Advertisement

Canada; ಖಲಿಸ್ಥಾನಿಗಳ ಇರುವಿಕೆ ಒಪ್ಪಿಕೊಂಡ ಪ್ರಧಾನಿ ಜಸ್ಟಿನ್‌ ಟ್ರಾಡೋ

01:54 AM Nov 10, 2024 | Team Udayavani |

ಹೊಸದಿಲ್ಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿರುವ ನಡುವೆಯೇ ಕೆನಡಾದಲ್ಲಿ ಖಲಿಸ್ಥಾನಿಗಳಿರುವುದನ್ನು ಇದೇ ಮೊದಲ ಬಾರಿಗೆ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರಾಡೋ ಒಪ್ಪಿಕೊಂಡಿದ್ದಾರೆ.

Advertisement

ಒಟ್ಟಾವಾದ ಪಾರ್ಲಿಮೆಂಟ್‌ ಹಿಲ್‌ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಟ್ರಾಡೋ ಈ ವಿಷಯ ಒಪ್ಪಿಕೊಂಡಿದ್ದಾರೆ. ಹದೀìಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹಳಸಿತ್ತು. “ಕೆನಡಾದಲ್ಲಿ ಖಲಿಸ್ಥಾನಿಗಳಿದ್ದಾರೆ ಆದರೆ ಅವರೆಲ್ಲರೂ ಸಿಕ್ಖರಲ್ಲ’ ಎಂದು ಅವರು ಹೇಳಿರುವ ವೀಡಿಯೋ ಇದೀಗ ವೈರಲ್‌ ಆಗಿದೆ.

ವಿದ್ಯಾರ್ಥಿಗಳ ತ್ವರಿತ ವೀಸಾ ಯೋಜನೆ ಅಂತ್ಯ!
ಭಾರತ ಸೇರಿ 14 ದೇಶಗಳ ವಿದ್ಯಾರ್ಥಿಗಳಿಗೆ ಸಂಕಷ್ಟ
ಒಟ್ಟಾವ: ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಬೆನ್ನಲ್ಲೇ ವಿದ್ಯಾರ್ಥಿಗಳಿಗಾಗಿ ನೀಡಲಾಗುತ್ತಿದ್ದ “ಜನಪ್ರಿಯ ವೀಸಾ ಯೋಜನೆ’ಯನ್ನು ಕೆನಡಾ ಅಂತ್ಯಗೊಳಿಸಿದೆ. ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳುತ್ತಿದ್ದ ಭಾರತದ ವಿದ್ಯಾರ್ಥಿಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ.

ವಿದ್ಯಾರ್ಥಿಗಳಿಗೆ ವೇಗವಾಗಿ ವೀಸಾ ದೊರಕಿಸಿಕೊಡುವುದಕ್ಕಾಗಿ 2018ರಲ್ಲಿ ಈ ಯೋಜನೆಯನ್ನು ಕೆನಡಾ ಜಾರಿ ಮಾಡಿತ್ತು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ, ಹೆಚ್ಚಿನ ಪ್ರಮಾಣದ ವೀಸಾಗಳಿಗೆ ಅನುಮತಿ ದೊರಕುತ್ತಿತ್ತು. ಅಲ್ಲದೇ ಶೀಘ್ರವಾಗಿ ವೀಸಾ ವಿತರಣೆ ಪ್ರಕ್ರಿಯೆ ನಡೆಯು ತ್ತಿತ್ತು. ಈಗ ಇದನ್ನು ರದ್ದು ಮಾಡಿರುವುದರಿಂದ ಭಾರತ ಸೇರಿದಂತೆ 14 ರಾಷ್ಟ್ರಗಳ ವಿದ್ಯಾರ್ಥಿಗಳು ಸುದೀರ್ಘ‌ ವೀಸಾ ಪ್ರಕ್ರಿಯೆಗೆ ಒಳಗಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಈಗ ಇದರ ರದ್ದು ಏಕೆ?: ಕೆನಡಾದಲ್ಲಿ ವಲಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಮನೆ ಮತ್ತು ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇದನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ಕೆನಡಾ ಹೇಳಿದೆ. ಹೊರದೇಶದವರ ಸಂಖ್ಯೆ ಹೆಚ್ಚಿ­ದ್ದ­ರಿಂದ , ಜೀವನ ನಿರ್ವಹಣ ವೆಚ್ಚ ಮತ್ತು ಆರೋಗ್ಯ ಸೇವೆಗಳು ತುಟ್ಟಿಯಾ­ಗಿವೆ ಎಂದು ಜನ ಆರೋಪಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next