Advertisement

ಮಲೇರಿಯಾ ತಡೆಗೆ ಸಹಕರಿಸಿ

04:03 PM Apr 28, 2022 | Shwetha M |

ಇಂಡಿ: ಮನೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಮಲೇರಿಯಾ ಬರದಂತೆ ತಡೆಗಟ್ಟಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಲಸಂಗಿ ವೈದ್ಯಾಧಿಕಾರಿ ಡಾ| ಸೀಮಾ ಅಮರಿನ್‌ ಬಾನು ಹೇಳಿದರು.

Advertisement

ಬುಧವಾರ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಮಲೇರಿಯಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಅನಾಫಿಲಿಸ್‌ ಸೊಳ್ಳೆ ಕಚ್ಚುವುದರಿಂದ ಕೆಂಪು ರಕ್ತದ ಕಣಗಳು ನಾಶಪಡಿಸುತ್ತದೆ. ಮಲೇರಿಯಾ ಜ್ವರ ಕೇವಲ ನಮ್ಮ ಭಾರತದಲ್ಲಿ ಅಷ್ಟೇಯಲ್ಲ ಇದು ಇಡಿ ವಿಶ್ವದಾದ್ಯಂತ ಮಾರಕ ಕಾಯಿಲೆ ಎಂಬ ಕುಖ್ಯಾತಿ ಪಡೆದಿದೆ ಎಂದರು.

ವಿಶೇಷವಾಗಿ ಉಷ್ಣ ವಲಯ ಪ್ರದೇಶಗಳಲ್ಲಿ ಇದು ಜನರಲ್ಲಿ ನಡುಕ ಹುಟ್ಟಿಸಿದೆ. ಅನಾಫಿಲಿಸ್‌ ಹೆಣ್ಣು ಸೊಳ್ಳೆ ಪ್ಲಾಸ್ಮೋಡಿಯಂ ಎಂಬ ಪ್ಯಾರಾಸೈಟ್‌ ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹತ್ತಿಸುತ್ತದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ಮಲೇರಿಯಾ ಸೋಂಕಿತ ಸೊಳ್ಳೆಯು ವ್ಯಕ್ತಿಯನ್ನು ಕಡಿದ 4ರಿಂದ 7ದಿನಗಳ ಒಳಗಾಗಿ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆದರೆ ತಲೆನೋವು, ಜ್ವರ, ರಕ್ತಸ್ರಾವ ಅನೇಕ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ. ಮಲೇರಿಯಾನ್ನು ತಡೆಗಟ್ಟಲು ಆದಷ್ಟೂ ಸೊಳ್ಳೆಗಳಿಂದ ದೂರವಿರಿ. ಮನೆಯ ಸುತ್ತ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿ ನೀರು ಸಂಗ್ರಹವಾಗಲು ಬಿಡಬೇಡಿ ಎಂದರು.

ಪ್ರತಿ ಮನೆ ಮನೆಗೂ ಆಶಾ ಕಾರ್ಯಕರ್ತೆಯರು ಹೋಗಿ ಲಾರ್ವಾ ಸಮೀಕ್ಷೆ ಮಾಡಲಿದ್ದು ಸಾರ್ವಜನಿಕರು ಸಹಕರಿಸಿ ಎಂದರು. ಗ್ರಾಪಂ ಅಧ್ಯಕ್ಷೆ ಕವಿತಾ ಹೊನಕೋರೆ, ಭುವನೇಶ್ವರಿ ಬಂಗಲಿ, ರೇಷ್ಮಾ ಉತ್ಸಾದ, ಶಕ್ತಿಕುಮಾರ ಬನಸೋಡೆ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next