Advertisement

ಸ್ಯಾನಿಟೈಸರ್, ಮಾಸ್ಕ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ:ಕೇಂದ್ರ ಸರ್ಕಾರದ ಆದೇಶ

10:08 AM Mar 22, 2020 | Mithun PG |

ನವದೆಹಲಿ: 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರ್ ಬೆಲೆಯನ್ನು 100 ರೂ. ಗಿಂತ ಹೆಚ್ಚು ಮತ್ತು ಮಾಸ್ಕ್ ಬೆಲೆಯನ್ನು 10 ರೂ ಗಳಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಬಾರದೆಂದು ಕೇಂದ್ರ ಸರ್ಕಾರ ಆದೇಶಿಸಿದೆ.

Advertisement

ಈ ಕುರಿತು ಮಾಹಿತಿ ನೀಡಿದ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್, ಕೋವಿಡ್-19 ಆತಂಕ ಹೆಚ್ಚಾದ ಹಿನ್ನಲೆಯಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳ ಬೆಲೆಯನ್ನು ದುಬಾರಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಂಚಿಕೊಂಡಿದ್ದಾರೆ. ಸಾಂಕ್ರಮಿಕ ರೋಗ ತಡೆಗಟ್ಟುವಲ್ಲಿ ಈ ಎರಡೂ ವಸ್ತುಗಳು ಬಹುಮುಖ್ಯ ಪಾತ್ರವಹಿಸುತ್ತದೆ ಎಂದು ಆರೋಗ್ಯ ಇಲಾಖೆಯೂ ಖಾತರಿಪಡಿಸಿದೆ.. ಆದುದರಿಂದ 2 ವಸ್ತುಗಳ ಬೆಲೆಯನ್ನು ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಾಟ ಮಾಡುವಂತಿಲ್ಲ.

ನಕಲಿ ಸ್ಯಾನಿಟೈಸರ್ ಗಳ ಮಾರಾಟದ  ಜಾಲವೂ ಸಕ್ರಿಯರಾಗಿರುವುದು ತಿಳಿದುಬಂದಿದೆ. ಈ ಕುರಿತು ಗಂಭಿರ ಪ್ರಕರಣ ದಾಖಲಿಸಲಾಗುವುದು. ಆಧಿಕೃತವಾಗಿ ದಾಖಲೆ ಇಲ್ಲದ ಯಾವುದೇ ಮೂರನೇ ವ್ಯಕ್ತಿ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಭಾರತದಲ್ಲಿ ಕೋವಿಡ್ 19 ಹರಡುವ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು ಜನರು ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದರಿಂದ ಈ ಅಗತ್ಯ ವಸ್ತುಗಳ ಅಭಾವವೂ ಕಂಡು ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next