯಕ ಗೋಣಿ ಮಾಲತೇಶ್ ಭವಿಷ್ಯ ಹಾಳು ಮಾಡಿದರು. ಹೊಂದಾಣಿಕೆ ರಾಜಕೀಯ ಮಾಡಿಕೊಂಡಿಲ್ಲವೆಂದು ಮಧು ಬಂಗಾರಪ್ಪ ಹೇಳಲಿ ಎಂದು ಈಶ್ವರಪ್ಪ ಸವಾಲು ಹಾಕಿದರು.
Advertisement