Advertisement
ಪ್ರಥಮ ಆದ್ಯತೆ ಏನು?ಅಪರಾಧ ಕೃತ್ಯಗಳ ನಿಯಂತ್ರಣ ಮತ್ತು ಪತ್ತೆಗೆ ಕ್ರಮ ಹಾಗೂ ಸುಗಮ ಸಂಚಾರ ನಿರ್ವಹಣೆಗೆ ಪ್ರಥಮ ಆದ್ಯತೆ. ಇದಕ್ಕೆ ಜನರ ಸಹಕಾರ ಅಗತ್ಯ. ಅದು ಸಿಕ್ಕಾಗ ಯಾವುದೇ ಕೆಲಸವನ್ನು ಸಮರ್ಪಕವಾಗಿ ಹಾಗೂ ದಕ್ಷವಾಗಿ ನಿರ್ವಹಿಸುವುದು ಸಾಧ್ಯ.
ಇಲ್ಲಿನ ಜನರು ಸುಶಿಕ್ಷಿತರು ಮತ್ತು ಒಳ್ಳೆಯವರು. ಇಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ ಎಂಬ ಮಾತುಗಳನ್ನು ಸಾಕಷ್ಟು ಅಧಿಕಾರಿಗಳಿಂದ ಕೇಳಿ ತಿಳಿದಿದ್ದೇನೆ. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಜನರು ಸಹಕರಿಸುತ್ತಾರೆ ಎಂಬ ನಿರೀಕ್ಷೆ ಇದೆ. ಮಂಗಳೂರು ನಗರವು ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಹೆಸರಾದ ಪ್ರದೇಶ. ಆದರೆ ಇಲ್ಲಿ ಆಗಿಂದಾಗ್ಗೆ ಕೋಮು ಸಂಬಂಧಿತ ಸಂಘರ್ಷಗಳು ನಡೆಯು ತ್ತಿರುತ್ತವೆ ಎಂಬ ಅಪವಾದ ಕೂಡ ಇದ್ದು, ಇದು ನಿಜಕ್ಕೂ ತುಂಬಾ ವಿಷಾದದ ಸಂಗತಿ. ನಗರದಲ್ಲಿ ಅನಧಿಕೃತ ಕ್ಲಬ್‌ಗಳು ಕಾರ್ಯಾಚರಿಸುತ್ತಿವೆ ಎಂಬ ಆರೋಪವಿದೆ. ಅದನ್ನು ಹೇಗೆ ನಿಭಾಯಿಸುವಿರಿ?
ನಗರದಲ್ಲಿ ಸ್ಕಿಲ್ ಗೇಮ್, ಇಸ್ಪೀಟ್ ಕ್ಲಬ್, ಮಸಾಜ್ ಪಾರ್ಲರ್ ಮತ್ತಿತರ ಕಡೆಗಳಲ್ಲಿ ಅನಧಿಕೃತ ವ್ಯವಹಾರಗಳು ನಡೆಯುತ್ತಿವೆ ಎಂಬ ವಿಚಾರ ನನ್ನ ಗಮನಕ್ಕೂ ಬಂದಿವೆ. ಅವುಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಎಲ್ಲಿಯೇ ನಡೆದರೂ ಅವುಗಳನ್ನು ಮಟ್ಟ ಹಾಕಲು ಹೆಚ್ಚಿನ ಗಮನಹರಿಸಲಾಗುವುದು.
Related Articles
ಇಲ್ಲಿ ಖಾಸಗಿ ಬಸ್ಸುಗಳು ಜಾಸ್ತಿ ಇವೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ಅಥವಾ ಸಾರ್ವಜನಿಕರಿಗೆ ಸಮಸ್ಯೆಗಳೇನಾದರೂ ಆಗುತ್ತಿವೆಯೇ ಎನ್ನುವುದನ್ನು ಅರ್ಥ ಮಾಡಿಕೊಂಡು ಆ ದಿಕ್ಕಿನಲ್ಲಿ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ.
Advertisement
ಎಂ ಟ್ರ್ಯಾಕ್ ಯೋಜನೆಸಂಚಾರ ವ್ಯವಸ್ಥೆ ಸುಧಾರಣೆ ಸಂಬಂಧಿಸಿ ‘ಎಂ ಟ್ರ್ಯಾಕ್ ‘ ಮೊದಲ ಹಂತದ ಯೋಜನೆಯ ಕಾಮಗಾರಿಗಳು ಈಗಾಗಲೇ ಬಹುತೇಕ ಪೂರ್ತಿಗೊಂಡಿವೆ. ಈಗ ಎರಡನೇ ಹಂತದ ‘ಎಂ- ಟ್ರ್ಯಾಕ್ ‘ ಯೋಜನೆಯಡಿ 50 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಪ್ರಮುಖ ಜಂಕ್ಷನ್‌ಗಳ ಸುಧಾರಣೆ, ಸುಗಮ ಸಂಚಾರ ಸಂಬಂಧಿತ ಪರಿಕರಗಳ ವ್ಯವಸ್ಥೆ, ಶಿಕ್ಷಣ ಮತ್ತು ತರಬೇತಿ ಇತ್ಯಾದಿ ವಿಷಯಗಳಿವೆ. ಶೀಘ್ರ ಇದರ ಅನುಷ್ಠಾನವಾಗಲಿದೆ. ಹಿಲರಿ ಕ್ರಾಸಾ