Advertisement

ರಂಗೇರಿದ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ

07:04 PM Dec 26, 2020 | Adarsha |

ದೇವದುರ್ಗ: ಗ್ರಾಪಂ ಚುನಾವಣೆ ಮತದಾನ ಮುಗಿದು ಗೆಲುವು- ಸೋಲಿನ ಲೆಕ್ಕಾಚಾರ ಶುರುವಾದರೆ ಮೊತ್ತೂಂದೆಡೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಪಟ್ಟಣದ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಡಿ.29ರಂದು ಮತದಾನ ನಡೆಯಲಿದ್ದು, ಅಂದು ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.

Advertisement

12 ಶಿಕ್ಷಕರು ಮತ್ತು 6 ಶಿಕ್ಷಕಿಯರು ಸೇರಿದಂತೆ 18 ಜನರು ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಅವಿರೋಧ ಆಯ್ಕೆ: ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಸಾಮಾನ್ಯ ಕ್ಷೇತ್ರದಿಂದ ಕೆಲ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಉಪಾಧ್ಯಕ್ಷ ಸ್ಥಾನವಿದ್ದು, ಅದರಲ್ಲಿ ಕವಿತಾ ಕೆ. ಎಂಬುವವರು ಅವಿರೋಧ ಆಯ್ಕೆಯಾಗಿದ್ದಾರೆ. ಸಂಘಟನೆ ಕಾರ್ಯದರ್ಶಿ ಶಾಂತಮೂರ್ತಿ ಹೊನ್ನಪ್ಪ, ಸಹ ಕಾರ್ಯದರ್ಶಿ ಭಾಗ್ಯ ಅವಿರೋಧವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ.

ಎರಡು ಪೆನಲ್‌ ಮಧ್ಯೆ ಉಳಿದ  ಸ್ಥಾನಗಳಿಗೆ ಭಾರಿ ಪೈಪೋಟಿ ಏರ್ಪಟ್ಟಿದೆ. ತೀವ್ರ ಪೈಪೋಟಿ: ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಪೆನಲ್‌ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ವಿರುಪನಗೌಡ, ಪ್ರಕಾಶ ಹೊನ್ನಟಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ರೇಣುಕಾ ಕೆ. ಸರಸ್ವತಿ ನಾಮಪತ್ರ ಸಲ್ಲಿಸಿದ್ದು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಗಂಗಾರೆಡ್ಡಿ, ದೇವರಾಜ ಕೆ.ಎಚ್‌., ಖಜಾಂಚಿ ಲೋಕೇಶ ಶಿವಣಗಿ, ಬಸಯ್ಯ, ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ದಾನಮ್ಮ ಬಿರಾದಾರ, ತಸ್ಲಿà ಮುನ್ನಿಸಾ ಬೇಗಂ ನಾಮಪತ್ರ ಸಲ್ಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ವಿರುಪನಗೌಡ, ಪ್ರಕಾಶ ಹೊನ್ನಟಗಿ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಪ್ರಕಾಶ ಹೊನ್ನಟಗಿ ಪರ ಬ್ಯಾಟಿಂಗ್‌ ಮಾಡಲು ಸದಸ್ಯರು ಒಳಗೊಳಗೆ ತಂತ್ರ ನಡೆಸಿದ್ದಾರೆ. ಜಾತಿ ಲೆಕ್ಕಾಚಾರ: ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ತೀವ್ರತೆ ಪಡೆದಿದೆ. ಎಸ್‌ಸಿ ಸದಸ್ಯರು 5 ಜನ, ಎಸ್‌ಟಿ 3 ಜನ, ಉಳಿದವರು ಸಾಮಾನ್ಯ ಜಾತಿಯವರು.

ಈ ಹಿಂದೆ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ವಿರುಪನಗೌಡ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಹಿಂದೇಟು ಹಾಕಿದ ಕಾರಣ ಇದೀಗ ಅಸಮಾಧಾನದ ಕೂಗು ಹೇಳಿಬರುತ್ತಿದೆ. ಚುನಾವಣೆಯಲ್ಲಿ ಮತ ಸೆಳೆಯಲು ಅಭ್ಯರ್ಥಿಗಳು ನಾನಾ ತಂತ್ರ ಹೆಣೆಯುತ್ತಿದ್ದಾರೆ.

Advertisement

ಎರಡು ಪೆನಲ್‌ ಮಧ್ಯ ಒಮ್ಮತದ ಅಭಿಪ್ರಾಯ ಮೂಡುತ್ತಿಲ್ಲ. ಮತ ಚಲಾಯಿಸುವ ಬಹುತೇಕರ ಶಿಕ್ಷಕರೇ ಗೊಂದಲಕ್ಕೆ ಬಿದ್ದಿದ್ದಾರೆ. ಕಾಣದ ಕೈಗಳು ಒಂದಿಲ್ಲೊಂದು ತಂತ್ರ ರೂಪಿಸಿದರು ಮತದಾರರು ಗುಟ್ಟು ಬಿಡದಂತಾಗಿದೆ.

ಪಟ್ಟಣದ ಬಾಲಕಿಯರ ಪ.ಪೂ ಕಾಲೇಜಿನಲ್ಲಿ ಡಿ.29ರಂದು ನಡೆಯುವ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪ ರ್ಧಿಸಿರುವ ಅಭ್ಯರ್ಥಿಗಳಿಗೆ ಆಯ್ಕೆಗೊಂಡ 18 ಸದಸ್ಯರು ಮತದಾನ ಮಾಡಲಿದ್ದಾರೆ. ಶಾಲಾ ಶಿಕ್ಷಕರ ಸಂಘದ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಒಮ್ಮತದ ಅಭಿಪ್ರಾಯದೊಂದಿಗೆ ಆಯ್ಕೆ ಪ್ರಕಿಯೆ ನಡೆಯಬೇಕಾದ ಸ್ಥಾನಗಳು ಇದೀಗ ಬೀದಿ ರಂಪಾಟಕ್ಕೆ ಬಂದು ನಿಂತಿದೆ.

ಡಿ.29ರಂದು ನಡೆಯಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಲಾಗಿದ್ದು, ಮತದಾನ ನಂತರ ಸಂಜೆ ಮತ ಎಣಿಕೆ ನಡೆಯಲಿದೆ.

ಗರುಡುವಾಹನ್‌, ಚುನಾವಣಾಧಿಕಾರಿ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next