Advertisement

ಪ್ರಧಾನಿ ಮೋದಿ ಬದುಕೇ ಬದಲಾವಣೆಯ ಸಂಕೇತ!

07:55 AM Nov 29, 2017 | Harsha Rao |

ಹೈದರಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಹಾಗೂ ಸಲಹೆಗಾರ್ತಿಯಾಗಿರುವ ಇವಾಂಕಾ ಟ್ರಂಪ್‌ ಅವರು, ಪ್ರಧಾನಿ ಮೋದಿಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ಹೈದರಾಬಾದ್‌ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಮಾತನಾಡಿದ ಇವಾಂಕಾ, ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ನೀವು ಈಗ ಪ್ರಧಾನಿಯಾಗಿ ಆಯ್ಕೆಯಾಗಿರುವುದೇ ಬದಲಾವಣೆ ಸಾಧ್ಯವಿದೆ ಎಂಬುದರ ಸಂಕೇತ. ಈಗ ನೀವು ನಿಮ್ಮ ದೇಶದ ಕೋಟಿಗಟ್ಟಲೆ ಜನರಿಗೆ ಈ ಬದಲಾವಣೆಯ ಭರವಸೆಯನ್ನು ಸಾಕಾರಗೊಳಿಸುತ್ತಿದ್ದೀರಿ ಎಂದಿದ್ದಾರೆ.

Advertisement

ಅಷ್ಟೇ ಅಲ್ಲ, ಭಾರತದ ಆರ್ಥಿಕ ಪ್ರಗತಿಯ ಬಗ್ಗೆಯೂ ಶ್ಲಾ ಸಿದ್ದಾರೆ. 13 ಕೋಟಿಗೂ ಹೆಚ್ಚು ಮಂದಿ ಭಾರತದಲ್ಲಿ ಸ್ವಯಂ ಉದ್ಯಮ, ಉದ್ಯಮಶೀಲತೆ, ಕಠಿಣ ಪರಿ ಶ್ರಮದಿಂದ ಬಡತನ ಹೋಗಲಾಡಿಸಿಕೊಂ ಡಿದ್ದಾರೆ. ಇದು ವಿಶ್ವದಲ್ಲೇ ಗಮನಾರ್ಹ ಸಂಗತಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಇನ್ನಷ್ಟು ಅಭಿವೃದ್ಧಿ ಕಾಣಲಿದೆ. ಮಹಿಳಾ ಸಬಲೀಕರಣಗೊಳ್ಳದೇ ದೇಶ ಅಭಿವೃದ್ಧಿಯಾಗದು ಎಂದು ಮೋದಿ ಅರಿತಿದ್ದಾರೆ ಎಂದು ಅವರು ಹೇಳಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಬಂಡವಾಳ, ಜಾಲ, ಸಲಹೆಗಾರರ ಅಗತ್ಯವಿದೆ. ಮಹಿಳಾ ಉದ್ಯಮಿ ಗಳ ಸಂಖ್ಯೆ ಹೆಚ್ಚುತ್ತಿದ್ದರೂ, ವಹಿವಾಟು ಆರಂಭಿಸಲು, ಬೆಳೆಸಲು,  ಮುನ್ನಡೆಸಲು ಕಷ್ಟಪಡುತ್ತಿದ್ದಾರೆ. ಉದ್ಯಮಶೀಲತೆಯಲ್ಲಿನ ಲಿಂಗಾನು ಪಾತ ಕಡಿಮೆ ಮಾಡಿದರೆ ಜಿಡಿಪಿ ಶೇ. 2ರಷ್ಟು ಅಭಿವೃದ್ಧಿಯಾಗಲಿದೆ ಎಂದು ಇವಾಂಕಾ ಹೇಳಿದ್ದಾರೆ.

ಮಹಿಳಾ ಸಬಲೀಕರಣವೇ ಗುರಿ: ಅಭಿವೃದ್ಧಿಯ ಗುರಿಯ ಕೇಂದ್ರವೇ ಮಹಿಳಾ ಸಬಲೀಕರಣವಾಗಿದೆ. ಭಾರತೀಯ ಪುರಾಣದಲ್ಲಿ ಮಹಿಳೆಯನ್ನು ಶಕ್ತಿಯ ಅವತಾರ ಎಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕೆ ಮಹಿಳಾ ಸಬಲೀಕರಣಕ್ಕೆ ನಾವು ಪ್ರಾಮುಖ್ಯತೆ ನೀಡಿದ್ದೇವೆ ಎಂದು ಇದೇ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ನುಡಿದಿದ್ದಾರೆ. ಭಾರತೀಯ ಸಂವಿಧಾನದಲ್ಲಿ ಮೂರನೇ ಒಂದರಷ್ಟು ಮಹಿಳೆಯರು ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸಬೇಕು ಎಂಬುದಾಗಿ ನಮೂದಿ ಸಲಾಗಿದೆ. ಅಲ್ಲದೆ ನಮ್ಮ ಸರ್ಕಾರವು 1200 ಹಳೆಯ ಕಾನೂನುಗಳನ್ನು ತೆಗೆದುಹಾಕಿದ್ದು, ವಿದೇಶಿ ಬಂಡವಾಳ ಹೂಡಿಕೆಗೆ 87 ನಿಯಮ ರೂಪಿಸಿದೆ. 21 ವಲಯಗಳಲ್ಲಿ ಹೂಡಿಕೆ ಸುಲಭಗೊಳಿಸಿದ್ದು, ಹಲವು ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಿದ್ದೇವೆ. ವಹಿವಾಟು ವಾತಾ ವರಣ ಸುಧಾರಿಸಲು ಹಲವು ಕ್ರಮ ಕೈಗೊಂಡಿದ್ದೇವೆ. ಈ ಎಲ್ಲ ಕ್ರಮಗಳಿಂದಾಗಿ ಉದ್ಯಮ ಸ್ನೇಹಿ ಪಟ್ಟಿಯಲ್ಲಿ ಭಾರತ ಮೇಲಕ್ಕೇರಿದೆ. ಅಲ್ಲದೆ ಅಟಲ್‌ ಇನೋವೇಶನ್‌ ಮಿಶನ್‌ ಹಾಗೂ ಮೆಂಟರ್‌ ಇಂಡಿಯಾ ಸ್ಥಾಪಿಸಲಾ ಗಿದ್ದು, ಅನ್ವೇಷಣೆ, ಉದ್ಯಮಶೀಲತೆ ಪ್ರೋತ್ಸಾಹಿಸಲು ಈ ಸಂಸ್ಥೆಗಳು ಕಟಿಬದ್ಧವಾಗಿವೆ ಎಂದಿದ್ದಾರೆ.

ಬಿಗಿ ಭದ್ರತೆ
ಸಮ್ಮೇಳನದ ಸುತ್ತಲಿನ ಪ್ರದೇಶಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸುಮಾರು 10 ಸಾವಿರ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಗಣ್ಯರು ವಾಸಿಸುತ್ತಿರುವ ಹೋಟೆಲ್‌ಗ‌ಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಇದಕ್ಕಾಗಿ ಬೇಗಂಪೇಟೆ ಮತ್ತು ಶಂಶಾದ್‌ ವಿಮಾನ ನಿಲ್ದಾಣಗಳಲ್ಲಿ ಭಾನುವಾರ ಮತ್ತು ಸೋಮವಾರ ಕವಾಯತು ನಡೆಸಲಾಗಿತ್ತು. ಹೈದರಾಬಾದ್‌ನ ಹಲವು ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಅಲ್ಲದೆ ನಗರದ ಬಹುತೇಕ ಸಾಫ್ಟ್ವೇರ್‌ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಬಹುದಾದ ಅವಕಾಶ ನೀಡಿವೆ.

ತೆಲಂಗಾಣದಲ್ಲಿ ನನ್ನನ್ನು ಇಂದಿಗೂ ಚಿನ್ನಮ್ಮ ಎಂದೇ ಗುರುತಿಸಲಾಗುತ್ತದೆ. ಭಾರತವು ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಪರಿಪೂರ್ಣ ಮಿಶ್ರಣ ಎಂಬುದನ್ನು ಇದು ಸೂಚಿಸುತ್ತದೆ.
– ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next