ಬೆಂಗಳೂರು: ಮೊಬೈಲ್ ಫೋನ್‌ಗಳ ಮಾರಾಟ ಕ್ಷೇತ್ರದ ದಕ್ಷಿಣ ಭಾರತದ ಖ್ಯಾತ ಸಂಗೀತಾ ಮೊಬೈಲ್ಸ್ ಪ್ರೈ. ಲಿ., 2018ರ ಹೊಸ ವರ್ಷದ ಕೊಡುಗೆಯಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆ ವಿರುದ್ಧ “ಸಂಗೀತಾ ಪ್ರೈಸ್ ಚಾಲೆಂಜ್’ ಯೋಜನೆಯನ್ನು ರೂಪಿಸಿದೆ. ಸಂಗೀತಾ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ದೇಶಾದ್ಯಂತ ಎಲ್ಲ 430 ಸಂಗೀತಾ ಸ್ಟೋರ್‌ಗಳಲ್ಲಿ ಹಾಗೂ ರಾಜ್ಯದ 210ಕ್ಕೂ ಹೆಚ್ಚು ಮಳಿಗೆಗಳಲ್ಲಿ ಆನ್‌ಲೈನ್ ಬೆಲೆಗೆ ಸವಾಲೆಸೆಯುವ ಈ ಮಾರಾಟ ಯೋಜನೆಯನ್ನು ಹಮ್ಮಿಕೊಂಡಿದೆ.
ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್. ಸುಭಾಷ್‌ಚಂದ್ರ ಅವರು ಸೋಮವಾರ ಮೈಸೂರಿನ ಫೋರಂ ಮಾಲ್‌ನಲ್ಲಿ ತೆರೆಯಲಿರುವ ಶೋರೂಮ್ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಉದಯವಾಣಿ ಜತೆ ಮಾತನಾಡಿದರು. ಯಾರೇ ಆಗಲಿ ಮೊಬೈಲ್ ಫೋನ್ ಕೊಳ್ಳುವ ಮುನ್ನ ನೇರವಾಗಿ ಮಳಿಗೆಗಳಿಗೆ ಹೋಗಿ ತಮಗಿಷ್ಟವಾದ ಫೋನ್ ಅನ್ನು ಆಯ್ಕೆ ಮಾಡಿಕೊಂಡು, ಪರಿಶೀಲಿಸಿ ಅದರ ಉಪಯೋಗ ಮತ್ತು ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ಸಿಗುತ್ತದೆಂದು ಬೇಕಾದ ಉತ್ಪನ್ನಗಳನ್ನು ಬುಕ್ ಮಾಡಿ, ಪಾರ್ಸೆಲ್ ಬಂದ ಮೇಲೆ ಮೋಸ ಹೋಗಿರುವ ಪ್ರಸಂಗಗಳನ್ನು ಕಂಡಿದ್ದೇವೆ. ಆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದೇ ಆನ್‌ಲೈನ್ ದರಕ್ಕೆ ನಮ್ಮಲ್ಲಿ ಫೋನ್‌ಗಳು ದೊರೆಯುತ್ತವೆ ಎನ್ನುವುದನ್ನು ತೋರಿಸಲು ಸಂಗೀತಾ ಪ್ರೈಸ್ ಚಾಲೆಂಜ್ ಯೋಜನೆಯನ್ನು ಪರಿಚಯಿಸಿದೆ. ನಮಗೆ ಇದೊಂದು ದೊಡ್ಡ ಸವಾಲೆನಿಸಿದರೂ ಗ್ರಾಹಕರ ಹಿತದೃಷ್ಟಿಯಲ್ಲಿ ಇದನ್ನು ಡಿ.22 ರಿಂದ ಹಮ್ಮಿಕೊಂಡಿದ್ದೇವೆ ಎಂದರು.
ನಮ್ಮದು ಗ್ರಾಹಕ ಸ್ನೇಹಿ ಸಂಸ್ಥೆ. ನಮ್ಮಲ್ಲಿ ಬರುವ ಗ್ರಾಹಕರಿಗೆ ವರ್ಷಪೂರ್ತಿ ಒಂದಿಲ್ಲೊಂದು ಕೊಡುಗೆ, ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಸಂಗೀತಾ ಪ್ರೈಸ್ ಡ್ರಾಪ್ ಪ್ರೊಟೆಕ್ಷನ್, ಸಂಗೀತಾ ಡ್ಯಾಮೇಜ್ ಪ್ರೊಟೆಕ್ಷನ್, ಕ್ಯಾಷ್ ಬ್ಯಾಕ್ ಆಫರ್, ಒಂದು ವರ್ಷ ಉಚಿತ ಏರ್ ಆ್ಯಂಬುಲೆನ್ಸ್ ಸೇವೆ, 250 ರೂ. ಮೌಲ್ಯದ ಬಿಟ್‌ಕಾಯಿನ್, ಶೇ.80 ರವರೆಗೆ ಖಚಿತ ಫೋನ್ ಬೈ ಬ್ಯಾಕ್, ಉಚಿತ ಜಿಯೋ ಸಿಮ್ (100ಜಿಬಿ ವರೆಗೆ ಡಾಟಾ), ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನಲ್ಲಿ ಮೊಬೈಲ್ ಕೊಂಡಲ್ಲಿ ಎಕ್ಸ್‌ಟ್ರಾ ಶೇ.5 ರಷ್ಟು ಕ್ಯಾಷ್ ಬ್ಯಾಕ್ ಮುಂತಾದ ಕೊಡುಗೆಗಳಿರುತ್ತವೆ.
10 ಕೋಟಿ + 5 ಕೋಟಿ ಪರಿಹಾರ: ಸಂಗೀತಾ ಮೊಬೈಲ್ಸ್‌ನ ವಿಶೇಷ ಸಂಗತಿಯೆಂದರೆ ಇದುವರೆಗೆ ಪ್ರೈಸ್ ಡ್ರಾಪ್ ಪ್ರೊಟೆಕ್ಷನ್‌ನಲ್ಲಿ 10 ಕೋಟಿ ರೂ. ಹಾಗೂ ಡ್ಯಾಮೇಜ್ ಪ್ರೊಟೆಕ್ಷನ್‌ನಲ್ಲಿ 5 ಕೋಟಿ ರೂ.ಗಳನ್ನು 1 ಲಕ್ಷ 15 ಸಾವಿರ ಗ್ರಾಹಕರು ಪಡೆದಿರುವುದು ಒಂದು ಮೈಲಿಗಲ್ಲಾಗಿದೆ. ಅಲ್ಲದೆ, ದೇಶದಲ್ಲಿ ಅತಿಹೆಚ್ಚು ಮೊಬೈಲ್ ಫೋನ್ ಮಾರಾಟ ಮಳಿಗೆಗಳನ್ನು ಹೊಂದಿರುವ ಸಂಗೀತಾ ಮೊಬೈಲ್ಸ್ ಈ ಮಾಸಾಂತ್ಯದಲ್ಲಿ ವಾರಣಾಸಿಯಲ್ಲಿ 10 ಶೋರೂಮ್‌ಗಳನ್ನು ತೆರೆಯುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಭಾರತದ ಯಾವುದೇ ಮೂಲೆಯ ಸಂಗೀತಾ ಶೋರೂಮ್‌ನಲ್ಲಿ ಮೊಬೈಲ್ ಖರೀದಿಸಿದ ಗ್ರಾಹಕರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸಲು ಉಚಿತ ಏರ್ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಸಂಸ್ಥೆಯ ಅಸಂಖ್ಯಾತ ಗ್ರಾಹಕರ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ತೋರಲು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸಿದ್ದೇವೆ. ಈ ಸೌಲಭ್ಯವನ್ನು ಒಂದು ವರ್ಷ ಕಾಲ ಉಚಿತವಾಗಿ ನೀಡಲಾಗುವುದು. ಸ್ಮಾರ್ಟ್‌ಫೋನ್ ಖರೀದಿಗೆ ಪ್ರತಿಯಾಗಿ ಆರೋಗ್ಯ ಸೇವೆಯ ಪ್ರತ್ಯೇಕ ಕಾರ್ಡ್ ವಿತರಿಸಲಾಗುವುದು.
-ಎಲ್. ಸುಭಾಷ್‌ಚಂದ್ರ, ವ್ಯವಸ್ಥಾಪಕ ನಿರ್ದೇಶಕ