Advertisement

ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ

01:04 PM Mar 26, 2019 | Team Udayavani |

ಚನ್ನರಾಯಪಟ್ಟಣ: ಹಾಸನ ಮತ್ತು ಮಂಡ್ಯ ಜಿಲ್ಲೆಗೆ ಶೀಘ್ರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸಿ ಚುನಾವಣಾ ಪ್ರಚಾರ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

Advertisement

ಪಟ್ಟಣದಲ್ಲಿನ ಕಾಂಗ್ರೆಸ್‌ ಮುಖಂಡ ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ ಅವರ ಮನೆಗೆ ಭೇಟಿ ನೀಡಿದ ವೇಳೆ ನೆರೆದಿದ್ದ ಕಾರ್ಯಕರ್ತರ ಉದ್ದೇಶಿಸಿ ಅವರು ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಎ.ಮಂಜು ಮತ್ತು ಹಾಸನ ಶಾಸಕ ಪ್ರೀತಂ ಜೆ. ಗೌಡ ಈಗಾಗಲೆ ಮೋದಿ ಕರೆಸುವಂತೆ ರಾಜ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೆ ಮಾತನಾಡಲಾಗಿದೆ ಎಂದರು.

ಹಾಸನದಲ್ಲಿ ಗೆಲುವು ನಮ್ಮದೇ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಎ.ಮಂಜು ಸೂಕ್ತ ಅಭ್ಯರ್ಥಿಯಾಗಿದ್ದ ಈ ಬಾರಿ ಬಿಜೆಪಿ ಗೆಲುವ‌ನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಕಲ್ಲು ತೂರಾಟ ಸಂಸ್ಕೃತಿ: ಜೆಡಿಎಸ್‌ ಪಕ್ಷದ್ದು ಕಲ್ಲು ತೂರಾಟ ಸಂಸ್ಕೃತಿ ತಿಂಗಳ ಹಿಂದೆ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ. ಗೌಡ ಅವರ ಮನಗೆ ಕಲ್ಲು ತೂರಿದ್ದರು. ಈಗ ಮಂಡ್ಯದ ಅಭ್ಯರ್ಥಿ ಸುಮಲತಾ ಬೆಂಬಲಿಸಿದಕ್ಕೆ ಚಿತ್ರ ನಟ ದರ್ಶನ್‌ ಮನೆ ಮೇಲೆ ಕಲ್ಲು ತೂರುತ್ತಿದ್ದಾರೆ ಎಂದರು.

ಸಿಎಸ್‌ಪಿ ಸಹಕಾರ ಮುಖ್ಯ: ಹಾಸನದ ಯುವಜನತೆಯು ಬಿಜೆಪಿ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ, ಇಂತಹ ವೇಳೆಯಲ್ಲಿ ಜೆಡಿಎಸ್‌ ಪಕ್ಷದ ಕಡು ವಿರೋಧಿ ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡರು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದರೆ ಜಯಶೀಲರಾಗಲು ಅನುಕೂಲವಾಗುತ್ತಿದೆ ಹಾಗಾಗಿ ಈ ಬಗ್ಗೆ ಮನವಿ ಮಾಡಲು ಆಗಮಿಸಿದ್ದೇನೆ ಅವರು ತಿಂಡಿ ಕಾಫಿ ನೀಡಿ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.

Advertisement

ಅರಸೀಕೆರೆ ಜನ ತಕ್ಕ ಪಾಠ ಕಲಿಸುತ್ತಾರೆ: ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರು ಪ್ರಧಾನಿ ಮೋದಿ ಬಗ್ಗೆ ಕೀಳಾಗಿ ಮಾತನಾಡಿದ್ದು, ಅವರಿಗೆ ಅರಸೀಕೆರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ: ಮಂಡ್ಯದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡುವ ಮೂಲಕ ಓಒರ್ವ ಹೆಣ್ಣು ಮಗಳಿಗೆ ನೆರವಾಗಲು ನಿಂತಿದೆ. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಸುಮಲತಾ ಪರ ಪ್ರಚಾರ ಮಾಡಲಿದೆ ಎಂದರು.

ಸೌಹಾರ್ದ ಭೇಟಿ: ಮಾಜಿ ಶಾಸಕರು ಸಿ.ಎಸ್‌.ಪುಟ್ಟೇಗೌಡ ಮಾತನಾಡಿ ನಾನು ಯಾವುದೇ ಪಕ್ಷದಿಂದ ವಿಧಾನ ಸಭೆ ಪ್ರವೇಶ ಮಾಡಿದ್ದರು ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಸಹಕಾರ ನೀಡಿದ್ದಾರೆ. ಅವರ ಬಗ್ಗ ನನಗೆ ಅಪಾರ ಅಭಿಮಾನವಿದೆ. ಇದೊಂದು ಸೌಹಾರ್ದಯುತ ಭೇಟಿ ಇದಕ್ಕೆ ರಾಜಕೀಯ ಬಣ್ಣ ಕಟ್ಟುವುದು ಬೇಡ ಎಂದು ಸ್ಪಷ್ಟಪಡಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಶಿವನಂಜೇಗೌಡ, ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಪಟೇಲ್‌ ಮಂಜುನಾಥ್‌, ಜಿಪಂ ಮಾಜಿ ಅಧ್ಯಕ್ಷ ಎನ್‌.ಡಿ.ಕಿಶೋರ್‌, ಎಂ.ಕೆ.ಮಂಜೇಗೌಡ, ಬಿಜೆಪಿ ಮುಖಂಡ ನಾಗರಾಜಗೌಡ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next