Advertisement

ಪಾಸ್ಟಿಕ್‌ ತ್ಯಾಜ್ಯ ನಿರ್ವಹಣೆಗೆ ಪಿಆರ್‌ಎಫ್ ಘಟಕ

04:58 PM Oct 11, 2022 | Team Udayavani |

ಉಡುಪಿ: ನಗರದಲ್ಲಿ ತ್ಯಾಜ್ಯ ನಿರ್ವಹಣೆ ದಿನೇದಿನೆ ಸವಾಲಾಗಿ ಪರಿಣಮಿಸುತ್ತಿದೆ. ಹಸಿ ತ್ಯಾಜ್ಯ ಮತ್ತು ಒಣ ತ್ಯಾಜ್ಯದ ಸಂಗ್ರಹದ ಪ್ರಮಾಣ ಹೆಚ್ಚಳವಾಗುತ್ತಿದೆ. ಅದರಲ್ಲಿಯೂ ಹಸಿ ತ್ಯಾಜ್ಯಕ್ಕಿಂತ ಒಣ ತ್ಯಾಜ್ಯ ಸಮಸೆಯ ಗಂಭೀರವಾಗಿದ್ದು, ಇದೀಗ ನಗರಸಭೆಯು ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸಿ ತ್ಯಾಜ್ಯದಿಂದಲೇ ಆದಾಯ ರೂಪಿಸಲು ಯೋಜನೆ ರೂಪಿಸಿದೆ.

Advertisement

ಶ್ರೀ ಸಿದ್ಧಿನಗರ ಸ್ತ್ರೀಶಕ್ತಿ ಗುಂಪು, ಸಾಹಸ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸಹಯೋಗದೊಂದಿಗೆ ಪಿಆರ್‌ಎಫ್ (ಪ್ಲಾಸ್ಟಿಕ್‌ ರಿಕವರಿ ಫೆಸಿಲಿಟಿ) ಉಡುಪಿ ಚಿಟಾ³ಡಿ ಹನುಮಾನ್‌ ಗ್ಯಾರೇಜ್‌ ಸಮೀಪ ನಿರ್ಮಿಸಿದ್ದು, 61 ಲಕ್ಷ ರೂ., ವೆಚ್ಚದಲ್ಲಿ ಆಧುನಿಕ ಯಂತ್ರೋಪಕರಣಗಳಾದ ಮೆಟೀರಿಯಲ್‌ ಪ್ರೊಸೆಸಿಂಗ್‌ ಇಕ್ವಿಪ್‌ ಮೆಂಟ್‌, ಮೆಝ್ನೈನ್‌ ಪ್ಲೋರ್‌, ಸðಬ್ಬರ್‌, ಹ್ಯಾಂಡ್ಲಿಂಗ್‌ ಇಕ್ವಿಪ್‌ಮೆಂಟ್‌, ಸೇಫ್ಟಿ ಇಕ್ವಿಪ್‌ಮೆಂಟ್‌, ಕಚೇರಿ ಮೂಲ ಸೌಕರ್ಯವನ್ನು ಒಳಗೊಂಡಿದೆ. ಸಾಹಸ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ತಂಡವು ಐಕ್ಯ ಸಂಸ್ಥೆಯ ಇಪಿಆರ್‌ ಅನುದಾನವನ್ನು ಬಳಸಿಕೊಂಡು ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಇದರ ಸಂಪೂರ್ಣ ನಿರ್ವಹಣೆಯನ್ನು ಸ್ತ್ರೀಶಕ್ತಿ ಗುಂಪು ಮಾಡಲಿದೆ. ಇದಕ್ಕೆ ಬೇಕಾದ ಪೂರಕ ತರಬೇತಿ, ಮಾರ್ಗದರ್ಶನವನ್ನು ನಗರಸಭೆ ವತಿಯಿಂದ ಸಾಹಸ್‌ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ತಂಡ ನೀಡಿದೆ.

14 ಬಗೆಯಲ್ಲಿ ವಿಂಗಡಣೆ

ಪ್ಲಾಸ್ಟಿಕ್‌ ತ್ಯಾಜ್ಯಗಳಾದ ಶಾಂಪು ಬಾಟಲಿ, ಜ್ಯೂಸ್‌, ಕುಡಿಯುವ ನೀರಿನ ಬಾಟಲಿ, ವಿವಿಧ ಬಗೆಯ ಇತರ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಯಂತ್ರೋಪಕರಣದ ಸಹಾಯದಿಂದ 14 ಬಗೆಯಲ್ಲಿ ವಿಂಗಡಣೆ ಮಾಡಿ ಮರು ಬಳಕೆಗಾಗಿ ತಮಿಳುನಾಡು, ಮಂಗಳೂರು, ಬೆಂಗಳೂರಿನ ಸಂಸ್ಥೆಗಳಿಗೆ ಪೂರೈಕೆ ಮಾಡಲಾಗುತ್ತದೆ.

ದಿನಕ್ಕೆ 18 ಟನ್‌ ಒಣ ತ್ಯಾಜ್ಯ ಉತ್ಪತ್ತಿ: ನಗರಸಭೆಯ 35 ವಾರ್ಡ್‌ಗಳಲ್ಲಿ ಪ್ರತಿನಿತ್ಯ 18 ಟನ್‌ ಒಣತಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ 6 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯದ ಪಾಲು. ಇಷ್ಟೊಂದು ಪ್ರಮಾಣದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಈ ಘಟಕದಲ್ಲಿ ವೈಜ್ಞಾನಿಕವಾಗಿ ವಿಂಗಡಿಸಲಾಗುತ್ತದೆ. ಇದಕ್ಕೆ ಬೇಕಾದ ಸಾಗಾಟ ವ್ಯವಸ್ಥೆ, ತರಬೇತಿ ಪಡೆದ 8 ಜನ ಸಿಬಂದಿ, ವಿಶಾಲವಾಗಿರುವ ಘಟಕದಲ್ಲಿ ಮೂಲ ಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯಂತ್ರೋಪಕರಣಗಳನ್ನು ಅಳವಡಿಸಲಾಗುತ್ತದೆ. ಯೋಜನೆ ವೆಚ್ಚ 1 ಕೋ. ರೂ.ವರೆಗೆ ತಲುಪಲಿದೆ. – ಸ್ನೇಹಾ, ಪರಿಸರ ಅಧಿಕಾರಿ, ಉಡುಪಿ ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next