Advertisement

ಟಿಇಟಿ ಭ್ರಷ್ಟಾಚಾರ: 269 ಶಿಕ್ಷಕರು ಹುದ್ದೆಯಿಂದ ವಜಾ, ಸಂಬಳಕ್ಕೆ ತಡೆ: ಕೋಲ್ಕತಾ ಹೈಕೋರ್ಟ್

05:42 PM Jun 13, 2022 | Team Udayavani |

ನವದೆಹಲಿ: ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 269 ಶಿಕ್ಷಕರು ಶಾಲೆಗೆ ಹಾಜರಾಗುವುದನ್ನು ನಿಷೇಧಿಸಿ ಕೋಲ್ಕತಾ ಹೈಕೋರ್ಟ್ ಸೋಮವಾರ (ಜೂನ್ 13) ತೀರ್ಪು ನೀಡಿದ್ದು, ಈ ಬಗ್ಗೆ ಸಿಬಿಐ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿದೆ.

Advertisement

ಪ್ರಾಥಮಿಕ ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ಭ್ರಷ್ಟಾಚಾರ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಿತ್ತು. ಈ ನಿಟ್ಟಿನಲ್ಲಿ ಕೋಲ್ಕತಾ ಹೈಕೋರ್ಟ್, 2017ರಲ್ಲಿ ಪ್ರಕಟಿಸಿರುವ ಶಿಕ್ಷಕರ ನೇಮಕಾತಿ ಪಟ್ಟಿ ಮತ್ತು ನೇಮಕಾತಿ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ 269 ಶಿಕ್ಷಕರನ್ನು ಅವರ ಹುದ್ದೆಯಿಂದ ವಜಾಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅಷ್ಟೇ ಅಲ್ಲ 269 ಶಿಕ್ಷಕರು ಶಾಲೆಗೆ ಹಾಜರಾಗುವುದನ್ನು ನಿರ್ಬಂಧಿಸಿ, ಅವರ ಸಂಬಳವನ್ನು ತಡೆ ಹಿಡಿಯುವಂತೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.

ಕೋಲ್ಕತಾ ಹೈಕೋರ್ಟ್ ಆದೇಶದಲ್ಲೇನಿದೆ?

  • 2017ರಲ್ಲಿನ 2ನೇ ನೇಮಕಾತಿ ಪಟ್ಟಿ ಕಾನೂನು ಬಾಹಿರವಾಗಿದೆ
  • ಎರಡನೇ ನೇಮಕಾತಿಯಲ್ಲಿ ಆಯ್ಕೆಯಾದ 269 ಮಂದಿ ಶಿಕ್ಷಕರ ಆಯ್ಕೆ ಕಾನೂನು ಬಾಹಿರವಾಗಿದೆ.
  • 269 ಶಿಕ್ಷಕರ ಸಂಬಳವನ್ನು ಅಮಾನತಿನಲ್ಲಿರಿಸುವಂತೆ ಸೂಚನೆ
  • 269 ಶಿಕ್ಷಕರು ಯಾವುದೇ ಕಾರಣಕ್ಕೂ ಶಾಲೆಯೊಳಗೆ ಬರುವಂತಿಲ್ಲ, ಬೋಧಿಸುವಂತೆಯೂ ಇಲ್ಲ
Advertisement

Udayavani is now on Telegram. Click here to join our channel and stay updated with the latest news.

Next