Advertisement

Old Goa ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್‍ಗೆ ರಾಷ್ಟ್ರಪತಿ ಭೇಟಿ

06:06 PM Aug 24, 2023 | Team Udayavani |

ಪಣಜಿ: ಮೂರು ದಿನಗಳ ಗೋವಾ ಪ್ರವಾಸದಲ್ಲಿರುವ  ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ಪ್ರವಾಸ ಮುಗಿಸಿ ದೆಹಲಿಗೆ ತೆರಳಿದರು. ಇದಕ್ಕೂ ಮುನ್ನ ಅವರು ಓಲ್ಡ್ ಗೋವಾದ ಬೆಸಿಲಿಕಾ ಆಫ್ ಬೊಮ್ ಜೀಸಸ್ ಚರ್ಚ್‍ಗೆ ಭೇಟಿ ನೀಡಿದರು.

Advertisement

ಹಳೆಯ ಗೋವಾದ ಈ ಚರ್ಚ್ ಜಗತ್ಪ್ರಸಿದ್ಧಿ ಪಡೆದಿದ್ದು, ರಾಷ್ಟ್ರಪತಿಗಳು ಈ ಚರ್ಚ್‍ಗೆ ಭೇಟಿ ನೀಡಿ ವಸ್ತುಸಂಗ್ರಹಾಲಯವನ್ನು ಪರಿಶೀಲಿಸಿದರು. ಈ ಭೇಟಿಯ ಬಗ್ಗೆ ತಮ್ಮದೇ ಪ್ರತಿಕ್ರಿಯೆಯನ್ನೂ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಗೋವಾ  ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್, ಶಾಸಕ ರಾಜೇಶ್ ಫಲ್ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ರಾಜಭವನದಲ್ಲಿ ದೇಶದ ಪ್ರಥಮ ಮಹಿಳೆ ದ್ರೌಪದಿ ಮುರ್ಮು ಅವರನ್ನು ಸನ್ಮಾನಿಸಲಾಯಿತು. ರಾಜ್ಯಪಾಲರ ಪತ್ನಿ ರೀಟಾ ಎಸ್. ಪಿಳ್ಳೈ  ರವರು ರಾಷ್ಟ್ರಪತಿಗಳಿಗೆ  ಸೀರೆ, ಸ್ವಾಮಿ ವಿವೇಕಾನಂದರ ಭಾವಚಿತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next