Advertisement

Prevention of air pollution; ಪಟಾಕಿ ಬಳಕೆ ಆದೇಶ ಇಡೀ ದೇಶಕ್ಕೆ ಅನ್ವಯ

12:45 AM Nov 08, 2023 | Team Udayavani |

ಹೊಸದಿಲ್ಲಿ: ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪಟಾಕಿ ತಯಾರಿಕೆಯಲ್ಲಿ ನಿಷೇಧಿತ ರಾಸಾಯನಿಕಗಳನ್ನು ಬಳಸದಂತೆ ನೀಡಿರುವ ಆದೇಶ ಬರೀ ದಿಲ್ಲಿ-ಎನ್‌ಸಿಆರ್‌ಗೆ ಸೀಮಿತವಾದದ್ದಲ್ಲ, ಇಡೀ ದೇಶಕ್ಕೆ ಅನ್ವಯವಾ ಗು ವಂಥದ್ದು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

Advertisement

ರಾಜಸ್ಥಾನದಲ್ಲೂ ಕೋರ್ಟ್‌ನ ಆದೇಶ ಪಾಲಿಸಿ ಅಂಥ ಪಟಾಕಿಗಳ ಬಳಕೆಯನ್ನು ತಡೆಯುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್‌ ಅವರ ನ್ಯಾಯಪೀಠ ಆಲಿಸಿದೆ. ಈ ವೇಳೆ ನ್ಯಾಯಾ ಲಯದ ಆದೇಶ ಕೇವಲ ದಿಲ್ಲಿ ಮತ್ತದರ ಸುತ್ತ ಲಿನ ರಾಜ್ಯಗಳಿಗೆ ಮಾತ್ರ ಸೀಮಿತವಾದದ್ದು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಇದು ಇಡೀ ದೇಶಕ್ಕೆ ನೀಡಿರುವ ಆದೇಶ ಎಲ್ಲ ರಾಜ್ಯಗಳೂ ಇದನ್ನು ಪಾಲಿಸಬೇಕು ಎಂದಿದೆ. ಇದಲ್ಲದೇ, ನ್ಯಾಯಪೀಠ ಕಳೆ ಸುಡುವಿಕೆ ವಿಚಾರವನ್ನು ಕೈಗೆತ್ತಿ ಕೊಂಡು ಪಂಜಾಬ್‌, ಹರಿಯಾಣ, ಉತ್ತರಪ್ರದೇಶ, ರಾಜ ಸ್ಥಾನ ಸರಕಾರವನ್ನು ತರಾಟೆ ತೆಗೆದುಕೊಂಡಿದೆ. ಈ ರಾಜ್ಯ ಗಳಲ್ಲಿ ಕಳೆಸುಡುವ ಪ್ರಮಾಣ ಮಿತಿ ಮೀರುತ್ತಿದೆ ನೀವು ಹೇಗೆ ಮಾಡುತ್ತಿರೋ ಗೊತ್ತಿಲ್ಲ, ಒಟ್ಟಾರೆ ಕಳೆ ಸುಡುವಿಕೆ ನಿಲ್ಲ ಬೇಕು ಎಂದಿದೆ. ಇದೇ ವೇಳೆ ದಿಲ್ಲಿ ಸರಕಾರದ ಸರಿ-ಬೆಸ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next