Advertisement

ಗ್ರಾಹಕರಿಗೆ ಬೇವು-ವ್ಯಾಪಾರಿಗೆ ಬೆಲ್ಲ

11:08 AM Apr 02, 2022 | Team Udayavani |

ಸೇಡಂ: ಹಿಂದೂಗಳ ಪಾಲಿನ ಹೊಸ ವಸಂತ ಯುಗಾದಿ ಹಬ್ಬ ವ್ಯಾಪಾರಸ್ಥರ ಪಾಲಿಗೆ ಬೆಲ್ಲವಾದರೆ, ಗ್ರಾಹಕರ ಪಾಲಿಗೆ ಬೇವಾಗಿದೆ.

Advertisement

ಬಿರು ಬಿಸಿಲಿನಲ್ಲಿ ಯುಗಾದಿ ಹಬ್ಬದ ಖರೀದಿಯಲ್ಲಿ ತೊಡಗಿರುವ ಗ್ರಾಹಕರ ಜೇಬು ಕರಗತೊಡಗಿದೆ. ಹಬ್ಬವನ್ನು ಸಡಗರದಿಂದ ಆಚರಿಸುವ ಹುಮ್ಮಸ್ಸಿನಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದ್ದು, ಜನ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ಈ ಬಾರಿಯ ಯುಗಾದಿ ಹಬ್ಬ ಹಲವು ಬೆಲೆ ಏರಿಕೆಗಳಿಂದ ಗ್ರಾಹಕರ ನಿದ್ದೆಗೆಡಿಸಿದೆ. ದಿನನಿತ್ಯ ಬಳಸುವ ಔಷಧಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿದೆ.

ಅಸ್ತಮಾ, ಮಧುಮೇಹ ಹಾಗೂ ಹೃದಯ ಸಂಬಂಧಿ ಔಷಧಗಳ ಬೆಲೆಯಲ್ಲೂ ಭಾರಿ ಏರಿಕೆ ಕಂಡಿದೆ. ಈ ಮಧ್ಯೆ ಯುಗಾದಿ ಹಬ್ಬದಂದು ದೇವಾಲಯಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಸುಪ್ರಸಿದ್ಧ ಐತಿಹಾಸಿಕ ದೇವಾಲಯಗಳಾದ ಪಂಚಲಿಂಗೇಶ್ವರ ದೇವಾಲಯ, ಕೊತ್ತಲ ಬಸವೇಶ್ವರ ದೇವಾಲಯ, ಮೋತಕಪಲ್ಲಿಯ ಬಲಭೀಮಸೇನ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next