Advertisement

ರಾಷ್ಟ್ರಪತಿ ಚುನಾವಣೆ: ಮುರ್ಮು, ಸಿನ್ಹಾ ನಾಮಪತ್ರ ಸ್ವೀಕೃತ

11:15 PM Jun 30, 2022 | Team Udayavani |

ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು ಹಾಗೂ ಯಶವಂತ ಸಿನ್ಹಾ ಅವರ ನಾಮಪತ್ರಗಳು ನಿಯಮ ಬದ್ಧವಾಗಿದ್ದು, ಅವುಗಳು ಸ್ವೀಕೃತಗೊಂಡಿವೆ ಎಂದು ರಾಜ್ಯಸಭಾ ಕಾರ್ಯಾಲಯ ಮಾಹಿತಿ ನೀಡಿದೆ.

Advertisement

ಜು.18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಒಟ್ಟು 115 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 28 ಆರಂಭದಲ್ಲೇ ತಿರಸ್ಕೃತಗೊಂಡಿವೆ. ಜು.2ರಂದು ನಾಮಪತ್ರ ವಾಪಸ್‌ಗೆ ಕೊನೇ ದಿನಾಂಕವಾಗಿದ್ದು, ಅಂದು ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ರಾಜ್ಯಸಭಾ ಕಾರ್ಯದರ್ಶಿ, ಚುನಾವಣಾಧಿಕಾರಿ ಪಿ.ಸಿ.ಮೋದಿ ತಿಳಿಸಿದ್ದಾರೆ.

…………………………………………………………………………………………………………………………..

ಗುಹಾ ದೇಗುಲದಲ್ಲಿ ಸಿನ್ಹಾ ಪೂಜೆ :

ಶ್ರೀನಗರ: ಪ್ರಸಕ್ತ ಸಾಲಿನ ಅಮರನಾಥ ಯಾತ್ರೆ ಗುರುವಾರ ಆರಂಭ­ವಾಗಿದೆ. ಅದಕ್ಕೆ ಪೂರಕವಾಗಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಗುಹಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ಈ ಬಾರಿ ಶ್ರೀ ಅಮರನಾಥ ದೇಗುಲದ ಆಡಳಿತ ಮಂಡಳಿ ವೆಬ್‌ಸೈಟ್‌ನಲ್ಲಿಯೂ ಪೂಜೆಯ ನೇರ ಪ್ರಸಾರ ವೀಕ್ಷಿಸಲು ಅವಕಾಶ ಇದೆ. ಮೊದಲ ತಂಡದಲ್ಲಿ 2,750 ಮಂದಿ ಗುಹಾ ದೇವಾಲಯದತ್ತ ತೆರಳಿದ್ದಾರೆ. ಇನ್ನೊಂಡೆಗೆ ಜಮ್ಮುವಿನಿಂದ ಭಗವತೀ ನಗರ ಬೇಸ್‌ ಕ್ಯಾಂಪ್‌ಗೆ 5,700 ಮಂದಿ ಇರುವ ಎರಡನೇ ತಂಡವನ್ನೂ ಅಧಿಕಾರಿಗಳು ಬೀಳ್ಕೊಟ್ಟಿದ್ದಾರೆ. ದಾರಿಯುದ್ದಕ್ಕೂ ಯೋಧರ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next