ಬೆಂಗಳೂರು: ಪ್ರತಿಷ್ಠಿತ ಡ್ಯೂ ಕಾಟಿ ಕಂಪನಿಯ ಬೈಕ್‌ಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಿದ ವಿಎಸ್‌ಟಿ ಬೈಕ್ ಶೋ ರೂಂನ ಆಪರೇಷನ್ ಮುಖ್ಯಸ್ಥನನ್ನು ವಿವೇಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಗುಂಟೂರು ಜಿಲ್ಲೆ ಮೂಲದ ರಾಕೇಶ್(36) ಬಂಧಿತ. ಆರೋಪಿಯಿಂದ 2.32 ಕೋಟಿ ರೂ. ಮೌಲ್ಯದ 10 ಡ್ನೂಕಾಟಿ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ರಾಕೇಶ್ 5 ವರ್ಷಗಳ ಹಿಂದೆ ವಿಎಸ್‌ಟಿ ಡ್ಯೂಕಾಟಿ ಬೈಕ್ ಶೋ ರೂಂನಲ್ಲಿ ಆಪರೇಷನ್ ಹೆಡ್ ಆಗಿದ್ದ. ಈ ವೇಳೆ ಕಂಪನಿ ಗಮನಕ್ಕೆ ಬಾರದಂತೆ “ಆಫೀಸ್ ಸ್ಪೆಷಾಲಿಟಿ ಸಪ್ಲೈ’ ಹೆಸರಿನಲ್ಲಿ ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದ. ಬಳಿಕ ಬೈಕ್ ಖರೀದಿ ಮತ್ತು ಹಳೇ ಬೈಕ್‌ಗಳ ಎಕ್ಸ್‌ಚೇಂಜ್‌ಗೆ ಬರುತ್ತಿದ್ದ ಗ್ರಾಹಕರಿಗೆ ರಿಯಾಯ್ತಿ ನೆಪದಲ್ಲಿ ಹೆಚ್ಚು ಬೈಕ್‌ಗಳ ಮಾರಾಟ ಮಾಡಿದ್ದಾನೆ. ಖರೀದಿದಾರ ಹಣವನ್ನು ತನ್ನ ಬೇನಾಮಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದ. ಇದೇ ರೀತಿ 21 ಹೈ ಎಂಡ್ ಡ್ನೂಕಾಟಿ ಬೈಕ್‌ಗಳನ್ನು ಮಾರಾಟ ಮಾಡಿ ಅದರಿಂದ ಕಂಪನಿಗೆ ಸೇರಿದ 5.15 ಕೋಟಿ ರೂ.ಅನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ.
ಕೋಟ್ಯಂತರ ರೂ. ವಂಚಿಸಿದ ಬಳಿಕ ಆರೋಪಿ ಅ.20ರಂದು ಕುಟುಂಬ ಸದಸ್ಯರೊಬ್ಬರಿಗೆ ಅನಾರೋಗ್ಯ ಕಾರಣ ನೀಡಿದ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ನಂತರ ಶೋ ರೂಮ್ ನಲ್ಲಿ ಲೆಕ್ಕಪರಿಶೋಧನೆ ನಡೆಸಿದಾಗ ಆರೋಪಿ ಕಂಪನಿಗೆ ಸೇರಿದ 5.15 ಕೋಟಿ ರೂ. ಮೌಲ್ಯದ 21 ಬೈಕ್‌ಗಳನ್ನು ಮಾರಿ, ಪೂರ್ಣ ಹಣವನ್ನು ತನ್ನ ಖಾತೆಗೆ ಹಾಕಿಕೊಂಡಿರುವುದು ಗೊತ್ತಾಗಿತ್ತು.
ಈ ಸಂಬಂಧ ವಿಎಸ್‌ಟಿ ಡ್ಯೂಕಾಟಿ ಕಂಪನಿಯ ಎಚ್.ಆರ್.ಮ್ಯಾನೆಜರ್ ಸಿ.ಎನ್.ಮಹೇಶ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಕಂಪನಿಯಿಂದಲೂ ವಂಚನೆ!:
ಪ್ರಕರಣದ ತನಿಖೆಯಲ್ಲಿ 2020ರ ನಂತರ ಭಾರತದಲ್ಲಿ ಬಿಎಸ್4(ಎಮಿಷನ್ ನಾರ್ಮಸ್) ವಾಹನಗಳ ನೋಂದಣಿ ನಿಷೇಧಿಸಲಾಗಿದೆ. ಆದರೂ, ವಿಎಸ್‌ಟಿ ಮತ್ತು ಸನ್ಸ್ ಕಂಪನಿ ಆರೋಪಿಯ ಮೂಲಕ ಹಲವು ವಾಹನಗಳನ್ನು ಅಕ್ರಮವಾಗಿ ಅರುಣಾಚಲ ಪ್ರದೇಶದ ಕುರೂಂಗ್ ಕುಮ್ಮಿ ಆರ್‌ಟಿಒ ಕಚೇರಿಯಲ್ಲಿ ನೋಂದಾಯಿಸಿಕೊಂಡಿರು ವುದು ಕಂಡು ಬಂದಿದೆ. ದೂರುದಾರ ಮಹೇಶ್ ನೀಡಿರುವ 21 ಬೈಕ್‌ಗಳ ಪೈಕಿ 5 ಬೈಕ್‌ಗಳು ಬಿಎಸ್4 ವಾಹನಗಳು ಇರುವುದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.