ನವದೆಹಲಿ: ಮುಂದಿನ ತಿಂಗಳ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್ ಸಿನ್ಹಾ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಎನ್‌ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಪ್ರತಿಪಕ್ಷಗಳ ಹಲವು ಮುಖಂಡರು ಈ ಸಂದರ್ಭದಲ್ಲಿ ಇರಲಿದ್ದಾರೆ.
ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಜೂ.24ರಂದು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯ ಬಗ್ಗೆ ಸಿನ್ಹಾ ಅವರು ಭಾನುವಾರ ಮಾತನಾಡಿದ್ದು, “ಈ ಚುನಾವಣೆಯು ನನಗೆ ಅತ್ಯಂತ ಮಹತ್ವದ್ದಾಗಿದೆ’ ಎಂದಿದ್ದಾರೆ.
ಪುತ್ರ ಜಯಂತ್ ಸಿನ್ಹಾ ಬೆಂಬಲ ಸಿಗದಿರುವುದರ ಬಗ್ಗೆಯೂ ಮಾತನಾಡಿರುವ ಯಶವಂತ್ ಸಿನ್ಹಾ, “ನನಗೆ ಪುತ್ರನ ಬೆಂಬಲಿವಿಲ್ಲವೆಂದು ಧರ್ಮ ಸಂಕಟವೇನಿಲ್ಲ. ಅವನು ರಾಜ ಧರ್ಮ ಅನುಸರಿಸಿದರೆ ನಾನು ರಾಷ್ಟ್ರ ಧರ್ಮ ಅನುಸರಿಸುತ್ತೇನೆ’ ಎಂದಿದ್ದಾರೆ.