Advertisement
ಮಂಗಳೂರಿಗೆ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಭರದ ಸಿದ್ಧತೆ ನಡೆಯುತ್ತಿದ್ದರೆ, ಪ್ರಧಾನಿ ಆಗಮನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಕಲ ತಯಾರಿ ನಡೆಸುತ್ತಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಮಂಗಳೂರಿನಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಿರುವುದು ಇದು ಪ್ರಥಮ ಬಾರಿಯಾಗಿದೆ. ಜತೆಗೆ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರಾವಳಿಯಲ್ಲೆಡೆ ವ್ಯಾಪಕ ಪ್ರಚಾರ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದಲೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಹೀಗಾಗಿ ಒಟ್ಟು ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
Related Articles
Advertisement
30×60 ಅಡಿ ವೇದಿಕೆಬಿಜೆಪಿ ಬೃಹತ್ ಚುನಾವಣಾ ಪ್ರಚಾರ ಸಭೆಯ ಹಿನ್ನೆಲೆಯಲ್ಲಿ ಪುರಭವನದ ಹಿಂಭಾಗದ ಫುಟ್ಬಾಲ್ ಮೈದಾನದಲ್ಲಿ 30 ಅಡಿ ಎತ್ತರ ಹಾಗೂ 60 ಅಡಿ ಅಗಲದ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಸುಮಾರು 20 ಮಂದಿ ಕುಳಿತುಕೊಳ್ಳಲು ಅವಕಾಶವಿದೆ. ವಾಹನ ನಿಲುಗಡೆ ನಿಷೇಧ
ಪ್ರಧಾನಿ ಮೋದಿ ಅವರು ಮೇ 5ರಂದು ಮಂಗಳೂರು ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನಕ್ಕೆ ಆಗಮಿಸಿ ವಾಪಸ್ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಸಮಯ ವಿವಿಐಪಿಯವರ ಭದ್ರತೆ ಮತ್ತು ಸುರಕ್ಷೆಯ ಸಲುವಾಗಿ ಈ ವ್ಯಾಪ್ತಿಯ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಪ್ರಧಾನ ಮಂತ್ರಿಯವರು ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು- ಮರವೂರು- ಮರಕಡ- ಕಾವೂರು- ಬೊಂದೇಲ್- ಪದವಿ ನಂಗಡಿ- ಯೆಯ್ನಾಡಿ- ಕೆಪಿಟಿ- ಸರ್ಕಿಟ್ ಹೌಸ್- ಬಟ್ಟಗುಡ್ಡೆ, ಕದ್ರಿ ಕಂಬ್ಳ – ಭಾರತ್ ಬೀಡಿ ಕ್ರಾಸ್- ಬಂಟ್ಸ್ ಹಾಸ್ಟೆಲ್- ಡಾ| ಅಂಬೇಡ್ಕರ್ ವೃತ್ತ- ಹಂಪನಕಟ್ಟೆ- ಎ. ಬಿ. ಶೆಟ್ಟಿ ವೃತ್ತ- ನೆಹರೂ ಮೈದಾನದವರೆಗೆ ಹಾಗೂ ನೆಹರೂ ಮೈದಾನದಿಂದ ವಾಪಸ್‌ಹೋಗುವ ಸಮಯ ಕ್ಲಾಕ್ ಟವರ್- ಕೆ. ಬಿ. ಕಟ್ಟೆ- ಲೈಟ್‌ಹೌಸ್ ಹಿಲ್ ರಸ್ತೆ- ಡಾ| ಅಂಬೇಡ್ಕರ್ ವೃತ್ತ- ಬಂಟ್ಸ್‌ಹಾಸ್ಟೆಲ್- ಭಾರತ್ ಬೀಡಿ ಕ್ರಾಸ್- ಕದ್ರಿ ಕಂಬಳ- ಬಟ್ಟಗುಡ್ಡೆ- ಕೆಪಿಟಿ- ಯೆಯ್ನಾಡಿ- ಪದವಿನಂಗಡಿ- ಬೊಂದೇಲ್- ಕಾವೂರು- ಮರಕಡ- ಮರ ವೂರು- ಕೆಂಜಾರು- ಮಂಗಳೂರು ವಿಮಾನ ನಿಲ್ದಾಣದ ವರೆಗೆ ಸಂಚರಿಸುವ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನಗಳ ನಿಲುಗಡೆಯನ್ನು ಮೇ 5ರಂದು ಬೆಳಗ್ಗೆ 8ರಿಂದ ರಾತ್ರಿ 9ರ ವರೆಗೆ ನಿಷೇಧಿಸಲಾಗಿದೆ. ನೆಹರೂ ಮೈದಾನ ಮತ್ತು ಸುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ಮೇ 5ರಂದು ಬೆಳಗ್ಗೆ 8ರಿಂದ ಕಾರ್ಯಕ್ರಮ ಮುಗಿಯುವ ತನಕ ವಾಹನಗಳನ್ನು ಅನಾವಶ್ಯಕ ವಾಗಿ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಮೇ 5ರಂದು ಬೆಳಗ್ಗೆ 8ರಿಂದ ವಿವಿಐಪಿಯವರು ನಿರ್ಗಮಿಸು ವವರೆಗೆ ಸರ್ಕಿಟ್‌ಹೌಸ್ ಆವರಣ ದಲ್ಲಿ ಅನಾವಶ್ಯಕ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.