Advertisement

ಪರಿಹಾರ ನೀಡುವ ಬದಲು ಆತ್ಮಹತ್ಯೆ ತಡೆಯಿರಿ: ಸುಪ್ರೀಂ

08:36 AM Jul 08, 2017 | |

ಹೊಸದಿಲ್ಲಿ: “ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯುವುದು ಸರಕಾರದ ಕೆಲಸವೇ ಹೊರತು, ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಪರಿಹಾರ ನೀಡುವುದಲ್ಲ.’ ಇದು ತಮಿಳುನಾಡು ಸರಕಾರದ ವಿರುದ್ಧ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿರುವ ಪರಿ. ಅಷ್ಟೇ ಅಲ್ಲ, “ಬೆಳೆ ಹಾನಿಯಾದ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಸುಸ್ತಿದಾರ ರೈತರ ಕೃಷಿ ಉಪಕರಣಗಳನ್ನು ಜಪ್ತಿ ಮಾಡಬಾರದು,’ ಎಂದೂ ತಾಕೀತು ಮಾಡಿದೆ.

Advertisement

ಸಾವಿರಾರು ಕೋಟಿ ರೂ. ಸಾಲ ಮಾಡಿ ವಂಚಿಸಿದ ವಿಜಯ್‌ ಮಲ್ಯ ವಿದೇಶದಲ್ಲಿ ಅವಿತುಕೊಳ್ಳಲು ಬಿಟ್ಟಿರುವ ಬ್ಯಾಂಕ್‌ ಗಳು, ಅಮಾಯಕ ರೈತರ ಟ್ರ್ಯಾಕ್ಟರ್‌ ಮತ್ತಿತರ ಕೃಷಿ ಸಾಧನಗಳನ್ನು ಜಪ್ತಿ ಮಾಡಿ ಅಮಾನವೀಯವಾಗಿ ವರ್ತಿಸು ತ್ತಿವೆ. ಇದರಿಂದ ರೈತರು ಆತ್ಮಹತ್ಯೆಗೆ ಶರಣಾ ಗುತ್ತಿದ್ದು, ಅವರನ್ನು ಈ ಸ್ಥಿತಿಯಿಂದ ಪಾರುಮಾಡಬೇಕೆಂದು ಕೋರಿ ಎನ್‌ಜಿಒವೊಂದು ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ  “ಮರಣೋತ್ತರ ಪರಿಹಾರದ ಬದಲು ಆತ್ಮಹತ್ಯೆ ತಡೆಯಿರಿ. ರೈತರಿಗೆ ಕಿರುಕುಳ ನೀಡುವ ಬ್ಯಾಂಕ್‌ಗಳಿಗೆ ಕಡಿವಾಣ ಹಾಕಿ’ ಎಂದು ತಮಿಳುನಾಡು ಸರಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next