Advertisement
ಇದರನ್ವಯ, ದೆಹಲಿಯ “ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ (ಎನ್‌ಜಿಎಂಎ) ಈ ಉಡುಗೊರೆಗಳ ಹರಾಜು ಭಾನುವಾರದಿಂದ ಆರಂಭಗೊಂಡಿದೆ. 31ರವರೆಗೆ ನಡೆಯಲಿರುವ ಈ ಹರಾಜಿನಲ್ಲಿ ಮೊದಲೆರಡು ದಿನ (ಜ. 27 ಮತ್ತು 28) ಬಹಿರಂಗ ಹರಾಜು ನಡೆಯಲಿದ್ದರೆ, ಜ. 29ರಿಂದ 31ರವರೆಗೆ ಆನ್‌ಲೈನ್ ಹರಾಜು ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ನಡೆಯುತ್ತಿರುವ 2ನೇ ಹರಾಜು ಇದು. 2014ರಲ್ಲಿ ತಾವು ಪ್ರಧಾನಿಯಾದಾಗಿನಿಂದ ಬಂದಿದ್ದ ಉಡುಗೊರೆಗಳನ್ನು ಮೊದಲು 2015ರಲ್ಲಿ ಹರಾಜು ಹಾಕಿದ್ದರು. ಅದರಿಂದ 8.3 ಕೋಟಿ ರೂ. ಬಂದಿತ್ತು. ಅದರಲ್ಲಿ ಅವರ ಹೆಸರು ಅಡಕವಾಗಿದ್ದ ಸೂಟ್ ಸಹ ಸೇರಿತ್ತು. ಏನೇನಿದೆ ಹರಾಜಿನಲ್ಲಿ?
ವಿವಿಧ ಕಲಾಕೃತಿಗಳು, ಪಗಡಿ-ಪೇಟಾಗಳು, ಪಂಚೆ-ಶಲ್ಯಗಳು, ಮೋದಿ ಭಾವಚಿತ್ರದ ಕಲಾಕೃತಿಗಳು, ಮರದಿಂದ ತಯಾರಿಸಲಾದ ಬೈಕ್, ಸ್ವಾಮಿ ವಿವೇಕಾನಂದರಂತೆ ಧ್ಯಾನಸ್ಥರಾಗಿರುವ ಮೋದಿಯವರ ಕಲಾಕೃತಿ, ಒಂದು ಸ್ವರ್ಣ ಲೇಪಿತ ರಾಧಾ-ಕೃಷ್ಣ ಮೂರ್ತಿ (ಮೂಲ ಬೆಲೆ- 20,000 ರೂ.), ಬೆಳ್ಳಿ ಲೇಪಿತ ಸ್ಮರಣಿಕೆ (ಮೂಲ ಬೆಲೆ- 30,000 ರೂ.) ಮುಂತಾದವು.
Related Articles
//pmmementos.gov.in ವೆಬ್‌ಸೈಟ್‌ನ ಮೂಲಕ ಪ್ರಧಾನಿ ಉಡುಗೊರೆಗಳ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.
Advertisement
ಸುಲಭ, ಸರಳವೆಬ್ಸೈಟ್ನ ಕ್ಯಾಟಗರಿ ವಿಭಾಗದಲ್ಲಿ ಬ್ರಾಸ್ (ಹಿತ್ತಾಳೆ), ಗೋಲ್ಡ್, ಫೋಟೋ ಫ್ರೆàಮ್, ಸೆರಾಮಿಕ್, ಮೆಟಾಲಿಕ್, ಪಾಪ್, ಕ್ಲಾತ್, ಸಿಲ್ವರ್, ಗ್ಲಾಸ್, ಫೋಟೋ, ವುಡನ್ ಐಟಂ (ಮರದಿಂದ ಮಾಡಿದ ಉಡುಗೊರೆ) ಹಾಗೂ “ಇತರೆ’ ಉಪವಿಭಾಗಗಳಿವೆ. ಹರಾಜಿನಲ್ಲಿ ಪಾಲ್ಗೊಳ್ಳುವವರು ಇವುಗಳ ಮೂಲಕ, ತಮಗೆ ಯಾವ ಬಗೆಯ ಉಡುಗೊರೆಗಳು ಬೇಕೆಂದು ಆಯ್ಕೆ ಮಾಡಿಕೊಳ್ಳಬಹುದು. ಜತೆಗೆ, ಹರಾಜುನಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ “ಬಳಕೆದಾರರ ಮಾರ್ಗಸೂಚಿ’ ಸಹ ಉಂಟು. ಅಂಕಿ-ಅಂಶ:
1900 – ಹರಾಜಿಗಿಡಲಾಗಿರುವ ಒಟ್ಟು ಉಡುಗೊರೆಗಳು
ರೂ. 30,000 – ಗರಿಷ್ಠ ಮೂಲ ಬೆಲೆ
ರೂ. 200 – ಕನಿಷ್ಠ ಮೂಲ ಬೆಲೆ
4.76 ಕೆಜಿ – ಏಕೈಕ ಸ್ವರ್ಣ ಲೇಪಿತ ರಾಧಾ ಕೃಷ್ಣ ಮೂರ್ತಿಯ ತೂಕ
2.22 ಕೆಜಿ – ಹರಾಜಿನಲ್ಲಿರುವ ಏಕೈಕ ಬೆಳ್ಳಿ ಲೇಪಿತ ಸ್ಮರಣಿಕೆಯ ತೂಕ