ಬೆಂಗಳೂರು: ಈ ಸಾಲಿನ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ ಮೂವರು ಹಿರಿಯ ಐಪಿಸ್ ಅಧಿಕಾರಿಗಳು ಸಹಿತ 20 ಮಂದಿ ಭಾಜನರಾಗಿದ್ದಾರೆ.
ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ-ಕೆಎಸ್‌ಆರ್‌ಪಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಸಂಪರ್ಕ ಮತ್ತು ಸಂವಹನ ಹಾಗೂ ಆಧುನೀಕರಣ ಎಡಿಜಿಪಿ ಎಸ್.ಮುರುಗನ್ ಅವರಿಗೆ ಲಭಿಸಿದೆ.
ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಹಾಗೂ ಸಿಐಡಿ ಎಸ್ಪಿ ರಾಘವೇಂದ್ರ ಕೆ. ಹೆಗ್ಡೆ, ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್ಪಿ ಬಿ.ಎಸ್.ಮೋಹನ್ ಕುಮಾರ್, ಬೆಂಗಳೂರು ವಿ.ವಿ.ಪುರ ಉಪವಿಭಾಗದ ಎಸಿಪಿ ಜಿ.ನಾಗರಾಜ, ಮೈಸೂರು ಕೆಪಿಎ ಸಹಾಯಕ ನಿರ್ದೇಶಕ ಎಂ.ಶಿವಶಂಕರ್, ಸಿಐಡಿ ಡಿವೈಎಸ್ಪಿ ಜಿ. ಕೇಶವಮೂರ್ತಿ,ಪೊಲೀಸ್ ಪ್ರಧಾನ ಕಚೇರಿ ಎಸಿಪಿ ಎಚ್.ಎಸ್.ಜಗದೀಶ್, ಸಿಐಡಿ ಡಿವೈಎಸ್ಪಿ ಎಂ.ಎನ್. ನಾಗರಾಜ, ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ.ಗಿರೀಶ್, ಸಿಐಡಿ ಡಿವೈಎಸ್ಪಿ ಬಿ.ಎನ್.ಶ್ರೀನಿವಾಸ, ಡಿವೈಎಸ್ಪಿ ಅಂಜುಮಾಲಾ ಟಿ. ನಾಯ್ಕ, ಬೆಂಗಳೂರಿನ ಸದಾಶಿವ ನಗರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಆರ್.ಪಿ. ಅಶೋಕ್, ಬೆಂಗಳೂರು ಸಂಚಾರ ವಿಭಾಗದ ಇನ್‌ಸ್ಪೆಕ್ಟರ್ ಅನೀಲ್ ಕುಮಾರ್ ಪಿ.ಗ್ರಾಂಪುರೋಹಿತ್, ತಾವರೆಕೆರೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್, ಬೆಂಗಳೂರಿನ ಕೆಎಸ್‌ಆರ್‌ಪಿ 4ನೇ ಪಡೆಯ ಎಆರ್‌ಎಸ್‌ಐ ವಿ.ಬಂಗಾರು, ಉಡುಪಿ ಡಿಎಆರ್ ಎಎಚ್‌ಸಿ ಶಂಕರ್, ರಾಯಚೂರು ಡಿಪಿಒ ಎಎಚ್‌ಸಿ ಕೆ.ವೆಂಕಟೇಶ್, ಬೆಂಗಳೂರಿನ ಎಸ್‌ಸಿಆರ್‌ಬಿ ಎಎಚ್‌ಸಿ ಎಸ್.ಕುಮಾರ್ ರಾಷ್ಟ್ರಪತಿ ಪದಕಕ್ಕೆ ಭಾಜನರಾದವರು.