Advertisement

ಪಿಡಿಒಗಳ ಭ್ರಷ್ಟಾಚಾರಕ್ಕೆ ತಡೆ ಹಾಕಿ

05:06 AM Jun 14, 2020 | Team Udayavani |

ಪಿರಿಯಾಪಟ್ಟಣ: ತಾಲೂಕಿನಲ್ಲಿ ಕೆಲ ಪಿಡಿಒಗಳು ಭ್ರಷ್ಟಾಚಾರದಲ್ಲಿ ತೊಡ ಗಿದ್ದು, ಅದನ್ನು ನಿಯಂತ್ರಿಸಲು ತಾಪಂ ಇಒ ವಿಫ‌ಲರಾಗಿದ್ದಾರೆ ಎಂದು ಶಾಸಕ ಮಹದೇವ್‌ ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಕೆಡಿಪಿ ಸಭೆಯಲ್ಲಿ  ಮಾತನಾಡಿದರು.

Advertisement

ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಲು ಪಿಡಿಒಗಳು ಕನಿಷ್ಠ 10ರಿಂದ 25 ಸಾವಿರದವರೆಗೂ ಲಂಚ ಪಡೆಯುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ನೀವೇನು ಮಾಡುತ್ತಿದ್ದೀರಿ  ಎಂದು ತಾಪಂ  ಇಒ ಶ್ರುತಿ ಅವರನ್ನು ಪ್ರಶ್ನಿಸಿದರು.

ತಾಲೂಕಾದ್ಯಂತ ಗ್ರಾಮ ಠಾಣಾ ಸ್ಥಳಗಳು, ಗೋಮಾಳ, ತಾಲೂಕಿನಲ್ಲಿ 156 ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಸಮರ್ಪಕ ವಿದ್ಯುತ್‌ ಪೂರೈಸ ಬೇಕು. ವಿದ್ಯುತ್‌ ಪರಿವರ್ತಕಗಳ  (ಟಿಸಿ) ದುರಸ್ತಿ ಕೇಂದ್ರವನ್ನು ಪಟ್ಟಣದಲ್ಲಿ ತೆರೆಯಲಾಗಿದ್ದರೂ ಇಲಾಖೆ ಅಧಿಕಾರಿಗಳು ದುರಸ್ತಿಗಾಗಿ ರೈತರನ್ನು ಕೆ.ಆರ್‌. ನಗರಕ್ಕೆ ಕಳುಹಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಮುಂದಿನ ದಿನ ಗಳಲ್ಲಿ ಅದು ಪುನರಾವರ್ತನೆ  ಆಗಬಾರದು ಎಂದು ಎಚ್ಚರಿಸಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ನಿರೂಪ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಜಿಪಂ ಸದಸ್ಯರಾದ ರಾಜೇಂದ್ರ, ಜಯಕುಮಾರ್‌, ಮಂಜುನಾಥ್‌, ಮಣಿ, ಕೌಸಲ್ಯಾ, ತಹಶೀಲ್ದಾರ್‌ ಶ್ವೇತಾ ಹಾಗೂ ವಿವಿಧ  ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next