Advertisement

ರಾಷ್ಟ್ರಪತಿ ಚುನಾವಣೆ: ಬುಡಕಟ್ಟು ಜನಾಂಗದ ನಾಯಕಿ ಆಯ್ಕೆ

05:51 PM Jun 24, 2022 | Team Udayavani |

ಬಂಗಾರಪೇಟೆ: ರಾಷ್ಟ್ರಪತಿ ಚುನಾವಣೆಗೆ ಊಹೆ ಮಾಡದಂತಹ, ಬುಡಕಟ್ಟು ಜನಾಂಗದ ಎಸ್‌ಟಿ ಮಹಿಳೆಯನ್ನು ಬಿಜೆಪಿ ಘೋಷಣೆ ಮಾಡಿರು ವುದು ಸಂತಸ ತಂದಿದೆ. ಅವರು ಹೆಚ್ಚಿನ ಮತಗಳಿಂದ ಆಯ್ಕೆ ಆಗುವುದು ಖಚಿತ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಾವಹಳ್ಳಿ ಗ್ರಾಪಂನ ನೂತನ ಅಧ್ಯಕ್ಷೆ ಆಗಿ ಆಯ್ಕೆ ಆದ ಐತಾಂಡಹಳ್ಳಿ ಗ್ರಾಮದ ಸೀಮಾ ಸುಲ್ತಾನಾ ಅಮಜದ್‌ಖಾನ್‌ಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಬಿಜೆಪಿ ಜಾತ್ಯತೀತ, ವರ್ಗಾತೀತ, ಧರ್ಮಾತೀತವಾಗಿ ಪಕ್ಷವಾಗಿದ್ದು, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಅವಕಾಶಗಳು ಬಂದಾಗ ಎಲ್ಲರಿಗೂ ಸಮಾನವಾಗಿ ನೀಡುವ ಉದ್ದೇಶದಿಂದ ಅಧಿಕಾರ ವಿಕೇಂದ್ರಿಕರಣ ಮಾಡುತ್ತಿದೆ ಎಂದು
ಹೇಳಿದರು.

ಬಿಜೆಪಿಯಿಂದ ಸಾಮಾಜಿಕ ನ್ಯಾಯ: ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳು, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಿವೆ. ದೇಶದಲ್ಲಿ ಸ್ಪಷ್ಟ ಬಹುಮತ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ವೃಂದಕ್ಕೆ ಗೆಲುವು ಶತಸಿದ್ಧವಾಗಿದೆ ಎನ್ನುವುದು ಗೊತ್ತಿದ್ದರೂ ವಿರೋಧ ಪಕ್ಷಗಳು ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುತ್ತಿರುವುದು ಬಿಜೆಪಿ ಹಾಗೂ ಇದರ ಮಿತ್ರ ಪಕ್ಷಗಳಿಗೆ ಯಾವುದೇ ತೊಂದರೆ ಇಲ್ಲ.

ಸಮಾಜದ ಕಟ್ಟಕಡೆ ವ್ಯಕ್ತಿಗೆ ದೇಶದ ಮುಂಚೂಣಿಯ ರಾಷ್ಟ್ರಪತಿ ಸ್ಥಾನ ನೀಡುವುದು ನಿಜಕ್ಕೂ ಬಿಜೆಪಿಯಿಂದ ಸಾಮಾಜಿಕ ನ್ಯಾಯ ಸಿಗುತ್ತಿದೆ ಎಂಬುದಕ್ಕೆ ಉದಾಹರಣೆ ಎಂದು ವಿವರಿಸಿದರು.

ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ: ಮಾವಹಳ್ಳಿ ಗ್ರಾಪಂನ ಬಿಜೆಪಿ ಬೆಂಬಲಿತ 12 ಸದಸ್ಯರ ಸಹಕಾರದಿಂದ ಈ ಹಿಂದೆ ನೀಡಿದ್ದ ಮಾತಿನಂತೆ ಸೀಮಾ ಸುಲ್ತಾನರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಇದ್ದಂತಹ ಅಧ್ಯಕ್ಷೆ ಶಶಿಕಲಾ ರಾಮಾಂಜಿ ಅವರ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಜೊತೆಗೆ ಸುಸಜ್ಜಿತ ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ. ಇದೇ ರೀತಿ ನೂತನ ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು
ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಜಿಪಂ ಮಾಜಿ ಸದಸ್ಯ ಎಂ.ಪಿ.ಶ್ರೀನಿವಾಸಗೌಡ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ.ಅಮರೇಶ್‌, ಉಪಾಧ್ಯಕ್ಷ ಬಿ.ಹೊಸರಾಯಪ್ಪ, ಮಾವಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಅಶ್ವಥನಾರಾಯಣಗೌಡ, ಉಪಾಧ್ಯಕ್ಷೆ ಎನ್‌. ರಾಧಾ ಮುನಿರಾಜು, ಮಾಜಿ ಅಧ್ಯಕ್ಷೆ ಶಶಿಕಲಾ ರಾಮಾಂಜಿ, ಮೆಹಬೂಬ್‌ಖಾನ್‌, ಸದಸ್ಯರಾದ ಜಯಮ್ಮ ಮುನಿಶಾಮಗೌಡ, ಐತಾಂಡಹಳ್ಳಿ ಸುರೇಶ್‌, ಗೀತಾ ವೆಂಕಟೇಶ್‌, ವಾದಾಂಡ ಹಳ್ಳಿ ಮಂಜುನಾಥ್‌, ವೇಣುಗೋಪಾಲಪುರ ನಾಗವೇಣಿ ಚಂದ್ರಪ್ಪ, ನಾಯಕರಹಳ್ಳಿ ಮುನಿರತ್ನಮ್ಮ, ಶಿವಾನಂದ್‌, ಚಳಗಾನಹಳ್ಳಿ ಮುನಿವೆಂಕಟಮ್ಮ ಗೋಪಾಲಗೌಡ, ಮುಖಂಡರಾದ ಐತಾಂಡಹಳ್ಳಿ ನಾರಾಯಣಪ್ಪ,
ಬಸವರಾಜು, ಅಂಗಡಿ ನಾರಾಯಣಪ್ಪ, ಚಲಗಾನ ಹಳ್ಳಿ ಬಾಲಕೃಷ್ಣ ಮುಂತಾದವರಿದ್ದರು. ಚುನಾವಣಾಧಿಕಾರಿ ಆಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಸೀಪುಲ್ಲಾ ಕಾರ್ಯ ನಿರ್ವಹಿಸಿದರು. ಪಿಡಿಒ ಕೆ.ಎಸ್‌. ದಿವ್ಯಾ, ಕಾರ್ಯದರ್ಶಿ ಶ್ರೀನಿವಾಸ್‌, ಸಿಬ್ಬಂದಿ ಪುನೀತ್‌ಕುಮಾರ್‌, ಶ್ರೀನಿವಾಸ್‌, ಸ್ವಾತಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next