Advertisement

ಏರುತ್ತಿದೆ ಸೆಕೆ; 40 ಡಿ.ಸೆ. ಸನಿಹಕ್ಕೆ ತಾಪಮಾನ: ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ !

12:49 AM Apr 06, 2024 | Team Udayavani |

ಮಂಗಳೂರು: ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ 39.9 ಡಿ.ಸೆ. ಮತ್ತು ಉಡುಪಿ ಜಿಲ್ಲೆಯ ಅಜೆಕಾರಿನಲ್ಲಿ 39.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ದಾಖಲೆಯ ಉಷ್ಣಾಂಶ.

Advertisement

ಕಳೆದ ಕೆಲವು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ 1 ರಿಂದ 2 ಡಿ.ಸೆ. ತಾಪಮಾನ ಏರಿಕೆ ಕಾಣುತ್ತಿದೆ. ಕೆಲವು ಕಡೆಗಳಲ್ಲಿ ಸರಾಸರಿ 35ರಿಂದ 36 ಡಿ.ಸೆ. ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಎ.10ರಿಂದ ಮಳೆಯ ಮುನ್ಸೂಚನೆ
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಮುನ್ಸೂಚನೆಯ ಪ್ರಕಾರ ಎ. 10ರ ಬಳಿಕ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸೂಚನೆ
ಬಿಸಿಲ ಬೇಗೆಯಿಂದ ತಪ್ಪಿಸಲು ದ.ಕ. ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಕೆಲವೊಂದು ಸೂಚನೆಗಳನ್ನು ಪ್ರಕಟಿಸಿದೆ. ಅದರಂತೆ ಆಯಾಸವಾದಾಗ ಮಾತ್ರವಲ್ಲ, ಆಗಾಗ ನೀರು ಕುಡಿಯುತ್ತಲೇ ಇರಬೇಕು, ನೀರಿನಂತಿರುವ ಕಲ್ಲಂಗಡಿ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಅನಾನಸ್‌ ಹಣ್ಣುಗಳನ್ನು ಸೇವಿಸಿ ಎಂದು ತಿಳಿಸಿದೆ. ನೀರಿನ ಅಂಶವುಳ್ಳ ಆಹಾರಗಳನ್ನು ಸೇವನೆ ಮಾಡಿ, ಮನೆಯಿಂದ ಹೊರಗಡೆ ಕಾಲಿಡುವಾಗ ತಲೆಗೆ ಕ್ಯಾಪ್‌ ಧರಿಸುವುದು ಒಳ್ಳೆಯದು, ಬೇಸಗೆ ಸಮಯದಲ್ಲಿ ಸಡಿಲ ಉಡುಪುಗಳನ್ನು ಧರಿಸುವುದು ಸೂಕ್ತ, ಬಿಸಿಲಿಗೆ ಬರಿಗಾಲಿನಲ್ಲಿ ನಡೆಯು
ವುದನ್ನು ನಿಲ್ಲಿಸಿ, ಚಪ್ಪಲಿ ಅಥವಾ ಶೂ ಧರಿಸಿ ಎಂದು ಹೇಳಲಾಗಿದೆ. ಮಕ್ಕಳ ಆರೋಗ್ಯದ ಮೇಲೆ ಬೇಸಗೆಯ ಹವಾಮಾನ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು. ಮಕ್ಕಳಲ್ಲಿ ನಿರ್ಜಲೀಕರಣ ತಪ್ಪಿಸಲು ಪ್ರತೀ ದಿನ 2ರಿಂದ 3 ಲೀಟರ್‌ ನೀರನ್ನು ಆಯಾ ಆಯಸ್ಸಿಗೆ ಅನುಗುಣವಾಗಿ ನೀಡಬೇಕು. ನಲ್ಲಿ ಜ್ವರ, ಶೀತ, ತಲೆನೋವು, ಬೊಕ್ಕೆಗಳು ಕಾಣಿಸಿಕೊಂಡಲ್ಲಿ ನುರಿತ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next