Advertisement

ಬಾಲ್ಯವಿವಾಹ ತಡೆ ಕಾಯ್ದೆಗೆ ರಾಷ್ಟ್ರಪತಿ ಅಂಕಿತದ ಬಲ: ಸಚಿವೆ

11:02 AM Jun 20, 2017 | Harsha Rao |

ವಿಧಾನಪರಿಷತ್ತು: ಬಾಲ್ಯ ವಿವಾಹ ತಡೆ ತಿದ್ದುಪಡಿ ಕಾಯ್ದೆಗೆ ಇತ್ತೀಚಿಗಷ್ಟೇ ರಾಷ್ಟ್ರಪತಿಯವರು ಅಂಕಿತ ಹಾಕಿದ್ದು,
ಇದರಿಂದ ಈ ಅನಿಷ್ಟ ಸಾಮಾಜಿಕ ಪಿಡುಗು ದೂರ ಮಾಡುವ ಸರ್ಕಾರದ ಪ್ರಯತ್ನಗಳಿಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

Advertisement

ಮಕ್ಕಳ ಹಕ್ಕುಗಳ ಬಗ್ಗೆ ಮೇಲ್ಮನೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವರು, ಈ ಹಿಂದಿನ
ಕಾಯ್ದೆಯಲ್ಲಿ ಬಾಲ್ಯ ವಿವಾಹದಲ್ಲಿ ತೊಡಗಿ ಸಿಕೊಂಡವರು, ಪ್ರೋತ್ಸಾಹಿಸಿದವರಿಗೆ 1 ವರ್ಷ ಸಾಧಾರಣ ಶಿಕ್ಷೆ ಇತ್ತು.
ತಿದ್ದುಪಡಿ ಕಾಯ್ದೆಯಲ್ಲಿ ಅದನ್ನು 2 ವರ್ಷದವರೆಗೆ ವಿಸ್ತರಿಸಿ ಕಠಿಣ ಶಿಕ್ಷೆಗೆ ಅವಕಾಶವಿದೆ. ಅಲ್ಲದೇ ಸ್ವಯಂಪ್ರೇರಿತ
ದೂರು ದಾಖಲಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡಲಾಗಿದೆ ಎಂದರು.

ಮಕ್ಕಳು ದೇವರ ಸಮಾನ ಎಂದು ಹೇಳಲಾಗುತ್ತದೆ. ಅದರಂತೆ ನಮ್ಮ ಸರ್ಕಾರ ಮಕ್ಕಳ ರಕ್ಷಣೆಯನ್ನು ದೇವರ
ಕೆಲಸಕ್ಕೆ ಸಮ ಎಂಬ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆ, ಮಕ್ಕಳ ಶೋಷಣೆ, ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಭಿಕ್ಷಾಟನೆಗೆ ಮಕ್ಕಳನ್ನು ಬಳಸಿಕೊಳ್ಳುವುದು, ಮಕ್ಕಳ ಕಳ್ಳ ಸಾಗಾಟ, ದೇವದಾಸಿ ಪದ್ಧತಿ ನಿರ್ಮೂಲನೆ ಮುಂತಾದ ವಿಷಯಗಳ ಬಗ್ಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಬೇಕಾದ ಹಣವನ್ನು ಸಹ ಮುಖ್ಯಮಂತ್ರಿ ನೀಡಿದ್ದಾರೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯ ಯಾವ ಪ್ರಕರಣವನ್ನೂ
ಸರ್ಕಾರ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಸಚಿವೆ ಉಮಾಶ್ರೀ ತಿಳಿಸಿದರು. ಮಕ್ಕಳ ಹಕ್ಕುಗಳ ಬಗ್ಗೆ ಇರುವ ಎಲ್ಲ
ಕಾನೂನುಗಳನ್ನು ಒಂದೇ ಕಡೆ ಸೇರಿಸಿ ಕೈಪಿಡಿ ಮಾಡಿ ಶಾಲೆಗಳಲ್ಲಿ ಮಕ್ಕಳಿಗೆ ಹಂಚುವ ಬಗ್ಗೆ ಬಿಜೆಪಿ ಕ್ಯಾ. ಗಣೇಶ್‌
ಕಾರ್ಣಿಕ್‌ ಸಲಹೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next