Advertisement

ಲೋಕಾಯುಕ್ತ ಡಿವೈಎಸ್ಪಿ ಕಡಬದ ಪ್ರಮೋದ್‌ಗೆ ರಾಷ್ಟ್ರಪತಿ ಪದಕ

10:09 AM Jan 27, 2023 | Team Udayavani |

ಕಡಬ: ಬೆಂಗಳೂರಿನ ಲೋಕಾಯುಕ್ತ ಡಿವೈಎಸ್ಪಿಯಾಗಿರುವ ಕೋಡಿಂಬಾಳ ಗ್ರಾಮದ ಬೆದ್ರಾಜೆಯ ಪ್ರಮೋದ್‌ ಕುಮಾರ್‌ ಅವರು 2023ನೇ ಸಾಲಿನ ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ.

Advertisement

ಕೋಡಿಂಬಾಳ ಗ್ರಾಮದ ಬೆದ್ರಾಜೆ ಲೋಕಾಯುಕ್ತ ಡಿವೈಎಸ್ಪಿ ಕಡಬದ ಪ್ರಮೋದ್‌ಗೆ ರಾಷ್ಟ್ರ ಪತಿ ಪದಕ ನಿವಾಸಿ ರವಿರಾಜ ಆರಿಗ, ಭಾಗ್ಯವತಿ ದಂಪತಿಯ ಪುತ್ರರಾಗಿರುವ ಪ್ರಮೋದ್‌ 2001ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದು, 2008 ರಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಭಡ್ತಿ ಹೊಂದಿದ್ದರು.

2021ರಲ್ಲಿ ಡಿವೈಎಸ್ಪಿಯಾಗಿ ಭಡ್ತಿ ಹೊಂದಿ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಪ್ರಸ್ತುತ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016 ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿದ್ದರು.

ಪ್ರಮೋದ್‌ ಅವರು ಪಿಎಸ್‌ಐ ಆಗಿ ನಂಜನಗೂಡು, ಅರಕಲಗೋಡು, ಮಡಿಕೇರಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿ ಚಿಕ್ಕಬಳ್ಳಾಪುರ, ನಂಜನಗೂಡು, ಬೆಂಗಳೂರು ನಗರ, ಗುಂಡ್ಲು ಪೇಟೆ, ಸಿಐಡಿ ಹೈಕೋರ್ಟ್‌, ಅಂಕೋಲಾಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಡಬದಲ್ಲಿ ಪದವಿ ಶಿಕ್ಷಣವನ್ನು ಉಜಿರೆಯ ಸಿದ್ಧವನ ಗುರು ಕುಲದಲ್ಲಿದ್ದುಕೊಂಡು ಎಸ್‌ ಡಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಪುರಸ್ಕಾರ ಪ್ರದಾನದ ದಿನಾಂಕ, ಸ್ಥಳ ಇತ್ಯಾದಿ ಇನ್ನಷ್ಟೇ ತೀರ್ಮಾನ ಆಗಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next