Advertisement
ಪರಿಣಾಮಕಾರಿ ನಿರ್ವಹಣೆಹಲವು ದೇಶಗಳಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಚಿಕಿತ್ಸೆಗೆ ನಿರ್ದಿಷ್ಟ ಸವಲತ್ತುಗಳಿಲ್ಲದೇ ಆರೋಗ್ಯ ವ್ಯವಸ್ಥೆ ಕೆಟ್ಟದಾಗಿದೆ. ಕೊರೊನಾ ಪ್ರಾರಂಭವಾದಗಿನಿಂದ ಈ ಮಾತುಗಳು ಕೇಳಿ ಬರುತ್ತಲೇ ಇವೆ. ಆದರೆ ಕಜಕಿಸ್ಥಾನದ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ವಾಸ್ತವದ ಸ್ಥಿತಿ ಬೇರೆಯೇ ಇದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದರೂ ಧೃತಿಗೆೆಡದ ಕಝಕಿಸ್ತಾನದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ವ್ಯವಸ್ಥಿತವಾಗಿ ಚಿಕಿತ್ಸೆ ಮತ್ತು ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದೆ. ಸರಾಸರಿ 1ಲಕ್ಷ ಜನರಲ್ಲಿ 90 ಸಾವಿರ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸುತ್ತಿದ್ದು, ತ್ವರಿತವಾಗಿ ಸೋಂಕು ಮೂಲ ಪತ್ತೆ ಮಾಡುವಲ್ಲಿ ಅಗತ್ಯವಿರುವ ಕ್ರಮಗಳನ್ನು ದೇಶ ಜಾರಿ ಮಾಡಿದೆ. ಫ್ರಾನ್ಸ್, ಜರ್ಮನಿ, ಕೆನಡಾ ಮತ್ತು ಇತರ ಹಲವು ದೇಶಗಳು ನಡೆಸುವುದಕ್ಕಿಂತ ಅತೀ ಹೆಚ್ಚು ಸೋಂಕು ಪರೀಕ್ಷೆಗಳನ್ನು ಕಜಕಿಸ್ಥಾನನಡೆಸುತ್ತಿದೆ. ಅಲ್ಲಿ ಸರಿಸುಮಾರು 1,400 ಹೊಸ ಪ್ರಕರಣಗಳು ದಾಖಲಾಗುತ್ತಿದೆ. ಸೋಂಕು ಏರಿಕೆ ಪ್ರಮಾಣ ಶೇ.3ರಷ್ಟಿದೆ. ಇಲ್ಲಿಯವರೆಗೆ ದೇಶದಲ್ಲಿ ಸುಮಾರು 50 ಸಾವಿರ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 23 ಸಾವಿರದಷ್ಟು ಪ್ರಕರಣಗಳು ಲಕ್ಷಣ ರಹಿತವಾಗಿವೆ. ಬಿಕ್ಕಟ್ಟು ತಡೆಯುವ ವಿಶ್ವಾಸವನ್ನು ಅಲ್ಲಿನ ಸರಕಾರ ವ್ಯಕ್ತಪಡಿಸಿದೆ.