Advertisement

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

11:49 PM Sep 25, 2022 | Team Udayavani |

ಇಂದಿನಿಂದ ದೇಶಾದ್ಯಂತ ನವರಾತ್ರಿಯ ಸಂಭ್ರಮ. ಜಗದ್ವಿಖ್ಯಾತ ಮೈಸೂರು ದಸರೆಗೆ ಸೋಮವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ದುಷ್ಟ ನಿಗ್ರಹ; ಶಿಷ್ಟ ರಕ್ಷಣೆಯ ಹಿನ್ನೆಲೆ ಇರುವ ನವರಾತ್ರಿಯ ಒಂಬತ್ತು ದಿನಗಳಲ್ಲಿ ರಾಜ್ಯಾದ್ಯಂತ ವಿವಿಧ ಅರ್ಥಪೂರ್ಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ ಕಳೆಗಟ್ಟಲಿದೆ.

Advertisement

ಮೈಸೂರು: ಈ ಬಾರಿಯ ನಾಡಹಬ್ಬ ದಸರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯೇ ವಿಶೇಷ. ಇದೇ ಮೊದಲ ಬಾರಿಗೆ ದೇಶದ ಪ್ರಥಮ ಪ್ರಜೆ ದಸರೆಯ ಚಾಲನೆಗೆ ಆಗ ಮಿಸಲಿದ್ದಾರೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ಚಾಲನೆ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಪಾಲ ಥಾವರ್‌ ಚಂದ್‌ ಗೆಹ್ಲೋಟ್, ಮುಖ್ಯಮಂತ್ರಿ ಬೊಮ್ಮಾಯಿ ಸಾಥ್‌ ನೀಡಲಿದ್ದಾರೆ.

ದಸರೆಯ ವೈಭವದ ಇತರ ಕಾರ್ಯಕ್ರಮಗಳಾದ ಯುವ ದಸರಾ, ರೈತ ದಸರಾ, ಮಕ್ಕಳ ದಸರಾ, ದಸರಾ ವಸ್ತುಪ್ರದರ್ಶನ, ಆಹಾರ ಮೇಳ, ದಸರಾ ಕ್ರೀಡಾಕೂಟ, ದಸರಾ ಸಾಂಸ್ಕೃತಿಕ ಕಾರ್ಯ ಕ್ರಮ, ಫ‌ಲಪುಷ್ಪ ಪ್ರದರ್ಶನ ಸೇರಿದಂತೆ 20ಕ್ಕೂ ಹೆಚ್ಚು ಕಾರ್ಯಕ್ರಮಗಳು ಸೋಮವಾರವೇ ಆರಂಭವಾಗಲಿವೆ. ಅ. 5ರಂದು ವಿಜಯದಶಮಿ ನಡೆಯಲಿದ್ದು, ಅಂದು ಜಂಬೂಸವಾರಿ ನಡೆಯಲಿದೆ.

ರಾವಣನ ವಿರುದ್ಧ ಜಯದ ಸಂಭ್ರಮ
ಉತ್ತರ ಭಾರತದಲ್ಲಿ ದಸರೆಯ ಸಂದರ್ಭದಲ್ಲಿ ಶ್ರೀರಾಮನು ರಾವಣನ ವಿರುದ್ಧ ಜಯ ಸಾಧಿಸಿ, ಆತನನ್ನು ಸಂಹರಿಸಿ ಅಯೋಧ್ಯೆಗೆ ಆಗಮಿಸಿದ್ದನ್ನು ನೆನಪಿಸಿ ಉತ್ಸವ ಆಚರಿಸುತ್ತಾರೆ.

ಬಂಗಾಲದಲ್ಲಿ ಶಕ್ತಿ ಆರಾಧನೆ
ಪಶ್ಚಿಮ ಬಂಗಾಲದಲ್ಲಿ 9 ದಿನಗಳ ಕಾಲ ನಡೆಯುವ ದುರ್ಗಾಪೂಜೆಯೇ ದೇಶದ ಪ್ರಧಾನ ಆಕರ್ಷಣೆ. ಮಹಿಷಾಸುರನನ್ನು ದೇವಿಯು ಸಂಹರಿಸಿದ ಸಂಭ್ರಮದ ಕ್ಷಣವನ್ನು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ.

Advertisement

ಗಾರ್ಭಾ ವಿಶೇಷ
ಗುಜರಾತ್‌ನಲ್ಲಿ ಶಕ್ತಿ ದೇವತೆಯನ್ನು ಆರಾಧಿಸುತ್ತಾರೆ. ಮಹಿಳೆಯರು ಒಂಬತ್ತು ದಿನಗಳ ಕಾಲ ಉಪವಾಸ ಕೈಗೊಳ್ಳುತ್ತಾರೆ. ರಾತ್ರಿ ಗಾರ್ಭಾ ನೃತ್ಯ ಆಯೋಜನೆ ಮಾಡಲಾಗುತ್ತದೆ.

ದಕ್ಷಿಣ ಭಾರತದಲ್ಲಿ
ದಕ್ಷಿಣದ ರಾಜ್ಯಗಳಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಲಾಗುತ್ತದೆ. ಕರ್ನಾಟಕದಲ್ಲಿ ಬೊಂಬೆ ಹಬ್ಬ, ತಮಿಳುನಾಡಿನಲ್ಲಿ ಬೊಮ್ಮಯಿ ಕೋಲು, ಕೇರಳದಲ್ಲಿ ಬೊಮ್ಮ ಗೊಲ್ಲು, ಆಂಧ್ರಪ್ರದೇಶದಲ್ಲಿ ಬೊಮ್ಮಲ ಕೋಲುವು ಎಂದು ಕರೆಯಲಾಗುತ್ತದೆ.

ಮುಹೂರ್ತ
9.45ರಿಂದ 10.05ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ
ಪ್ರಮುಖ ಉಪಸ್ಥಿತಿ
ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕರಾವಳಿಯಲ್ಲಿ ಸಂಭ್ರಮದ ನವರಾತ್ರಿ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೇವಿ ದೇವಸ್ಥಾನಗಳ ಸಹಿತ ಎಲ್ಲೆಡೆ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ನವರಾತ್ರಿಗಾಗಿ ವಿವಿಧ ದೇವಾಲಯಗಳು ಸಜ್ಜುಗೊಂಡಿವೆ. ದಕ್ಷಿಣ ಕನ್ನಡದ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲುಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಉಡುಪಿ ಜಿಲ್ಲೆಯ ಕೊಲ್ಲೂರು, ಮಂದಾರ್ತಿ,ಕಡಿಯಾಳಿ, ಅಂಬ ಲ ಪಾಡಿ ಸಹಿತ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next