Advertisement

YashoBhoomi; ತಮ್ಮ ಜನ್ಮದಿನದಂದು ಯಶೋಭೂಮಿ ಸಮಾವೇಶ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

01:31 PM Sep 17, 2023 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ದೆಹಲಿಯ ದ್ವಾರಕಾದಲ್ಲಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (IICC) ಯಶೋಭೂಮಿಯ ಮೊದಲ ಹಂತವನ್ನು ಪ್ರಾರಂಭಿಸಿದರು. ಪ್ರಧಾನಿ ಮೋದಿ ಅವರು ಯಶೋಭೂಮಿಯನ್ನು ಉದ್ಘಾಟಿಸಿದ ನಂತರ ಸಮಾವೇಶ ಕೇಂದ್ರದಲ್ಲಿ ‘ಭಾರತ್ ಮಾತಾ ಕಿ ಜೈ’ ಘೋಷಣೆಗಳು ಮೊಳಗಿದವು.

Advertisement

ಪ್ರಧಾನಿ ಮೋದಿ ಅವರು ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಮಾರ್ಗದಲ್ಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಅವರು ಮೆಟ್ರೋದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಿದ್ದರು.

ದ್ವಾರಕಾ ಸೆಕ್ಟರ್ 21 ರಿಂದ ಹೊಸ ಮೆಟ್ರೋ ಸ್ಟೇಷನ್ ‘ಯಶೋಭೂಮಿ ದ್ವಾರಕಾ ಸೆಕ್ಟರ್ 25’ ವರೆಗೆ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್ ವಿಸ್ತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಇದನ್ನೂ ಓದಿ:Doddaballapura: ಕೋಳಿ ಫಾರಂನಲ್ಲಿ ಒಂದೇ ಕುಟುಂಬದ ನಾಲ್ವರ ಅನುಮಾನಾಸ್ಪದ ಸಾವು

ದ್ವಾರಕಾ ಸೆಕ್ಟರ್ 25 ರಲ್ಲಿ ಹೊಸ ಮೆಟ್ರೋ ನಿಲ್ದಾಣದ ಉದ್ಘಾಟನೆಯೊಂದಿಗೆ ಯಶೋಭೂಮಿ ದೆಹಲಿ ಏರ್‌ಪೋರ್ಟ್ ಮೆಟ್ರೋ ಎಕ್ಸ್‌ಪ್ರೆಸ್ ಲೈನ್‌ಗೆ ಸಂಪರ್ಕ ಕಲ್ಪಿಸುತ್ತದೆ.

Advertisement

ಯಶೋಭೂಮಿ 8.9 ಲಕ್ಷ ಚದರ ಮೀಟರ್‌ ಗಿಂತಲೂ ಹೆಚ್ಚು ಯೋಜನಾ ಪ್ರದೇಶ ಮತ್ತು 1.8 ಲಕ್ಷ ಚದರ ಮೀಟರ್‌ ಗಿಂತ ಹೆಚ್ಚಿನ ಒಟ್ಟು ಬಿಲ್ಟ್-ಅಪ್ ಪ್ರದೇಶದೊಂದಿಗೆ ವಿಶ್ವದ ಅತಿದೊಡ್ಡ MICE (ಸಭೆಗಳು, ಪ್ರೋತ್ಸಾಹಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು) ಸೌಲಭ್ಯಗಳಲ್ಲಿ ಒಂದಾಗಲಿದೆ.

73,000 ಚದರ ಮೀಟರ್‌ ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್, ಮುಖ್ಯ ಸಭಾಂಗಣ, ಬಾಲ್ ರೂಂ ಮತ್ತು 11,000 ಪ್ರತಿನಿಧಿಗಳನ್ನು ಸೇರಬಹುದಾದ ಸಾಮರ್ಥ್ಯದ 13 ಸಭೆ ಕೊಠಡಿಗಳನ್ನು ಒಳಗೊಂಡಂತೆ 15 ಕನ್ವೆನ್ಶನ್ ಕೊಠಡಿಗಳನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next