Advertisement

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ

12:04 PM Jun 17, 2024 | Team Udayavani |

ಹಾವೇರಿ: ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತವಾಗಿದೆ. ನೇರವಾಗಿ ರಾಬರಿ ಮತ್ತು ಡಕಾಯತಿ ಇದು. ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ. ಸಾರ್ವಜನಿಕರ ಜೇಬಿಗೆ ಸರಕಾರ ಕತ್ತರಿ ಹಾಕಿದೆ. ಗ್ಯಾರಂಟಿ ಕೊಟ್ಟರೂ ಜನರು ಕೈ ಹಿಡಿಯಲಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹರಿಹಾಯ್ದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,187 ಕೋಟಿ ಭ್ರಷ್ಟಾಚಾರ ಮಾಡಿ ಆಂಧ್ರ ಪ್ರದೇಶದ ಚುನಾವಣೆಗೆ ಬಳಸಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕೈವಾಡವಿದೆ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪ್ರಕರಣ ಮುಚ್ಚಿ ಹಾಕುವುದಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಯಂತ್ರ ಕುಸಿದು ಬಿದ್ದಿದೆ. ಆಡಳಿತ ನಡೆಸಲು ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ಮೊದಲು ಸಿಎಂ, ಡಿಸಿಎಂ ತಲೆದಂಡ ಮಾಡಿಕೊಂಡು ಮಂತ್ರಿಗಳ ರಾಜೀನಾಮೆ ಕೇಳುವುದು ಸೂಕ್ತ ಎಂದರು.

ಒಂದು ವರ್ಷದಿಂದ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. ಹಾಲಿನ‌ ದರವನ್ನು ಹಾವೇರಿಯಲ್ಲಿ ಕಡಿಮೆ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.

ಬ್ಯಾನ್ ನಿಂದ ಏನು ಪ್ರಯೋಜನ: ಅವತ್ತು ದರ್ಶನಗ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ರೇಣುಕಾ ಸ್ವಾಮಿ ಹತ್ಯೆಯಾಗಿರುವುದು ಹೇಯ ಕೃತ್ಯ, ಯಾರೂ ಇದನ್ನು ಕ್ಷಮಿಸುವುದಿಲ್ಲ. ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಬ್ಯಾನ್ ಮಾಡುವುದರಿಂದ ಏನು ಪ್ರಯೋಜನ, ಈಗಾಗಲೇ ಅವರು ಜೈಲಿನಲ್ಲಿದ್ದಾರೆ ಎಂದು ಬಿ.ಸಿ ಪಾಟೀಲ್ ಹೇಳಿದರು.

ಹರಕೆಯ ಕುರಿಯಾಗುವೆ..! ಶಿಗ್ಗಾವಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಸಿ ಪಾಟೀಲ ಸ್ಪರ್ಧೆ ಮಾಡುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಗೆ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದೆ. ನಾವು ಕಷ್ಟಪಟ್ಟಲ್ಲಿ ಗೆಲ್ಲಲು ಆಗಿಲ್ಲ, ಪಕ್ಷದಿಂದ ಅಲ್ಲಿಯ ಅಭ್ಯರ್ಥಿ ಹಾಕಿದ್ದರೆ ನಾವು ಹೋಗಿ ಗೆಲ್ಲಿಸುತ್ತೇವೆ. ನಾನು ಅಲ್ಲಿಗೆ ಹೋದರೆ ಹರಕೆಯ ಕುರಿಯಾಗುತ್ತೇನೆ. ಈ ಸರಕಾರ ಬಂದರೆ ರೇಪ್ ಗ್ಯಾರಂಟಿ, ಕೊಲೆ ಸುಲಿಗೆ ಗ್ಯಾರಂಟಿ, ದರ ಏರಿಕೆ ಗ್ಯಾರಂಟಿ, ಬರಗಾಲ ಗ್ಯಾರಂಟಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next